Subscribe to Gizbot

ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೊಕೀಯಾ 8 ಸಿರೊಕೊ ಸ್ಮಾರ್ಟ್‌ಫೋನ್‌ಗಳು ಲಾಂಚ್‌..!

Written By:

ಇಂದು ನಿರೀಕ್ಷೆಯಂತೆ ಭಾರತೀಯ ಮಾರುಕಟ್ಟೆಗೆ ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೊನ್‌ಗಳು ಲಾಂಚ್ ಆಗಿದೆ. ನೋಕಿಯಾ 6 (2018) ರೂ.16,999ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ ನೋಕಿಯಾ 7 ಪ್ಲಸ್ ರೂ.25,999ಕ್ಕೆ ಹಾಗೂ ನೋಕಿಯಾ 8 ಸಿರೊಕೊ ರೂ.49999ಕ್ಕೆ ದೊರೆಯಲಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಬೇರೆ ಬೇರೆ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೊಕೀಯಾ 8 ಸಿರೊಕೊ ಸ್ಮಾರ್ಟ್‌ಫೋನ್‌

ಈ ಮೂರು ಸ್ಮಾರ್ಟ್‌ಫೋನ್‌ಗಳು ಒಂದಕ್ಕೊಂದು ಭಿನ್ನವಾದ ವಿಭಾಗದಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದ್ದು, ನೋಕಿಯಾ ಬಳಕೆದಾರರ ಬಜೆಟ್‌ಗೆ ಸರಿಹೊಂದುವಂತೆ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್ ಮಾಡಿದೆ ಎನ್ನಲಾಗಿದ್ದು, ಆರಂಭಿಕ ಬೆಲೆಯಲ್ಲಿ ನೋಕಿಯಾ 6, ಮಧ್ಯಮ ಬೆಲೆಯಲ್ಲಿ ನೋಕಿಯಾ 7 ಪ್ಲಸ್ ಹಾಗೂ ಟಾಪ್ ಎಂಡ್ ಬೆಲೆಯಲ್ಲಿ ನೋಕಿಯಾ 8 ಸಿರಿಕೊ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಸಂಫೂರ್ಣ ಮಾಹಿತಿಯನ್ನು ವಿವರವಾಗಿ ಮುಂದೆ ತಿಳಿಸಲಿದ್ದೇವೆ'
'
ನೋಕಿಯಾ 6 (2018) ಸ್ಮಾರ್ಟ್‌ಫೋನ್ ಏಪ್ರಿಲ್ 6ನೇ ತಾರೀಕಿನಂದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಇದೇ ಮಾದರಿಯಲ್ಲಿ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಏಪ್ರಿಲ್ 20 ರಿಂದ ಪ್ರೀ ಬುಕಿಂಗ್ ಆರಂಭವಾಗಲಿದ್ದು, ಏಪ್ರಿಲ್ 30 ರಿಂದ ಸೇಲ್ ಆರಂಭವಾಗಲಿದೆ. ಇದೇ ಮಾದರಿಯಲ್ಲಿ ನೋಕಿಯಾ 8 ಸಿರೊಕೊ ಸಹ ಏಪ್ರಿಲ್ 20 ರಿಂದ ಪ್ರೀ ಬುಕಿಂಗ್ ಆರಂಭವಾಗಲಿದ್ದು, ಏಪ್ರಿಲ್ 30 ರಿಂದ ಮಾರಾಟವಾಗಲಿದೆ.

ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೊಕೀಯಾ 8 ಸಿರೊಕೊ ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಜೆಗಳನ್ನು ನೀಡಿದೆ. ಬಳಕೆದಾರರ ಬಜೆಟ್ ಅನುಗುಣವಾಗಿ ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆಯ ಅನುಭವನ್ನು ನೀಡಲಿದೆ ಅಲ್ಲದೇ, 4G ಸಫೋರ್ಟ್ ಮಾಡಲಿವೆ. ಮೂರು ಫೋನ್‌ಗಳು ತನ್ನ ಕ್ಯಾಮೆರಾ ವೈಶಿಷ್ಠ್ಯದಿಂದಾಗಿಯೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿವೆ.

ಆದರೆ ಈ ಕಾರ್ಯಕ್ರಮದಲ್ಲಿ ನೊಕಿಯಾ ಫೀಚರ್ ಫೋನ್ ವೊಂದು ಲಾಂಚ್ ಆಗವ ನಿರೀಕ್ಷೆ ಇತ್ತು ಆದರೆ ನೋಕಿಯಾ ಕೇವಲ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ಲಾಂಚ್ ಮಾಡಿದ್ದು, ಶೀಘ್ರವೇ ನೋಕಿಯಾ 8110 ಲಾಂಚ್ ಆಗುವ ನಿರೀಕ್ಷೆ ಇದೆ. ಈ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡು ಕಡೆಯಲ್ಲಿಯೂ ಮಾರಾಟವಾಗಲಿದೆ.

English summary
Nokia 6 (2018), Nokia 7 Plus, Nokia 8 Sirocco Launched in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot