Subscribe to Gizbot

ನೋಕಿಯಾ 6 ಬೆಲೆಯಲ್ಲಿ ಭಾರೀ ಇಳಿಕೆ: ನೋಕಿಯಾ ಕೊಳ್ಳಲು ಸರಿಯಾದ ಸಮಯ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಬೇಡಿಕೆಯನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಫೋನ್‌ಗಳು ಮಾರಾಟವಾಗುತ್ತಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ನೋಕಿಯಾ ಬಿಡುಗಡೆ ಮಾಡಿದ್ದ ನೋಕಿಯಾ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರುಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಮತ್ತೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದೆ.

ನೋಕಿಯಾ 6 ಬೆಲೆಯಲ್ಲಿ ಭಾರೀ ಇಳಿಕೆ: ನೋಕಿಯಾ ಕೊಳ್ಳಲು ಸರಿಯಾದ ಸಮಯ..!

ಹಾಗಾಗಿ, ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಾಣಬಹುದಾಗಿದ್ದು, ಕಳೆದ ಒಂದು ತಿಂಗಳಲ್ಲಿ ನೋಕಿಯಾ 6 ಬೆಲೆ ಎರಡು ಬಾರಿ ಇಳಿಕೆಯಾಗಿದೆ. ಮಾರುಕಟ್ಟೆಗೆ 3GB RAM ಹೊಂದಿರುವ ನೋಕಿಯಾ 6 ರೂ.14999ಕ್ಕೆ ಲಾಂಚ್ ಆಗಿತ್ತು. ಕಳೆದ ತಿಂಗಳಲ್ಲಿ ರೂ.1,500 ಕಡಿತಗೊಂಡು ರೂ.13,499ಕ್ಕೆ ಮಾರಾಟವಾಗುತಿತ್ತು. ಇದಾದ ನಂತರದಲ್ಲಿ ಮತ್ತೆ ರೂ.500 ಕಡಿತಗೊಂಡು ರೂ. 12,999ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ನೋಕಿಯಾ 6 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ 1080x1920 ಪಿಕ್ಸೆಲ್ ರೆಸೊಲ್ಯೂಷನ್‌ನ FHD ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಕ್ಕೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ನೀಡಲಾಗಿದ್ದು, ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ನೊಂದಿಗೆ 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೋಡಬಹುದಾಗಿದೆ. ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ನೋಕಿಯಾ 6 ಬೆಲೆಯಲ್ಲಿ ಭಾರೀ ಇಳಿಕೆ: ನೋಕಿಯಾ ಕೊಳ್ಳಲು ಸರಿಯಾದ ಸಮಯ..!

ಇದಲ್ಲದೇ ನೋಕಿಯಾ 6 ಸ್ಮಾರ್ಟ್‌ಫೋನಿನಲ್ಲಿ 16MP ಹಿಂಬದಿ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, L:ED ಫ್ಲ್ಯಾಶ್ ಲೈಟ್ ಸಹ ಕಾಣಬಹುದಾಗಿದೆ. 3000mAh ಬ್ಯಾಟರಿ, 4G VoLTE, 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಓಟಿಜಿ ಆಯ್ಕೆಗಳನ್ನು ಕಾಣಬಹುದಾಗಿದೆ.

ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆ ಇಳಿಕೆಗೂ ಕಾರಣವಿದ್ದು, ಇದೇ ಏಪ್ರಿಲ್ 04ರಂದು ನೋಕಿಯಾ 6 (2018) ಲಾಂಚ್ ಆಗಲಿದ್ದು, ಇದರೊಂದಿಗೆ ಹೊಸ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ.

English summary
Nokia 6 3GB RAM Variant Gets Another Price Cut. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot