Home
ಮೊಬೈಲ್

ಕಾಸು ಕಮ್ಮಿ ಅಂತ ಶಿಯೋಮಿ-ರಿಯಲ್‌ಮಿ ಬೇಡ: ಶಾಕಿಂಗ್ ಬೆಲೆಗೆ ನೋಕಿಯಾ 5.1 ಪ್ಲಸ್ ಲಾಂಚ್..!

ಮತ್ತೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶ ಮಾಡಿರುವ ನೋಕಿಯಾಗೆ ಇದುವರೆಗೂ ದೊಡ್ಡ ಮಟ್ಟದ ಯಶಸ್ಸನ್ನು ಕಾಣುವಲ್ಲಿ ಯಶಸ್ವಿಯಾಗಿಲ್ಲ, ಆದರೆ ಈ ಪರಿಸಿಸ್ಥಿತಿಯೂ ಬದಲಾವಣೆಯಾಗಲಿದೆ ಎನ್ನಲಾಗಿದೆ. ನೋಕಿಯಾ ಹೊಸದಾಗಿ ಲಾಂಚ್ ಮಾಡಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿಶೇಷತೆ ಮತ್ತು ಬೆಲೆಯನ್ನು ಕೇಳಿದ್ರೆ ಬೇರೆ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಆಯ್ಕೆಯನ್ನು ಬಿಟ್ಟು ಇದೊಂದೇ ಸ್ಮಾರ್ಟ್‌ಫೋನ್‌ ಕೊಳ್ಳಲಿದ್ದಾರೆ. ಮತ್ತೊಮ್ಮೆ ಮಾರುಕಟ್ಟೆಯಲ್ಲಿ ನೋಕಿಯಾ ಶಕೆ ಆರಂಭವಾಗಲು ಇದೊಂದೇ ಸ್ಮಾರ್ಟ್‌ಫೋನ್‌ ಸಾಕು ಎನ್ನುವ ಮಾತು ಕೇಳಿ ಬಂದಿದೆ.

ಕಾಸು ಕಮ್ಮಿ ಅಂತ ಶಿಯೋಮಿ-ರಿಯಲ್‌ಮಿ ಬೇಡ: ಶಾಕಿಂಗ್ ಬೆಲೆಗೆ ನೋಕಿಯಾ 5.1 ಪ್ಲಸ್.!

ಭಾರತದ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಗುರಿಯಾಗಿಸಿಕೊಂಡು ಬಿಡುಗಡೆಯಾಗಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸದ ಮೂಲಕವೇ ಸದ್ದು ಮಾಡುತ್ತಿದೆ. ಅಲ್ಲದೇ ಬೆಲೆಯೂ ಸಹ ಕಡಿಮೆ ಇದ್ದು, ರೇಟ್ ನೋಡಿ ಚೀನಾ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಅದನ್ನು ಬಿಟ್ಟು ನೋಕಿಯಾ ಕೊಳ್ಳಲು ಇದು ಸರಿಯಾದ ಸಮಯ ಎನ್ನಲಾಗಿದೆ.

ಬೆಲೆ:

ಬೆಲೆ:

ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಯೋಜನೆಯಲ್ಲಿರುವ ನೋಕಿಯಾ, ಈ ಬಾರಿ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್‌ಅನ್ನು ರೂ.10,999ಕ್ಕೆ ಮಾರಾಟ ಮಾಡಲು ಮುಂದಾಗಿದ್ದು, ಈ ಬೆಲೆಗೆ ಚೀನಾ ಫೋನ್‌ಗಳು ಇಷ್ಟು ವಿಶೇಷತೆಯೊಂದಿಗೆ ದೊರೆಯುತ್ತಿಲ್ಲ ಎನ್ನಲಾಗಿದ್ದು, ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡಲಿದೆ.

ಆಫರ್:

ಆಫರ್:

ಇದಲ್ಲದೇ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನ್ ಕೊಳ್ಳುವವರಿಗೆ ಏರ್‌ಟೆಲ್ ಹೊಸ ಮಾದರಿಯ ಆಫರ್ ಅನ್ನು ನೀಡಿದೆ. ರೂ.1800 ಕ್ಯಾಷ್ ಬ್ಯಾಕ್ ಆಫರ್ ನೊಂದಿಗೆ 240 GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ ಎನ್ನಲಾಗಿದೆ.

ಮಾರಾಟ:

ಮಾರಾಟ:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದ್ದು, ಅಕ್ಟೋಬರ್ 1 ರಿಂದ ಲಭ್ಯವಿರಲಿದೆ ಎನ್ನಲಾಗಿದ್ದು, ನೋಕಿಯಾ.ಕಾಮ್‌ನಲ್ಲಿಯೂ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಗೂಗಲ್ ನೀಡುವ ಬೆಸ್ಟ್ ಆಯ್ಕೆಗಳನ್ನು ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, f/2.0 ಅಪರ್ಚರ್ ಮತ್ತು ಪಿಡಿಎಎಫ್ ಆಟೋಫೋಕಸ್‌ನೊಂದಿಗೆ 13 MP ಪ್ರಾಥಮಿಕ ಹಾಗೂ 5 MP ಡೆಪ್ತ್ ಸೆನ್ಸಾರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, f/2.2 ಅಪರ್ಚರ್ ಮತ್ತು 80.4-ಡಿಗ್ರಿ ವೈಡ್ ಆಂಗಲ್ ಲೆನ್ಸ್‌ಗಳೊಂದಿಗೆ 8 MP ಸೆಲ್ಫಿ ಕ್ಯಾಮೆರಾವನ್ನು ಫೋನಿನಲ್ಲಿ ನೀಡಲಾಗಿದೆ. ಇದರೊಂದಿಗೆ ಫಿಂಗರ್ ‌ಪ್ರಿಂಟ್ ಸ್ಕ್ಯಾನರ್ ಸಹ ಹಿಂಭಾಗದಲ್ಲಿಯೇ ಇದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಆಯ್ಕೆಯನ್ನು ಹೊಂದಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ. 720x1520 ಪಿಕ್ಸೆಲ್ ಗುಣಮಟ್ಟದ 5.86 ಇಂಚಿನ ಡಿಸ್‌ಪ್ಲೇ ನೀಡಲಾಗಿದೆ. ಇದಕ್ಕೆ 2.5D ಕರ್ವಡ್ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದ್ದು, ಆಪಲ್ ಐಫೋನ್ ‍X ಮಾದರಿಯಲ್ಲಿ ನೋಚ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಗ್ಲಾಸ್ ಮಾದರಿಯ ಪ್ಯಾನಲ್ ನೀಡಲಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ P 60 ಪ್ರೊಸೆಸರ್ ಅನ್ನು ಹೊಂದಿದೆ (1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A73 ಕೋರ್‌ಗಳು ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A53 ಕೋರ್‌ಗಳು ದೊರೆಯುತ್ತದೆ). 3GB RAM + 32GB ಮೆಮೊರಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.

ಸಾಕ್ಟ್ ಆಂಡ್ರಾಯ್ಡ್:

ಸಾಕ್ಟ್ ಆಂಡ್ರಾಯ್ಡ್:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಿದ್ದು, ಆಂಡ್ರಾಯ್ಡ್ ಓರಿಯೋ ವನ್ನು ಕಾಣಬಹುದಾಗಿದೆ. ಮೈಕ್ರೊ SD ಕಾರ್ಡ್ ಮೂಲಕ 400GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಫೋನಿನಲ್ಲಿದೆ.

ಇತರೆ:

ಇತರೆ:

4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ (v2.0), ಮತ್ತು 3.5 ಎಂಎಂ ಹೆಡ್‌ಪೋನ್ ಜ್ಯಾಕ್ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ 3060mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.

Best Mobiles in India

English summary
Nokia 5.1 Plus available from 1st October 2018 at Rs. 10,999/-, to know now more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+