ನೋಕಿಯಾ 4.2 ಮೇ 7 ರಂದು ಭಾರತದಲ್ಲಿ ರಿಲೀಸ್
ಹೆಚ್ಎಂಡಿ ಗ್ಲೋಬಲ್ ಸಂಸ್ಥೆ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಗಳನ್ನು ನೋಕಿಯಾ ಬ್ರ್ಯಾಂಡ್ ನ ಅಡಿಯಲ್ಲಿ ಬಿಡುಗಡೆಗೊಳಿಸುವುದರಲ್ಲಿ ಭಾರೀ ಫೇಮಸ್ . ಎಂಡಬ್ಲ್ಯೂಸಿ 2019 ರ ಟೆಕ್ ಶೋನಲ್ಲಿ ಕೆಲವು ಡಿವೈಸ್ ಗಳನ್ನು ಕಂಪೆನಿ ವಿವರಿಸಿದೆ. ಇದರಲ್ಲಿ ನೋಕಿಯಾ 9 ಪ್ಯೂರ್ ವ್ಯೂ ಫ್ಲ್ಯಾಗ್ ಶಿಪ್ ಮಾಡೆಲ್ ಗಳ ಜೊತೆಗೆ ನೋಕಿಯಾ 3.2, ನೋಕಿಯಾ 4.2 ಮತ್ತು ನೋಕಿಯಾ 1 ಪ್ಲಸ್ ಕೂಡ ಸೇರಿದೆ.

ಇದೀಗ ನೋಕಿಯಾ 9 ಪ್ಯೂರ್ ವ್ಯೂ ಭಾರತದಲ್ಲಿ ಆದಷ್ಟು ಬೇಗ ಬಿಡುಗಡೆಗೊಳ್ಳಲಿದೆ ಎಂದು ಕೇಳಿದ್ದೆವು. ಇದನ್ನು ಅಧಿಕೃತ ಟೀಸರ್ ನಲ್ಲಿ ಹೇಳಲಾಗಿದ್ದು ಮುಂಬರುವ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಆದರೆ ಇದು ಪೆಂಟಾ-ಲೆನ್ಸ್ ಕ್ಯಾಮರಾ ಫೋನ್ ನಂತೆ ಕಾಣಿಸುತ್ತದೆ.ಇತ್ತೀಚೆಗಿನ ಟೀಸರ್ ನಲ್ಲಿ ನೋಕಿಯಾ 4.2 ಕೂಡ ದೇಶದಲ್ಲಿ ಸದ್ಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಲಾಗಿದೆ.

ನೋಕಿಯಾ 4.2 ಭಾರತದಲ್ಲಿ ಬಿಡುಗಡೆಗೊಳ್ಳುವ ಬಗ್ಗೆ ಟೀಸರ್
ಇತ್ತೀಚೆಗಿನ ಟೀಸರ್ ಪ್ರಕಾರ ನೋಕಿಯಾ ಮೊಬೈಲ್ ಇಂಡಿಯಾ, ಮೇ 7 ರಂದು ಹೊಸ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಟ್ವೀಟ್ ನಲ್ಲಿ ಸ್ಮಾರ್ಟ್ ಫೋನ್ ಬಗೆಗಿನ ವೀಡಿಯೋ ಟೀಸರ್ ಇದ್ದು ಎಲ್ಇಡಿ ಲೈಟ್ ನೋಟಿಫಿಕೇಷನ್ ಲೈಟ್ ಪವರ್ ಬಟನ್ ಗೆ ಎಂಬೆಡೆಡೆ ಆಗಿದೆ. ಇದರಲ್ಲಿ ನಾವು ಬಿಡುಗಡೆಗೊಳ್ಳುವುದಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಎಂದು ಕೂಡ ಬರೆಯಲಾಗಿತ್ತು.ಡಿವೈಸ್ ನಲ್ಲಿ ನಿರ್ಧಿಷ್ಟ ಗೂಗಲ್ ಅಸಿಸ್ಟೆಂಟ್ ಬಟನ್ ಕೂಡ ಇದೆ.

MWC 2019
ಈ ಎಲ್ಲಾ ಮಾಹಿತಿ ಮತ್ತು ಎಂಡಬ್ಲ್ಯೂಸಿ 2019 ರ ಟೆಕ್ ಶೋ ನಲ್ಲಿ ಪ್ರಕಟಿಸಲಾಗಿರುವ ಮಾಹಿತಿಯ ಅನುಸಾರ ನೋಕಿಯಾ 4.2 ಬಿಡುಗಡೆಗೊಳ್ಳಲಿದೆ ಎಂದು ಅಂದಾಜಿಸಲಾಗುತ್ತಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ನೋಕಿಯಾ 4.2 ಬಿಡುಗಡೆಯನ್ನು ಭಾರತದಲ್ಲಿ ಮಾಡುವ ಬಗ್ಗೆ ಲಿಸ್ಟ್ ಇದೆ. ಈ ವಾರದ ಆರಂಭದಲ್ಲಿ ನೋಕಿಯಾ 3.2 ಮತ್ತು ನೋಕಿಯಾ 4.2 ನ್ನು ಅಧಿಕೃತ ನೋಕಿಯಾ ಇಂಡಿಯಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.ಈ ಫೋನ್ ಗಳು 12,000 ರುಪಾಯಿಗೆ ಮಾರಾಟ ಮಾಡುವ ಬಗ್ಗೆ ಮಾಹಿತಿ ಇದ್ದು ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ.

ನೋಕಿಯಾ 4.2 ವೈಶಿಷ್ಟ್ಯತೆಗಳು:
ನೋಕಿಯಾ ಸ್ಮಾರ್ಟ್ ಫೋನ್ 5.71-ಇಂಚಿನ ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ HD+ ರೆಸಲ್ಯೂಷನ್ 1520 x 720 ಪಿಕ್ಸಲ್ ಮತ್ತು ಆಸ್ಪೆಕ್ಟ್ ಅನುಪಾತ 19:9 ಇದೆ.ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 439 SoC 2GB/3GB RAM ಮತ್ತು 16GB/32GB ಸ್ಟೋರೇಜ್ ನೊಂದಿಗೆ ಪೇರ್ ಆಗಿದೆ. 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿಯನ್ನು ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
ಆಂಡ್ರಾಯ್ಡ್ 9 ಪೈ ನಲ್ಲಿ ರನ್ ಆಗುವ ಇದು ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ 13MP ಪ್ರೈಮರಿ ಕ್ಯಾಮರಾ ಜೊತೆಗೆ PDAF, LED ಫ್ಲ್ಯಾಶ್ ನ್ನು ಹೊಂದಿದೆ ಮತ್ತು f/2.2 ಅಪರ್ಚರ್ ವ್ಯವಸ್ಥೆ ಇದೆ. 2MP ಸೆಕೆಂಡರಿ ಕ್ಯಾಮರಾವಿದೆ. ಮುಂಭಾಗದಲ್ಲಿ 8MP ಸೆಲ್ಫೀ ಕ್ಯಾಮರಾವಿದ್ದು ಅದರ ಅಪರ್ಚರ್ f/2.0 ಆಗಿದೆ. ನೋಕಿಯಾ 4.2 ನಲ್ಲಿ ಡುಯಲ್ 4G VoLTE, ವೈ-ಫೈ , ಬ್ಲೂಟೂತ್ 4.2, GPS, ಮೈಕ್ರೋ USB ಮತ್ತು 3000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.


Click it and Unblock the Notifications








