Home
ಮೊಬೈಲ್

ಮಾರುಕಟ್ಟೆಯ ಬೆಸ್ಟ್ ಫೋನ್ ಮೊದಲ ಸೇಲ್ ನಲ್ಲಿ: ಫಸ್ಟ್ ಇಸ್ ಬೆಸ್ಟ್..!

ಹೊಸದಾಗಿ ಬಿಡುಗಡೆ ಮಾಡಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಇಂದಿನಿಂದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ನೀವು ಈ ಸ್ಮಾರ್ಟ್ ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿಯೇ ಇದರ ವಿಶೇಷತೆ ಮತ್ತು ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಮಾರುಕಟ್ಟೆಯ ಬೆಸ್ಟ್ ಫೋನ್ ಮೊದಲ ಸೇಲ್ ನಲ್ಲಿ: ಫಸ್ಟ್ ಇಸ್ ಬೆಸ್ಟ್..!

ಬೆಲೆ ವಿಭಾಗದಲ್ಲಿ ಸಾಕಷ್ಟು ಕಡಿಮೆಗೆ ದೊರೆಯುತ್ತಿರುವ ನೋಕಿಯಾ ಫೋನ್, ಬೇರೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ನೋಕಿಯಾ ಜಾದು ಮಾಡಲಿದೆ ಎನ್ನಲಾಗಿದೆ. ನೀವು ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಖರೀದಿ ಮಾಡಬೇಕು ಎನ್ನುವುದಾದರೆ ಇದೊಂದು ಉತ್ತಮ ಆಯ್ಕೆಯಾಗಲಿದೆ.

ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್:

ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್:

ಭಾರತದ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಗುರಿಯಾಗಿಸಿಕೊಂಡು ಬಿಡುಗಡೆಯಾಗಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸದ ಮೂಲಕವೇ ಸದ್ದು ಮಾಡುತ್ತಿದೆ. ಅಲ್ಲದೇ ಬೆಲೆಯೂ ಸಹ ಕಡಿಮೆ ಇದ್ದು, ರೇಟ್ ನೋಡಿ ಚೀನಾ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಅದನ್ನು ಬಿಟ್ಟು ನೋಕಿಯಾ ಕೊಳ್ಳಲು ಇದು ಸರಿಯಾದ ಸಮಯ ಎನ್ನಲಾಗಿದೆ.

ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ:

ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದ್ದು, ಅಕ್ಟೋಬರ್ 1 ರಿಂದ ಲಭ್ಯವಿರಲಿದೆ ಎನ್ನಲಾಗಿದ್ದು, ನೋಕಿಯಾ.ಕಾಮ್‌ನಲ್ಲಿಯೂ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಗೂಗಲ್ ನೀಡುವ ಬೆಸ್ಟ್ ಆಯ್ಕೆಗಳನ್ನು ಕಾಣಬಹುದಾಗಿದೆ.

ಲಾಂಚ್ ಆಫರ್:

ಲಾಂಚ್ ಆಫರ್:

ಇದಲ್ಲದೇ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನ್ ಕೊಳ್ಳುವವರಿಗೆ ಏರ್‌ಟೆಲ್ ಹೊಸ ಮಾದರಿಯ ಆಫರ್ ಅನ್ನು ನೀಡಿದೆ. ರೂ.1800 ಕ್ಯಾಷ್ ಬ್ಯಾಕ್ ಆಫರ್ ನೊಂದಿಗೆ 240 GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ ಎನ್ನಲಾಗಿದೆ.

ಬೆಲೆ:

ಬೆಲೆ:

ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಯೋಜನೆಯಲ್ಲಿರುವ ನೋಕಿಯಾ, ಈ ಬಾರಿ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್‌ಅನ್ನು ರೂ.10,999ಕ್ಕೆ ಮಾರಾಟ ಮಾಡಲು ಮುಂದಾಗಿದ್ದು, ಈ ಬೆಲೆಗೆ ಚೀನಾ ಫೋನ್‌ಗಳು ಇಷ್ಟು ವಿಶೇಷತೆಯೊಂದಿಗೆ ದೊರೆಯುತ್ತಿಲ್ಲ ಎನ್ನಲಾಗಿದ್ದು, ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡಲಿದೆ.

ಡ್ಯುಯಲ್ ಕ್ಯಾಮೆರಾ;

ಡ್ಯುಯಲ್ ಕ್ಯಾಮೆರಾ;

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, f/2.0 ಅಪರ್ಚರ್ ಮತ್ತು ಪಿಡಿಎಎಫ್ ಆಟೋಫೋಕಸ್‌ನೊಂದಿಗೆ 13 MP ಪ್ರಾಥಮಿಕ ಹಾಗೂ 5 MP ಡೆಪ್ತ್ ಸೆನ್ಸಾರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, f/2.2 ಅಪರ್ಚರ್ ಮತ್ತು 80.4-ಡಿಗ್ರಿ ವೈಡ್ ಆಂಗಲ್ ಲೆನ್ಸ್‌ಗಳೊಂದಿಗೆ 8 MP ಸೆಲ್ಫಿ ಕ್ಯಾಮೆರಾವನ್ನು ಫೋನಿನಲ್ಲಿ ನೀಡಲಾಗಿದೆ. ಇದರೊಂದಿಗೆ ಫಿಂಗರ್ ‌ಪ್ರಿಂಟ್ ಸ್ಕ್ಯಾನರ್ ಸಹ ಹಿಂಭಾಗದಲ್ಲಿಯೇ ಇದೆ.

ಡಿಸ್ ಪ್ಲೇ:

ಡಿಸ್ ಪ್ಲೇ:

ಆಯ್ಕೆಯನ್ನು ಹೊಂದಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ. 720x1520 ಪಿಕ್ಸೆಲ್ ಗುಣಮಟ್ಟದ 5.86 ಇಂಚಿನ ಡಿಸ್‌ಪ್ಲೇ ನೀಡಲಾಗಿದೆ. ಇದಕ್ಕೆ 2.5D ಕರ್ವಡ್ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದ್ದು, ಆಪಲ್ ಐಫೋನ್ X ಮಾದರಿಯಲ್ಲಿ ನೋಚ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಗ್ಲಾಸ್ ಮಾದರಿಯ ಪ್ಯಾನಲ್ ನೀಡಲಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ P 60 ಪ್ರೊಸೆಸರ್ ಅನ್ನು ಹೊಂದಿದೆ (1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A73 ಕೋರ್‌ಗಳು ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A53 ಕೋರ್‌ಗಳು ದೊರೆಯುತ್ತದೆ). 3GB RAM + 32GB ಮೆಮೊರಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.

ವಿಶೇಷತೆ

ವಿಶೇಷತೆ

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಿದ್ದು, ಆಂಡ್ರಾಯ್ಡ್ ಓರಿಯೋ ವನ್ನು ಕಾಣಬಹುದಾಗಿದೆ. ಮೈಕ್ರೊ SD ಕಾರ್ಡ್ ಮೂಲಕ 400GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಫೋನಿನಲ್ಲಿದೆ. 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ (v2.0), ಮತ್ತು 3.5 ಎಂಎಂ ಹೆಡ್‌ಪೋನ್ ಜ್ಯಾಕ್ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ 3060mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.

Best Mobiles in India

English summary
Nokia 5.1 Plus Set to Go on Sale for the First Time in India Today, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+