ನೋಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾದ ಬಜೆಟ್ ಸ್ಮಾರ್ಟ್‌ಫೋನ್ 'ನೋಕಿಯಾ 5.1 ಪ್ಲಸ್'!

By Bhaskar N J
|

ಭಾರತದ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಗುರಿಯಾಗಿಸಿಕೊಂಡು ನೆನ್ನೆಯಷ್ಟೇ ಬಿಡುಗಡೆಯಾಗಿರುವ ನೋಕಿಯಾ 5.1 ಪ್ಲಸ್ ಮೊಬೈಲ್ ಮಾರುಕಟ್ಟೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಜೊತೆಯಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 5.1 ಪ್ಲಸ್ ಈಗ ಮೊಬೈಲ್ ಪ್ರಿಯರ ಕುತೋಹಲ ಕೆರಳಿಸಿದೆ.

ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ನೋಕಿಯಾ 5.1 ಪ್ಲಸ್ ಫೋನಿನ ಫೀಚರ್ಸ್ ಮತ್ತು ವಿಶೇಷತೆಗಳನ್ನು ಮಾತ್ರ ಬಿಡುಗಡೆ ಮಾಡಿ ಮೊಬೈಲ್ ಪ್ರಿಯರಿಗೆ ಕಾತುರವನ್ನು ಹೆಚ್ಚಿಸಿದೆ. ಹೆಚ್ಚು ಫೀಚರ್ಸ್ ಹೊಂದಿರುವ ನೋಕಿಯಾ 6.1 ಸ್ಮಾರ್ಟ್‌ಫೋನ್ ಬೆಲೆಯನ್ನು ಕೇವಲ 15,999 ರೂ.ಗಳಿಗೆ ನಿಗದಿಪಡಿಸಿರುವುದು ಈ ಆಶ್ಚರ್ಯಕ್ಕೆ ಕಾರಣವಾಗಿದೆ.

ಡ್ಯುಯಲ್ ಕ್ಯಾಮೆರಾದ ಬಜೆಟ್ ಸ್ಮಾರ್ಟ್‌ಫೋನ್ 'ನೋಕಿಯಾ 5.1 ಪ್ಲಸ್'!

ಇದೇ ಮೊದಲ ಬಾರಿಗೆ ನೋಕಿಯಾದ ಎರಡು ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊತ್ತು ಬಿಡುಗಡೆಗೊಂಡಿವೆ. ಹಾಗಾದರೆ, ನೆನ್ನೆಯಷ್ಟೇ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ಬೆಲೆ ಎಷ್ಟಿರಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು ಹಾಗೂ ಫೀಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ. . 720x1520 ಪಿಕ್ಸೆಲ್ ಸಾಮರ್ಥ್ಯದ 5.86 ಇಂಚಿನ ಡಿಸ್‌ಪ್ಲೇ 2.5D ಕರ್ವಡ್ ಗ್ಲಾಸ್ ರಕ್ಷಣೆಯಯಲ್ಲಿ ಆಪಲ್ ಐಫೋನ್ 10 ಮಾದರಿಯಲ್ಲಿ ನೋಚ್ ಅನ್ನು ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ ಪಿ 60 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ (1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A73 ಕೋರ್‌ಗಳು ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A53 ಕೋರ್‌ಗಳು ದೊರೆಯುತ್ತದೆ). 3GB RAM +32ಮೆಮೊರಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಫೋನ್, ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ.

ಕ್ಯಾಮೆರಾ ಸಾಮರ್ಥ್ಯ?

ಕ್ಯಾಮೆರಾ ಸಾಮರ್ಥ್ಯ?

ಎಫ್ / 2.0 ಅಪರ್ಚರ್ ಮತ್ತು ಪಿಡಿಎಎಫ್ ಆಟೋಫೋಕಸ್‌ನೊಂದಿಗೆ 13 ಮೆಗಾಪಿಕ್ಸೆಲ್ ಪ್ರಾಥಮಿಕ ಹಾಗೂ 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಿಯರ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಮುಂಭಾಗದಲ್ಲಿ, ಎಫ್ / 2.2 ಅಪರ್ಚರ್ ಮತ್ತು 80.4-ಡಿಗ್ರಿ ವಿಶಾಲ ಆಂಗಲ್ ಲೆನ್ಸ್‌ಗಳೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಫೋನಿನಲ್ಲಿ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 400GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಫೋನಿನಲ್ಲಿದೆ. 4ಜಿ ವೋಲ್ಟ್, ವೈ-ಫೈ 802.11ac, ಬ್ಲೂಟೂತ್ ವಿ 4.2,ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ (v2.0), ಮತ್ತು 3.5 ಎಂಎಂ ಹೆಡ್‌ಪೋನ್ ಜ್ಯಾಕ್ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ 3060mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನಿನ ಬೆಲೆ ಈ ವರೆಗೂ ಹೊರಬಿದ್ದಿಲ್ಲ. ಆದರೆ, ನೋಕಿಯಾ 6.0 ಸ್ಮಾರ್ಟ್‌ಫೋನ್ ಅನ್ನು ಅಂತರಾಷ್ಟ್ರೀಯ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದ ನಂತರ ನೋಕಿಯಾ 5.0 ಪ್ಲಸ್ ಫೋನಿನ ಬೆಲೆ ಕೂಡ ಕಡಿಮೆ ಇರಲಿದೆ ಎನ್ನಲಾಗಿದೆ. 13 ಸಾವಿರ ರೂ. ಆಸುಪಾಸಿನಲ್ಲಿ ನೋಕಿಯಾ 5.0 ಪ್ಲಸ್ ಬೆಲೆ ಇರಲಿದೆ ಎನ್ನಲಾಗಿದೆ.

Best Mobiles in India

English summary
Nokia 5.1 Plus With Dual Rear Cameras, 19:9 Display Launched in India: Price, Specifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X