Home
ಮೊಬೈಲ್

ಭಾರತದಲ್ಲಿ ನೂತನ ಆವೃತ್ತಿಯ 'ನೋಕಿಯಾ 6 'ಸ್ಮಾರ್ಟ್‌ಪೋನ್ ಬಿಡುಗಡೆ!!..ಬೆಲೆ ಎಷ್ಟು ?

ಬಹುನಿರೀಕ್ಷಿತ ನೋಕಿಯಾ 7 ಹಾಗೂ ನೋಕಿಯಾ 1 ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗಿಂತ ಮುಂಚಿತವಾಗಿ 'ನೋಕಿಯಾ 6' ನೂತನ ವೆರಿಯಂಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.!

By Bhaskar N J

ಬಹುನಿರೀಕ್ಷಿತ ನೋಕಿಯಾ 7 ಹಾಗೂ ನೋಕಿಯಾ 1 ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗಿಂತ ಮುಂಚಿತವಾಗಿ 'ನೋಕಿಯಾ 6' ನೂತನ ವೆರಿಯಂಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.! ನೋಕಿಯ 6 ಫೋನಿನ ನೂತನ 4ಜಿಬಿ ಆವೃತ್ತಿಯ ಸ್ಮಾರ್ಟ್‌ಫೋನನ್ನು ಎಚ್‌ಎಂಡಿ ಗ್ಲೋಬಲ್ ಸಂಸ್ಥೆ ಭಾರತಕ್ಕೆ ಪರಿಚಯಿಸಿದೆ.!!

ಭಾರತದಲ್ಲಿ ನೂತನ ಆವೃತ್ತಿಯ 'ನೋಕಿಯಾ 6 'ಸ್ಮಾರ್ಟ್‌ಪೋನ್ ಬಿಡುಗಡೆ!!..ಬೆಲೆ ಎಷ್ಟು

ನೋಕಿಯಾದ ಮೊದಲ ಆಂಡ್ರಾಯ್ಡ್ ಫೋನ್ ಎಂಬ ಹೆಗ್ಗಳಿಕೆಯಿಂದಲೇ ಜನಪ್ರಿಯವಾಗಿರುವ ನೋಕಿಯಾ 6 ಸ್ಮಾರ್ಟ್‌ಫೋನ್ ಇದೀಗ 4GB RAM ಆವೃತ್ತಿ ಮೂಲಕ ಭಾರತೀಯರ ಮನಸನ್ನು ಗೆಲ್ಲಲು ಬಂದಿದೆ.! ಹಾಗಾಗಿ, ನೂತನ 4GB RAM ವೆರಿಯಂಟ್ ನೋಕಿಯಾ 6 ಫೋನಿನ ಫೀಚರ್ಸ್ ಏನು? ಬೆಲೆ ಎಷ್ಟು? ಮಾರಾಟ ಯಾವಾಗ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ನೂತನವಾಗಿ ಬಿಡುಗಡೆಯಾಗಿರುವ ನೋಕಿಯಾ 6 4GB ವೆರಿಯಂಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ 5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080x1920 ಪಿಕ್ಸೆಲ್ ರೆಸೊಲ್ಯೂಷನ್, 2.5D ಕರ್ವ್ಡ್ ಗ್ಲಾಸ್ ಕೋಟಿಂಗ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸ್ಮಾರ್ಟ್‌ಫೋನಿಗಿದೆ.!!

ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್!!

ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್!!

ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಮತ್ತು ಆಡ್ರೆನೊ 505 GPU ಅನ್ನು ನೋಕಿಯಾ 6 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. "ಆಂಡ್ರಾಯ್ಡ್ ನ್ಯೂಗಾ 7.0" ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದದ್ದು, ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಅನ್ನು ಸ್ಮಾರ್ಟ್‌ಫೋನಿಗೆ ಸಿಗಲಿದೆ.!!

4GB RAM ಮತ್ತು 64GB ROM!!

4GB RAM ಮತ್ತು 64GB ROM!!

ನೂತನವಾಗಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾ 6 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ ಮೆಮೊರಿಯನ್ನು 128GB ವರೆಗೂ ವರ್ಧಿಸಬಹುದಾದ ಆಯ್ಕೆ ಕೂಡ ಲಭ್ಯವಿದೆ.!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ರಿಯರ್ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, 84 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ (f/2.0 aperture) ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ನೋಕಿಯಾ 6 ಇತರೆ ಫೀಚರ್ಸ್!!

ನೋಕಿಯಾ 6 ಇತರೆ ಫೀಚರ್ಸ್!!

3000mAh ಬ್ಯಾಟರಿ ಶಕ್ತಿ, 4G ವೋಲ್ಟ್, ಬ್ಲೂಟೂತ್ v4.1, ಜಿಪಿಎಸ್ / ಎ-ಜಿಪಿಎಸ್, ಎಫ್ಎಂ ರೇಡಿಯೋ, ಎನ್ಎಫ ಸಿ, ಮೈಕ್ರೋ-ಯುಎಸ್ಬಿ ಜತೆಗೆ ಮುಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಹಾಗಾಗಿ, ಬಹುತೇಕ ಎಲ್ಲಾ ಉತ್ತಮ ಫೀಚರ್‌ಗಳು ಫೋನಿನಲ್ಲಿವೆ ಎನ್ನಬಹುದು.!!

ನೋಕಿಯಾ 6 ಬೆಲೆ ಮತ್ತು ಮಾರಾಟ!!

ನೋಕಿಯಾ 6 ಬೆಲೆ ಮತ್ತು ಮಾರಾಟ!!

ನೂತನವಾಗಿ ಬಿಡುಗಡೆಯಾಗಿರುವ 4GB ವೆರಿಯಂಟ್ ನೋಕಿಯಾ 6 ಸ್ಮಾರ್ಟ್‌ಫೋನ್ ಇದೇ ತಿಂಗಳ (ಫೆ.20ರಿಂದ) ತಾರೀಖಿನಿಂದ ಫ್ಲಿಫ್‌ಕಾರ್ಟ್ ಮೂಲಕ ಮಾರಾಟಕ್ಕಿದೆ. 2,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ 16,999 ರೂಪಾಯಿಗಳಾಗಿವೆ.!!

Best Mobiles in India

English summary
Nokia 6 4GB RAM Variant Launched in India as a Flipkart Exclusive: Price, Release Date, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+