Home
ಮೊಬೈಲ್

25 ವರ್ಷಗಳ ಬಳಿಕ Nokia 3210 4G ಬಿಡುಗಡೆ: ಬೆಲೆ ಮತ್ತು ಫೀಚರ್‌ ತಿಳಿಯಿರಿ

ಬರೋಬ್ಬರಿ 25 ವರ್ಷಗಳ ಬಳಿಕ Nokia ಕೂಲ್ ಫೋನ್ ಮಾರುಕಟ್ಟೆಗೆ ರೀ ಎಂಟ್ರಿ ಕೊಟ್ಟಿದೆ. HMD ಹೊಸ ಫೀಚರ್ ನೋಕಿಯಾ 3210 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು 1999ರ ಜನಪ್ರಿಯ Nokia 3210 ಫೀಚರ್ ಫೋನ್‌ನ ರಿಫ್ರೆಶ್ ಆವೃತ್ತಿಯಾಗಿದೆ. ಈ ಹೊಸ ವರ್ಷನ್‌ 4G ಸಂಪರ್ಕ, ಅಂತರ್ನಿರ್ಮಿತ UPI, 3.5mm ಆಡಿಯೋ ಜ್ಯಾಕ್ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ ಲಭ್ಯವಿದೆ. ಹಾಗಿದ್ರೆ, ಭಾರತದಲ್ಲಿ ಈ Nokia 3210 4G ಬೆಲೆ ಎಷ್ಟು? ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ? ಮತ್ತು ಲಭ್ಯತೆಯನ್ನು ತಿಳಿಯೋಣ ಬನ್ನಿ.

ಪ್ರಮುಖ ಅಂಶಗಳು

  • 25 ವರ್ಷಗಳ ನಂತರ Nokia 3210 4G ಭಾರತದಲ್ಲಿ ಬಿಡುಗಡೆಯಾಗಿದೆ
  • Nokia 3210 4G ಫೋನ್ ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಿದೆ.
  • ಇದು 2.4-ಇಂಚಿನ ಡಿಸ್ಪ್ಲೇ, ರೆಟ್ರೊ ವಿನ್ಯಾಸ, 2MP ಕ್ಯಾಮೆರಾ ಮತ್ತು ಇನ್ನಿತರೆ ಫೀಚರ್‌ಗಳನ್ನು ಒಳಗೊಂಡಿದೆ.

Nokia 3210 4G 2.4 ಇಂಚಿನ QVGA ಡಿಸ್ಪ್ಲೇಯನ್ನು ಹೊಂದಿದೆ. ಇದು Unisoc T107 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಫೋನ್ 64MB RAM ಮತ್ತು 128MB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು ಮೈಕ್ರೊ SD ಕಾರ್ಡ್ ಮೂಲಕ 32GB ವರೆಗೆ ಹೆಚ್ಚುವರಿ ಸ್ಟೋರೇಜ್ ವಿಸ್ತರಣೆ ಹೊಂದಿದೆ. ಇದು S30+ OS ಅನ್ನು ರನ್ ಮಾಡುತ್ತದೆ. 1,450 mAh ತೆಗೆಯಬಹುದಾದ ಬ್ಯಾಟರಿ ಬ್ಯಾಕಪ್ ಮತ್ತು ಇದು 9.8 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ.

25 ವರ್ಷಗಳ ಬಳಿಕ Nokia 3210 4G ಬಿಡುಗಡೆ: ಬೆಲೆ ಮತ್ತು ಫೀಚರ್‌ ತಿಳಿಯಿರಿ

62 ಗ್ರಾಂ ತೂಕ, 2 MP ಕ್ಯಾಮೆರಾ

ಈ Nokia 3210 4G ಸ್ಮಾರ್ಟ್‌ಫೋನ್ 13.14 ಮಿಮೀ ಅಳತೆ ಮತ್ತು 62 ಗ್ರಾಂ ತೂಕ ಹೊಂದಿದೆ. ಇಮೇಜಿಂಗ್‌ಗಾಗಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 2 ಮೆಗಾ ಫಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದೆ. Nokia 3210 4Gಯು ಯೂಟ್ಯೂಬ್, ಜನಪ್ರಿಯ ಸ್ನೇಕ್ ಗೇಮ್ ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಅನ್ನು ಸಹ ಒಳಗೊಂಡಿದೆ. ಸಂಪರ್ಕಕ್ಕಾಗಿ, ಇದು ಡ್ಯುಯಲ್-ಸಿಮ್, 4 ಜಿ, VoLTE ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ.

ಭಾರತದಲ್ಲಿ Nokia 3210 4G ಬೆಲೆ ಮತ್ತು ಲಭ್ಯತೆ

Nokia 3210 4G ಸ್ಮಾರ್ಟ್‌ಫೋನ್ ಬೆಲೆ 3,999 ರೂ. ಇದೆ. ಈ ಫೋನ್ ಇದೀಗ Amazon ಮತ್ತು HMD eStore ನಲ್ಲಿ ಖರೀದಿಸಲು ಲಭ್ಯವಿದೆ. Nokia 3210 4G ರೆಟ್ರೋ ವಿನ್ಯಾಸದೊಂದಿಗೆ ಬರುತ್ತದೆ. ಇದು ಮೂರು ವಿಭಿನ್ನ ಬಣ್ಣದ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಗ್ರುಂಜ್ ಬ್ಲ್ಯಾಕ್, ಸ್ಕೂಬಾ ಬ್ಲೂ ಮತ್ತು ಮತ್ತು Y2K ಗೋಲ್ಡ್ ಬಣ್ಣಗಳಲ್ಲಿ ಬರುತ್ತದೆ.

Nokia 3210 4G ಫೋನ್‌ನ ಇನ್ನಿತರೆ ಫೀಚರ್‌ಗಳು

  • ಡಿಸ್‌ಪ್ಲೇ: 2.4-ಇಂಚಿನ ಸ್ಕ್ರೀನ್, QVGA ರೆಸಲ್ಯೂಶನ್
  • ಪ್ರೊಸೆಸರ್: UniSoC T107 ಪ್ರೊಸೆಸರ್
  • ಕ್ಯಾಮೆರಾ: 2MP ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲಾಷ್
  • ಮೆಮೊರಿ: 64MB RAM
  • ಸಾಫ್ಟ್‌ವೇರ್: S30+
  • ಅಪ್ಲಿಕೇಶನ್‌ಗಳು: ಯೂಟ್ಯೂಬ್, ಯೂಟ್ಯೂಬ್ ಶಾರ್ಟ್ಸ್, ನ್ಯೂಸ್ ಮತ್ತು ಗೇಮ್‌ಗಳು, ಕ್ಲಾಸಿಕ್ ಸ್ನೇಕ್ ಗೇಮ್
  • ಸ್ಟೋರೇಜ್: 128MB, ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್ (32GB ವರೆಗೆ ಬೆಂಬಲಿಸುತ್ತದೆ)
  • ಬ್ಯಾಟರಿ: 1,450mAh ತೆಗೆಯಬಹುದಾದ ಬ್ಯಾಟರಿ, 9.8 ಗಂಟೆಗಳ ಟಾಕ್ ಟೈಮ್
  • ಚಾರ್ಜಿಂಗ್: USB ಟೈಪ್-ಸಿ ಪೋರ್ಟ್
  • ಆಡಿಯೋ: 3.5mm ಆಡಿಯೋ ಜಾಕ್, MP3 ಪ್ಲೇಯರ್, FM ರೇಡಿಯೋ
  • ಕನೆಕ್ಟಿವಿಟಿ: ಡ್ಯುಯಲ್-ಸಿಮ್, 4G, VoLTE, ಬ್ಲೂಟೂತ್ 5.0
  • ಅಳತೆ: 122 × 52 × 13.14 ಮಿಮೀ
  • ತೂಕ: 62 ಗ್ರಾಂ
Best Mobiles in India

English summary
Nokia 3210 feature phone has been launched in India. which is a refreshed version of the popular Nokia 3210 feature phone from 1999. Let's take a look at the pricing, features, and availability of the Nokia 3210 4G in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+