Subscribe to Gizbot

ಇಂದಿನಿಂದ ನೋಕಿಯಾ ಮಾರಾಟ ಆರಂಭ: ಆಫ್‌ಲೈನ್‌ನಲ್ಲಿ ಮಾತ್ರ ಫೋನ್ ಲಭ್ಯ..!!

Written By:

ಇಂದಿನಿಂದ ಭಾರತದಲ್ಲಿ ನೋಕಿಯಾ ತನ್ನ ಮೊದಲ ಫೋನ್ ಮಾರಾಟವನ್ನು ಆರಂಭಿಸಲಿದೆ. ಆದರೆ ಅಚ್ಚರಿಯ ವಿಚಾರ ಎಂದರೆ ನೋಕಿಯಾ ಮೊದಲಿಗೆ ತನ್ನ ಫೋನ್‌ಗಳನ್ನು ಆಫ್‌ಲೈನ್ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಆ ಮೂಲಕ ಆನ್‌ಲೈನಿನಲ್ಲಿ ಸೇಲ್ ಶುರುವಾಗಲಿದೆ ಎಂದು ಕಾಯುತ್ತಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇಂದಿನಿಂದ ನೋಕಿಯಾ ಮಾರಾಟ ಆರಂಭ: ಆಫ್‌ಲೈನ್‌ನಲ್ಲಿ ಮಾತ್ರ ಫೋನ್ ಲಭ್ಯ..!!

ಆದರೆ ಮೂಲಗಳ ಪ್ರಕಾರ ನೋಕಿಯಾ ಫೋನ್‌ಗಳು ಶೀಘ್ರವೇ ಆನ್‌ಲೈನ್‌ನಲ್ಲಿಯೂ ದೊರೆಯಲಿದೆ. ಪ್ರಾರಂಭ ಮಾತ್ರ ಆಫ್‌ಲೈನ್ ಸ್ಟೋರ್‌ಗಳಿಂದ ಎನ್ನಲಾಗಿದೆ. ದೇಶದ ಮೂಲೆ ಮೂಲೆಗಳಲ್ಲಿರುವ ಮೊಬೈಲ್ ಅಂಗಡಿಗಳಲ್ಲಿ ನೋಕಿಯಾ ತನ್ನ ಪೋನ್‌ಗಳನ್ನು ಮಾರಾಟ ಮಾಡಲಿದೆ. ಮೂಲಕ ಆಫ್‌ಲೈನ್ ಮಾರುಕಟ್ಟೆಯ ಉತ್ತೇಜನಕ್ಕೆ ಮಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸದ್ಯ ನೋಕಿಯಾ 3310 ಮಾತ್ರ ಲಭ್ಯ:

ಸದ್ಯ ನೋಕಿಯಾ 3310 ಮಾತ್ರ ಲಭ್ಯ:

ಸದ್ಯ ಆಫ್ ಲೈನ್ ಮಾರುಕಟ್ಟೆಯಲ್ಲಿ ಇಂದಿನಿಂದ ನೋಕಿಯಾ 3310 ಮಾತ್ರ ಲಭ್ಯವಿರಲಿದ್ದು, ಇದಾದ ನಂತರದಲ್ಲಿ ಜೂನ್ ಆರಂಭದಲ್ಲಿ ನೋಕಿಯಾ 6, ನೋಕಿಯಾ ಮತ್ತು ನೋಕಿಯಾ 5 ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿದೆ ಎಂದು ನೋಕಿಯಾ ಫೋನ್ ಮಾರಾಟದ ಹಕ್ಕು ಪಡೆದಿರುವ HMD ಗ್ಲೂಬಲ್ ಸಂಸ್ಥೆಯೂ ತಿಳಿಸಿದೆ.

ನೋಕಿಯಾ 3310 ಬೆಲೆ:

ನೋಕಿಯಾ 3310 ಬೆಲೆ:

ಭಾರತದಲ್ಲಿ ಮತ್ತೇ ನೋಕಿಯಾ ತನ್ನ ಶಕೆಯನ್ನು ಆರಂಭಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಮೊದಲ ಹಂತವಾಗಿ ಆಪ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನೋಕಿಯಾ 3310 ಫೀಚರ್ ಫೋನಿನ ಬೆಲೆ ರೂ. 3310 ಗಳಾಗಲಿದೆ.

ನೋಕಿಯಾ 3310 ವಿಶೇಷತೆಗಳು:

ನೋಕಿಯಾ 3310 ವಿಶೇಷತೆಗಳು:

ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ನೋಕಿಯಾ 3310 ಫೀಚರ್ ಫೋನನ್ನು ಮತ್ತೇ ರಿಲಾಂಚ್ ಮಾಡುತ್ತಿದ್ದು, ಹೊಸ ಫೋನಿನಲ್ಲಿ ಹಳೇ ಫೋನಿಗಿಂತ ಹೆಚ್ಚಿನ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದರಲ್ಲಿ 2.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ನೋಕಿಯಾ ಸುಪರ್ 30+ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಒಂದು ತಿಂಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ.

ನೋಕಿಯಾ 3310ದಲ್ಲಿದೆ ಕ್ಯಾಮೆರಾ:

ನೋಕಿಯಾ 3310ದಲ್ಲಿದೆ ಕ್ಯಾಮೆರಾ:

ನೋಕಿಯಾ 3310 ಪೋನಿನಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. 2 MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ LED ಫ್ಲಾಷ್ ಸಹ ಇದರಲ್ಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಒಂದು ತಿಂಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ ಎನ್ನಲಾಗಿದೆ. ಇದು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
After a long wait, Nokia 3310 was finally launched in India on May 16. The feature phone is available for buying starting today. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot