ನೋಕಿಯಾ ಫೋನ್‌ಗಳಲ್ಲೇ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ?

|

ಕಳೆದ ಒಂದು ವರ್ಷದಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೆದ್ದ ನೋಕಿಯಾ ಸ್ಮಾರ್ಟ್‌ಫೋನ್ ಯಾವುದು ಎಂಬ ರಿಪೋರ್ಟ್ ಕಾರ್ಡ್ ಹೊರಬಿದ್ದಿದೆ. 2018ರಲ್ಲಿ ಎಚ್ಎಂಡಿ ಗ್ಲೋಬಲ್ ಪರಿಚಯಿಸಿರುವ 14 ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ 'ನೋಕಿಯಾ 6.1 ಪ್ಲಸ್' ಅತಿ ಹೆಚ್ಚು ಜನರನ್ನು ಸೆಳೆದಿದೆ ಎಂದು ಹೇಳಲಾಗಿದೆ.

ಹೌದು, 5499 ರೂ. ಬೆಲೆಯ 'ನೋಕಿಯಾ 1' ಆಂಡ್ರಾಯ್ಡ್ ಗೋ ಆವೃತ್ತಿಯಿಂದ, ನೋಕಿಯಾದ ಅತ್ಯಂತ ಹೆಚ್ಚಿನ ಬೆಲೆ 49,999 ದರದ 'ನೋಕಿಯಾ 8 ಸಿರೋಕೋ' ವರೆಗೂ ಒಟ್ಟು 14 ನೋಕಿಯಾ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಇವುಗಳಲ್ಲಿ 16,900 ರೂಪಾಯಿಗಳಿಗೆ ಬಿಡುಗಡೆಯಾಗಿದ್ದ 'ನೋಕಿಯಾ 6.1 ಪ್ಲಸ್' ಸ್ಮಾರ್ಟ್‌ಫೋನ್ ಅತಿ ಹೆಚ್ಚು ಸೇಲ್ ಆಗಿದೆ.

ನೋಕಿಯಾ ಫೋನ್‌ಗಳಲ್ಲೇ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ?

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ, ಎಲ್ಲಾ ಫೀಚರ್ಸ್‌ಗಳಲ್ಲಿಯೂ ಒಂದು ಕೈ ಮುಂದಾಗಿರುವ 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ. ಪ್ರಸ್ತುತ ಬೆಲೆ ಕಳೆದುಕೊಂಡಿರುವ ಈ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಇಂದಿನ ನಮ್ಮ ಹಾಟ್‌ ಫೇವರೇಟ್ ಸ್ಮಾರ್ಟ್‌ಫೋನ್ ಆಗಿದೆ. ಹಾಗಾದರೆ, ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷ ಫೀಚರ್ಸ್ ಯಾವುವು? ಖರೀದಿಸಲು ಏನು ಕಾರಣಗಳು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ಡಿಸೈನ್!

ಡಿಸ್‌ಪ್ಲೇ ಮತ್ತು ಡಿಸೈನ್!

ಅತ್ಯಾಕರ್ಷಕ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 19: 9 ಆಕಾರ ಅನುಪಾತದ 5.84 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080 x 2280 ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಐಫೋನ್ 10 ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊದಲೇ ಹೇಳಿದಂತೆ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 4+64 GB ವೆರಿಯಂಟ್ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಂಡ್ರಾಯ್ಡ್ ಒನ್ ಸಪೋರ್ಟ್ ಕ್ವಾಲ್ಕಂ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 636 ಎಸ್‌ಒಸಿ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಮಾರ್ಟ್‌ಫೋನ್ ಮೆಮೊರಿಯನ್ನು 400GB ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಸಹ ಲಭ್ಯವಿದೆ.

ಕ್ಯಾಮೆರಾ ಸಾಮರ್ಥ್ಯ?

ಕ್ಯಾಮೆರಾ ಸಾಮರ್ಥ್ಯ?

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಎಫ್ / 2.0 ಅಪಾರ್ಚರ್ ಮತ್ತು 1-ಮೈಕ್ರಾನ್ ಪಿಕ್ಸೆಲ್ಗಳಲ್ಲಿ 16-ಮೆಗಾಪಿಕ್ಸೆಲ್ ಮತ್ತು 5-ಮೆಗಾಪಿಕ್ಸೆಲ್ ಮೊನೊಕ್ರೋಮ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.0 ಅಪಾರ್ಚರ್ ಮತ್ತು 1ಮೈಕ್ರಾನ್ ಪಿಕ್ಸೆಲ್ ಸೆನ್ಸಾರ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು?

ಬ್ಯಾಟರಿ ಸಾಮರ್ಥ್ಯ ಎಷ್ಟು?

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 3060mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಅಲ್ಲದೇ, ಸ್ಮಾರ್ಟ್‌ಫೋನ್‌ 18W ಚಾರ್ಜರ್ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ 50 ಪರ್ಸೆಂಟ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಯುಎಸ್‌ಬಿ ಟೈಪ್ ಸಿ ಪೋರ್ರ್ಟ ಮತ್ತು 3.5MM ಹೆಡ್‌ಪೋನ್ ಜಾಕ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4G ವೋಲ್ಟ್, ಬ್ಲೂಟೂತ್ V5.0, 2.3 ಕರ್ವರ್ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್, ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸಂವೇದಕ, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ಫೀಚರ್ ಅನ್ನು ಒಳಗೊಂಡಿರುವುದು ವಿಶೇಷತೆಯಾಗಿದೆ.

ಪ್ರಸ್ತುತ ನೋಕಿಯಾ 6.1 ಪ್ಲಸ್ ಬೆಲೆ ಎಷ್ಟು?

ಪ್ರಸ್ತುತ ನೋಕಿಯಾ 6.1 ಪ್ಲಸ್ ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಭಾರತದ ಮೊಬೈಲ್ ಮಾರುಕಟ್ಟೆ ಊಹಿಸಿದ್ದಕ್ಕಿಂತಲೂ ಕಡಿಮೆ ಇದೆ. ಶಿಯೋಮಿಯ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನಿಗೆ ನೇರಾನೇರ ಸೆಡ್ಡು ಹೊಡೆಯುತ್ತಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಪ್ರಸ್ತುತ ಕೇವಲ 15,999 ರೂಪಾಯಿಗಳಾಗಿವೆ. ಹಾಗಾಗಿ, ಇದು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳಲ್ಲಿಯೇ ಬೆಲೆಗೆ ತಕ್ಕಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಗಿದೆ.

Best Mobiles in India

English summary
In the year 2018, HMD Global has introduced 14 smartphones ranging from entry-level Nokia 1 Android Go Edition that was launched for Rs 5499 to its most expensive device, the Nokia 8 Sirocco.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X