Subscribe to Gizbot

ನೋಕಿಯಾ ಆಂಡ್ರಾಯ್ಡ್ ಭಾರತದಲ್ಲಿ ಲಭ್ಯ..ಆದ್ರೆ ಬೆಲೆ ಹೆಚ್ಚು!! ಎಷ್ಟು ಗೊತ್ತಾ?

Written By:

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಎಂದು ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಇನ್ನು ಹೊರಬಿದ್ದಿಲ್ಲ. ಆದರೆ ಏಪ್ರಿಲ್ ವೇಳೆಗೆ ನೋಕಿಯಾ ಕಂಪೆನಿ ಭಾರತದಲ್ಲಿ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎನ್ನುವ ವದಂತಿಯಂತೂ ಹಬ್ಬಿದೆ.!!

ನೋಕಿಯಾ ಆಂಡ್ರಾಯ್ಡ್ ಅಫಿಶಿಯಲ್ ಆಗಿ ಭಾರತದಲ್ಲಿ ದೊರೆಯದಿದ್ದರೂ ಸಹ, ಭಾರತದಲ್ಲಿ ನೋಕಿಯಾ 6 ಸ್ಮಾರ್ಟ್‌ಫೋನ್ ಲಭ್ಯವಿದೆ. ನೀವು ಸ್ವಲ್ಪ ಹೆಚ್ಚಿನ ಹಣವನ್ನು ಖರ್ಚು ಮಾಡಿದರೆ ನೀವು ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಅನ್ನು ಖರೀದಿಸಬಹುದಾಗಿದೆ.!!

ನೋಕಿಯಾ ಆಂಡ್ರಾಯ್ಡ್ ಭಾರತದಲ್ಲಿ ಲಭ್ಯ..ಆದ್ರೆ ಬೆಲೆ ಹೆಚ್ಚು!! ಎಷ್ಟು ಗೊತ್ತಾ?

ಹೌದು, ಪ್ರಮುಖ ಆನ್‌ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಒಂದಾದ ಇ-ಬೇ(E-Bay) ಕಂಪೆನಿ ನೋಕಿಯಾ 6 ಸ್ಮಾರ್ಟ್‌ಫೋನ್‌ ಅನ್ನು ಮಾರಾಟಕ್ಕಿಟ್ಟಿದೆ.! 16,000 ರೂಪಾಯಿ ಬೆಲೆಯ ನೋಕಿಯಾ 6 ಸ್ಮಾರ್ಟ್‌ಫೋನ್ ಇ-ಬೇ(E-Bay)ಯಲ್ಲಿ 20 ಸಾವಿರ ರೂಪಾಯಿಗಳಿಗಿದ್ದು, ನೋಕಿಯಾ ಪ್ರಿಯರು ಹೆಚ್ಚು ಹಣ ತೆತ್ತು ಖರೀದಿಸಬಹುದಾಗಿದೆ.!!

ನೋಕಿಯಾ ಆಂಡ್ರಾಯ್ಡ್ ಭಾರತದಲ್ಲಿ ಲಭ್ಯ..ಆದ್ರೆ ಬೆಲೆ ಹೆಚ್ಚು!! ಎಷ್ಟು ಗೊತ್ತಾ?

ಸರಿಸುಮಾರು 4 ಸಾವಿರ ರೂಪಾಯಿ ಹೆಚ್ಚು ಹಣ ನೀಡಿದರೆ ನೋಕಿಯಾದ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳು ನಿಮ್ಮ ಕೈ ಸೇರಲಿದ್ದು, ಖರೀದಿಸುವ ಇಚ್ಚೆಯಿದ್ದರೆ ಇ-ಬೇ(E-Bay) ಜಾಲತಾಣಕ್ಕೆ ಬೇಗ ಭೇಟಿ ನೀಡಿ. ಏಕೆಂದರೆ ಹೆಚ್ಚು ಹಣ ನೀಡಿ ನೋಕಿಯಾ ಖರಿದಿಸುವವರು ಸಹ ಕ್ಯೂನಲ್ಲಿದ್ದಾರೆ.!!

English summary
The new Nokia 6 smartphone is up for sale on the e-commerce site, eBay.in. But you should be wary of ordering one just yet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot