ನೋಕಿಯಾದ ಈ ಫೋನ್ ಗಳಲ್ಲಿ ನಿಮಗ್ಯಾವುದಿಷ್ಟ?

ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ನೋಕಿಯಾ ಇತ್ತೀಚೆಗಷ್ಟೆ ನೋಕಿಯಾ 500 ಮತ್ತು ನೋಕಿಯಾ 303 ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ. ಎರಡೂ ಕೂಡ ಉತ್ತಮ ಸ್ಮಾರ್ಟ್ ಫೋನ್ ಗಳಾಗಿದ್ದು, ತಮ್ಮದೇ ವಿಶೇಷತೆ ಪಡೆದುಕೊಂಡಿದೆ. ಈ ಮೊಬೈಲ್ ಗಳ ವಿಶೇಷತೆಯನ್ನು ಪ್ರತ್ಯೇಕವಾಗಿ ಇಲ್ಲಿ ತಿಳಿಯಿರಿ.
ನೋಕಿಯಾ 500 ಮೊಬೈಲ್ ನೀಲಿ, ಕಿತ್ತಳೆ ಬಣ್ಣ, ಕೆಂಪು, ನೇರಳೆ ಇನ್ನಿತರ ಆರು ಬಣ್ಣಗಳಲ್ಲಿ ಲಭ್ಯವಿದೆ. ನೋಕಿಯಾ ಆಶಾ 303 ಮೊಬೈಲ್ ಕೆಂಪು ಮತ್ತು ಗ್ರಾಫೈಟ್ ಬಣ್ಣದಲ್ಲಿ ಮಾತ್ರ ಲಭ್ಯವಾಗಲಿದೆ. ನೋಕಿಯಾ 500 ಮೊಬೈಲ್ ಸಿಂಬಿಯಾನ್ ಅನ್ನಾ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದರೆ, ನೋಕಿಯಾ 303 ಮೊಬೈಲ್ S40 ಟಚ್ ಅಂಡ್ ಟೈಪ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ.
ನೋಕಿಯಾ 500 ಮೊಬೈಲ್ ವಿಶೇಷತೆ:
* 111.3 x 53.8 x 14.1 ಎಂಎಂ ಸುತ್ತಳತೆ
* 3.2 ಇಂಚು, 640 x 360 ಪಿಕ್ಸಲ್ ರೆಸೊಲ್ಯೂಷನ್
* 93 ಗ್ರಾಂ ತೂಕ
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 4x ಡಿಜಿಟಲ್ ಝೂಮ್
* 2ಜಿಬಿ ಆಂತರಿಕ ಮೆಮೊರಿ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಬ್ಲೂಟೂಥ್, USB ಮತ್ತು ವೈ-ಫೈ ಸಂಪರ್ಕ
* HDMI ಔಟ್ ಪುಟ್ ಪೋರ್ಟ್
* 3.5 ಎಂಎಂ ಆಡಿಯೋ ಜ್ಯಾಕ್
ನೋಕಿಯಾ ಆಶಾ 303 ಮೊಬೈಲ್ ವಿಶೇಷತೆ:
* 116.5 x 55.7 x 13.9 ಎಂಎಂ ಸುತ್ತಳತೆ
* 2.6 ಇಂಚಿನ ಡಿಸ್ಪ್ಲೇ
* 99 ಗ್ರಾಂ ತೂಕ
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ
* 100 ಎಂಬಿ ಮೆಮೊರಿ ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಬ್ಲೂಟೂಥ್, USB ಮತ್ತು ವೈ-ಫೈ ಸಂಪರ್ಕ
* HDMI ಔಟ್ ಪುಟ್ ಪೋರ್ಟ್
* 3.5 ಎಂಎಂ ಆಡಿಯೋ ಜ್ಯಾಕ್
ನೋಕಿಯಾ 500 ಮೊಬೈಲ್ 1110 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 7 ಗಂಟೆ ಟಾಕ್ ಟೈಂ ಮತ್ತು 500 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ನೋಕಿಯಾ ಆಶಾ 303 ಮೊಬೈಲ್ BP-3L ಬ್ಯಾಟರಿ ಹೊಂದಿದ್ದು, 8 ಗಂಟೆ 10 ನಿಮಿಷದ ಟಾಕ್ ಟೈಂ ಮತ್ತು 30 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.
ಎರಡೂ ಮೊಬೈಲ್ ಗಳು MP3, MPEG4 ಮತ್ತು AAC+ ಫಾರ್ಮೆಟ್ ಗಳನ್ನು ಬೆಂಬಲಿಸುವ ಆಡಿಯೋ ಮತ್ತು ವಿಡಿಯೋ ಪ್ಲೇಯರ್ ಇದೆ. ನೋಕಿಯಾ 500 ಮೊಬೈಲ್ ಬೆಲೆ 11,000 ರು ಮತ್ತು ನೋಕಿಯಾ 303 ಮೊಬೈಲ್ 8,500 ರುಗಿಂತ ಕಡಿಮೆಯಿದೆ.


Click it and Unblock the Notifications








