ನೋಕಿಯಾ 5 3GB ವೆರಿಯಂಟ್ ಪೋನ್ ಮಾರುಕಟ್ಟೆಗೆ!!..ಖರೀದಿಸಲು ಬೆಸ್ಟ್ ಫೋನ್!?
ಈ ಮೊದಲು ಲಭ್ಯವಿದ್ದ 2GB ವೆರಿಯಂಟ್ ಫೋನ್ ಬೆಲೆಯಲ್ಲಿಯೇ 3GB ವೆರಿಯಂಟ್ ನೋಕಿಯಾ 5 ಫೋನ್ ಸಹ ಖರೀದಿಗೆ ಲಭ್ಯವಿದ್ದು, ನೋಕಿಯಾ 5 3GB ವೆರಿಯಂಟ್ ಫೋನ್ ಬೆಲೆ ಕೇವಲ 13,999 ರೂಪಾಯಿಗಳಾಗಿವೆ.
ನೋಕಿಯಾ ಆಂಡ್ರಾಯ್ಡ್ ಫೋನ್‌ಗಳಲ್ಲಿಯೇ ಉತ್ತಮ ಎನ್ನಬಹುದಾದ ನೋಕಿಯಾ 5 ಸ್ಮಾರ್ಟ್‌ಫೋನ್‌ನ ಮಗದೊಂದು ವೆರಿಯಂಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ! ಹೌದು, ನೋಕಿಯಾ 5 ಪೋನ್‌ನ 3GB ವೆರಿಯಂಟ್ ಸ್ಮಾರ್ಟ್‌ಫೋನ್ ಇದೀಗ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆಯಲು ಬಂದಿದೆ.!!
ಈ ಮೊದಲು ಲಭ್ಯವಿದ್ದ 2GB ವೆರಿಯಂಟ್ ಫೋನ್ ಬೆಲೆಯಲ್ಲಿಯೇ 3GB ವೆರಿಯಂಟ್ ನೋಕಿಯಾ 5 ಫೋನ್ ಸಹ ಖರೀದಿಗೆ ಲಭ್ಯವಿದ್ದು, ನೋಕಿಯಾ 5 3GB ವೆರಿಯಂಟ್ ಫೋನ್ ಬೆಲೆ ಕೇವಲ 13,999 ರೂಪಾಯಿಗಳಾಗಿವೆ.( 2GB ವೆರಿಯಂಟ್ 12,999ರೂ.)!! ಹಾಗಾದರೆ, ಬ್ಲ್ಯಾಕ್ ಮತ್ತು ಟ್ಯಾಂಪರ್ಡ್ ಬ್ಲೂ ಎರಡು ಬಣ್ಣಗಳಲ್ಲಿ ಹೊರಬಂದಿರುವ ನೋಕಿಯಾ 5 3GB ವೆರಿಯಂಟ್ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಹೇಗಿದೆ!?
ನೋಕಿಯಾ 5 3GB ವೆರಿಯಂಟ್ ಸ್ಮಾರ್ಟ್‌ಫೋನ್ 5.2 ಇಂಚುಗಳ 720x1280 ಪಿಕ್ಸೆಲ್ ರೆಸೊಲ್ಯೂಷನ್ IPS LCD ಡಿಸ್‌ಪ್ಲೇ ಹೋಂದಿದೆ. ಫೋನ್‌ಗೆ 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಲಭ್ಯವಿದ್ದು ಸ್ಕ್ರೀನ್ ಗುಣಮಟ್ಟ ಉತ್ತಮವಾಗಿದೆ.

ಪ್ರೊಸೆಸರ್ ಯಾವುದು?
ಬಹುತೇಕ ಬಜೆಟ್ ಫೋನ್‌ಗಳು ಅಳವಡಿಸಿಕೊಂಡಿರುವ ಕ್ವಾಲ್ಕಂ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಅನ್ನು ನೋಕಿಯಾ 5 ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ. ಇನ್ನು ಆಂಡ್ರಾಯ್ಡ್ 7.1.1 ನೌಗಾಟ್ ಓಪರೇಟಿಂಗ್ ಸಿಸ್ಟಂ ಮೂಲಕ ಈ ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

ಕ್ಯಾಮೆರಾ ಹೇಗಿದೆ?
13MP ರಿಯರ್ ಕ್ಯಾಮೆರಾ ಜತೆ PDAF (f/2 aperture) ಮತ್ತು 8MP ಫ್ರಂಟ್ ಫೇಸಿಂಗ್ ಕ್ಯಾಮೆರಾ (f/2.0 aperture) ಎರಡು ಕ್ಯಾಮೆರಾಗಳೂ ನೋಕಿಯಾ 5 ಸ್ಮಾರ್ಟ್‌ಫೋನ್ ಅನ್ನು ಅಲಂಕರಿಸಿದ್ದು, 84 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಪೋನನ್‌ನಲ್ಲಿರುವುದು ವಿಶೇಷ.!!

3GB RAM ಮತ್ತು 16GB ಮೆಮೊರಿ.!!
ನೂತನ ವೆರಿಯಂಟ್ ನೋಕಿಯಾ 5 ಸ್ಮಾರ್ಟ್‌ಪೋನ್ 3GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ, ಇದಲ್ಲದೇ ಎಸ್‌ಡಿಕಾರ್ಡ್ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಸಹ ಲಭ್ಯವಿದೆ.!!

ಬ್ಯಾಟರಿ ಮತ್ತು ಫಿಂಗರ್‌ಪ್ರಿಂಟ್!!
ನೋಕಿಯಾ 5 ಸ್ಮಾರ್ಟ್‌ಪೋನ್ 3000mAH ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ದಿನಪೂರ್ತಿ ಸ್ಮಾರ್ಟ್‌ಫೋನ್ ಬಳಕೆ ಮಾಡಬಹುದಾಗಿದ್ದು, ಹೋಮ್ ಬಟನ್ ಮೇಲೆ ಫಿಂಗರ್ಪ್ರಿಂಟ್ ಸೆನ್ಸರ್ ಇರುವುದರಿಂದ ಈ ಫೋನ್ ಹೈ ಎಂಡ್ ಫೋನ್‌ಗಳನ್ನು ಹಿಡಿದ ಫೀಲ್ ನೀಡುತ್ತದೆ.!!


Click it and Unblock the Notifications



