Home
ಮೊಬೈಲ್

ಮೊಬೈಲ್ ಮಾರುಕಟ್ಟೆ ತಲ್ಲಣ!..ಇದೇ ಸೋಮವಾರ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ!!

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ.!!

By Bhaskar N J

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತವರಿಗೆ ಸಿಹಿಸುದ್ದಿ ದೊರೆತಿದೆ.!! ಹೌದು, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ.!!

ಭಾರತೀಯರ ಮನಸಿನಲ್ಲಿ ಅಚ್ಚುಳಿದಿರವ ನೋಕಿಯಾ ಕಂಪೆನಿಯ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ಭಾರತೀಯ ಮಾರುಕಟ್ಟೆಗೆ ಮಾತ್ರ ಕಾಲಿಟ್ಟಿಲ್ಲ.!! ಆದರೆ, ಈಗಾಗಲೇ ನೋಕಿಯಾ ಅಭಿಮಾನಿಗಳು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದು, ಮಾರುಕಟ್ಟೆಗೆ ಬರುವಿಕೆಗಾಗಿ ಕಾಯುತ್ತಿದ್ದಾರೆ.!!

ಮೊದಲಿನಿಂದಲೂ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಿಡುಗಡೆಯಾಗುವ ಬಗ್ಗೆ ಊಹಾಪೋಹಗಳು ಹರಿದಾಡಿದ್ದು, ಇದೀಗ ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್ ಕಾಲಿಡುವ ಸಮಯ ಪಕ್ಕಾ ಆಗಿದೆ.! ಹೌದು, ಇದೇ ಸೋಮವಾರ ಅಂದರೆ 07 ನೇ ತಾರೀಖಿನಂದು ನೋಕಿಯಾ ಆಂಡ್ರಾಯ್ಡ್ ಭಾರತಕ್ಕೆ ಕಾಲಿಡುತ್ತಿದೆ.!!

ಇನ್ನು ಈಗಾಗಲೇ ಎಲ್ಲಡೇ ಸದ್ದು, ಮಾಡುತ್ತಿರುವ ನೋಕಿಯಾ 6 ಇದೇ ಸೂಮವಾರ ಬಿಡುಗಡೆಯಾಗುತ್ತಿದ್ದು, ನೋಕಿಯಾ 6 ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್‌ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ.

ಆಂಡ್ರಾಯ್ಡ್ ನ್ಯೂಗಾ 7.0!!

ಆಂಡ್ರಾಯ್ಡ್ ನ್ಯೂಗಾ 7.0!!

ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್‌ ಹೊಂದಿದೆ.

4GB RAm ಮತ್ತು 64GB ROM!!

4GB RAm ಮತ್ತು 64GB ROM!!

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್‌ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ನೋಕಿಯಾ 6 ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತೀಯ ಸ್ಮಾರ್ಟ್‌ಫೋನ್‌ ಪ್ರಿಯರು ಇನ್ನು ಕಲವು ದಿನಗಳು ಕಾಯಬೇಕಿದೆ. ಚೀನಾದಲ್ಲಿ ನೂತನ "ನೋಕಿಯಾ 6" ಸ್ಮಾರ್ಟ್‌ಪೋನ್ 16,750 ರೂಪಾಯಿಗೆ ಬಿಡುಗಡೆಗೊಂಡಿದೆ. ಇನ್ನು . ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಲಿದೆ ಎಂದು ರೂಮರ್‌ ಆಗಲೇ ಹರಿದಾಡಿ ಹುಟ್ಟಿದೆ.!!

Best Mobiles in India

English summary
HMD Global may announce India launch dates of Nokia phones. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+