ನೋಕಿಯಾ ಭಾರತಕ್ಕೆ ಬರುವುದು ಫೀಕ್ಸ್: ಮೇ 18 ರಿಂದ ಮಾರಾಟ ಆರಂಭ..!! ಇಲ್ಲಿದೇ ಫುಲ್ ಡಿಟೈಲ್ಸ್

ನೋಕಿಯಾ ಫೋನ್‌ಗಳು ಮೇ 18 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ.

|

ಕೊನೆಗೂ ಭಾರತಕ್ಕೆ ನೋಕಿಯಾ ಕಾಲಿಡಲು ಮೂಹುರ್ತ ಫಿಕ್ಸ್ ಆಗಿದೆ. ಇಷ್ಡು ದಿನ ನೋಕಿಯಾ ಅಭಿಮಾನಿಗಳು ಕಾಯುತ್ತಿದ್ದ ಗಳಿಗೆಯೂ ಹತ್ತಿರವಾಗಿದ್ದು, ನೋಕಿಯಾ ಫೋನ್‌ಗಳು ಮೇ 18 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮೊದಲಿಗೆ ನೋಕಿಯಾ 3310 ಫೀಚರ್ ಫೋನ್ ಮಾರಾಟಕ್ಕೆ ಮುಕ್ತವಾಗಲಿದೆ.

ನೋಕಿಯಾ ಭಾರತಕ್ಕೆ ಬರುವುದು ಫೀಕ್ಸ್: ಮೇ 18 ರಿಂದ ಮಾರಾಟ ಆರಂಭ..!!

ವಿಶ್ವದಾದ್ಯಂತ ನೋಕಿಯಾ ಫೋನ್‌ಗಳನ್ನು ಮಾರಾಟ ಮಾಡುವ ಹಕ್ಕು ಖರೀಡಿಸಿರುವ HMD ಗ್ಲೊಬಲ್ ಕಂಪನಿಯೂ ಕೊನೆಗೂ ಭಾರತೀಯ ಮೊಬೈಲ್ ಮಾರುಕಟ್ಟೆಗೆ ನೋಕಿಯಾ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದ್ದು, ಮೇ 18 ರಿಂದ ನೋಕಿಯಾ ಫೋನ್‌ಗಳ ಮಾರಾಟ ಆರಂಭಿಸಲಿದೆ.

ಮೊದಲಿಗೆ ನೋಕಿಯಾ 3310(2017) ಬಿಡುಗಡೆ:

ಮೊದಲಿಗೆ ನೋಕಿಯಾ 3310(2017) ಬಿಡುಗಡೆ:

ನೋಕಿಯಾ ಈ ಮೊದಲೇ ತಿಳಿಸಿದಂತೆ ನೋಕಿಯಾ 3310 ಫೀಚರ್ ಫೋನ್ ಮೊದಲಿಗೆ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ ಒಂದೊಂದಾಗಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈಗಾಗಲೇ ನೋಕಿಯಾ 3310 ಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತ್ತಿದ್ದು, ಇದಕ್ಕಾಗಿ ಇನ್ನೇರಡು ದಿನಗಳು ಕಾಯಲೇ ಬೇಕಾಗಿದೆ.

ನೋಕಿಯಾ 3310 ಬೆಲೆ:

ನೋಕಿಯಾ 3310 ಬೆಲೆ:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ನೋಕಿಯಾ 3310 ಬಿಡುಗಡೆ ಮಾಡುತ್ತಿರುವ ನೋಕಿಯಾ, ನೋಕಿಯಾ 3310 ಫೋನಿನ ಬೆಲೆಯನ್ನು ರೂ. 3310 ನಿಗಧಿ ಪಡಿಸಿದೆ. ಒಟ್ಟು ನಾಲ್ಕು ಬಣ್ಣಗಳಲ್ಲಿ ಈ ಫೋನ್ ದೊರೆಯಲಿದೆ ಎಂದು ತಿಳಿದು ಬಂದಿದೆ.

ನೋಕಿಯಾ 3310 ವಿಶೇಷತೆಗಳು:

ನೋಕಿಯಾ 3310 ವಿಶೇಷತೆಗಳು:

ನೋಕಿಯಾ 3310 ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಮೇಸೆಜ್ ಕಳುಹಿಸಬಹುದಾಗಿದ್ದು, ಫೋಟೋ ತೆಗೆಯಬಹುದಾಗಿದೆ. ಅಲ್ಲದೇ ಇದರಲ್ಲಿ ಇನ್ ಬಿಲ್ಟ್ MP3 ಪ್ಲೇಯರ್ ನೀಡಲಾಗಿದ್ದು, ಜೊತೆಗೆ FM ಸಹ ಇದೇ. ಅಲ್ಲದೇ ಈ ಹಿಂದಿನ ಫೋನ್ ಮಾದರಿಯಲ್ಲಿ ಡಿಸೈನ್ ಮಾಡಲಾಗಿದೆ.

ನೋಕಿಯಾ 3310ನಲ್ಲಿ ಏನೇನಿದೆ..?

ನೋಕಿಯಾ 3310ನಲ್ಲಿ ಏನೇನಿದೆ..?

ನೋಕಿಯಾ 3310 ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇ, 1200mAh ಬ್ಯಾಟರಿ, ಕ್ಲಾಸಿಕ್ ನ್ಯೂಮರಿಕ್ ಕೀಪ್ಯಾಡ್, 16 MB ಇಂಟರ್ನಲ್ ಮೆಮೊರಿ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ 2MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ LED ಫ್ಲಾಷ್ ಸಹ ಇದೆ. 2G ನೆಟ್ವರ್ಕ್ ಸಪೋರ್ಟ್ ಮಾಡಲಿದೆ.

Best Mobiles in India

Read more about:
English summary
Nokia 3310 (2017), the iconic feature phone is now officially launched for India and the price is really interesting. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X