Home
ಮೊಬೈಲ್

ಪ್ಯೂರ್ ಆಂಡ್ರಾಯ್ಡ್ ಫೋನ್ ಖರೀದಿಸಬೇಕಾ..? ಐಫೋನ್ X ಮಾದರಿಯಲ್ಲಿ ಬರುತ್ತಿದೆ...!

By Srinidhi

ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ನೋಕಿಯಾ X6 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 6.1 ಪ್ಲಸ್ ಎಂಬ ಹೆಸರಿನಲ್ಲಿ ಲಾಂಚ್ ಆಗಲಿದ್ದು, ಈ ಸ್ಮಾರ್ಟ್ ಫೊನ್ ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬರುತ್ತಿದ್ದು, ಸದ್ಯ ಈ ಸ್ಮಾರ್ಟ್ ಫೋನ್ ವಿಶೇಷತೆಗಳ ಕುರಿತು ಮಾಹಿತಿಯೊಂದು ಲೀಕ್ ಆಗಿದ್ದು, ಮಾರುಕಟ್ಟೆಯಲ್ಲಿ ಸಂಚಲನವನ್ನು ಹುಟ್ಟಿಸಿದೆ ಎನ್ನಲಾಗಿದೆ.

ಪ್ಯೂರ್ ಆಂಡ್ರಾಯ್ಡ್ ಫೋನ್ ಖರೀದಿಸಬೇಕಾ..? ಐಫೋನ್ X ಮಾದರಿಯಲ್ಲಿ ಬರುತ್ತಿದೆ...!

ಮೂಲಗಳ ಪ್ರಕಾರ ನೋಕಿಯಾ 6.1 ಪ್ಲಸ್ ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್ ಆಗಲಿದ್ದು, ಜುಲೈ 19ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಪ್ರಮಾಣ ಬೇಡಿಕೆಯೂ ನೋಕಿಯಾ 6.1 ಪ್ಲಸ್ ಸ್ಮಾರ್ಟ್ ಫೋನಿಗೆ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ನೋಕಿಯಾ ಸಹ ಶೀಘ್ರವೇ ಲಾಂಚ್ ಮಾಡುವ ಪ್ರಯತ್ನದಲ್ಲಿ.

ನೋಕಿಯಾ 6.1 ಪ್ಲಸ್ :

ನೋಕಿಯಾ 6.1 ಪ್ಲಸ್ :

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ 4GB RAM ನೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದರೊಂದಿಗೆ ಆಂಡ್ರಾಯ್ಡ್ ಒರಿಯೊ 8.1 ಅನ್ನು ಕಾಣಬಹುದಾಗಿದೆ. ಮೂಲಗ ಪ್ರಕಾರ 64GB ಇಂಟರ್ನಲ್ ಮೆಮೊರಿಯೊಂದಿಗತೆ ಮಾರಾಟವಾಗಲಿದೆ. ಆದರೆ ಚೀನಾ ಮಾರುಕಟ್ಟೆಯಲ್ಲಿ 6GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ಸಹ ಲಭ್ಯವಿತ್ತು.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 1.8GHz ವೇಗದ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದ್ದು, ಇದರೊಂದಿಗೆ ವೇಗದ ಗೇಮ್ ಅನುಭವಕ್ಕಾಗಿ ಆಂಡ್ರಿನೋ 509 GPU ವನ್ನು ಕಾಣಬಹುದಾಗಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಉತ್ತಮ ಡಿಸ್‌ಪ್ಲೇ:

ಉತ್ತಮ ಡಿಸ್‌ಪ್ಲೇ:

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಡಿಸ್‌ಪ್ಲೇ ನೀಡಲಾಗಿದ್ದು, ದೊಡ್ಡ ವಿಡಿಯೋಗಳನ್ನು ನೋಡುವ ಸಲುವಾಗಿ 5.8 ಇಂಚಿನ ಡಿಸ್‌ಪ್ಲೇ ಯನ್ನು ಕಾಣಬಹುದಾಗಿದ್ದು, FHD+ ಗುಣಮಟ್ಟವನ್ನು ಹೊಂದಿದ್ದು, 19:9 ಅನುಪಾತದಿಂದ ಕೂಡಿದೆ. ಸುರಕ್ಷತೆಗಾಗಿ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಹಿಂಭಾಗದಲ್ಲಿ 16MP + 5 MPಯ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಈ ಎರಡು ಕ್ಯಾಮೆರಾಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನಿಮಗೆ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ಶೀಘ್ರವೇ ಲಾಂಚ್:

ಶೀಘ್ರವೇ ಲಾಂಚ್:

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಇದೇ ಜುಲೈ 19 ರಂದು ಹಾಂಗ್ ಕಾಂಗ್ ನಲ್ಲಿ ಸೇಲ್ ಆಗಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಚೀನಾದಲ್ಲಿ ಮಾತ್ರವೇ ಕಾಣಿಸಿಕೊಂಡ ನೋಕಿಯಾ X6 ಸ್ಮಾರ್ಟ್‌ಫೋನಿನ ಜಾಗತಿಕ ಆವೃತ್ತಿ ಇದಾಗಿದೆ.

Best Mobiles in India

English summary
Nokia 6.1 Plus With Snapdragon 636 SoC, 4GB RAM. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+