ನೋಕಿಯಾದಿಂದ ಮತ್ತೊಂದು ಸ್ಟೈಲಿಶ್ ಫೋನ್

ನೋಕಿಯಾ ಕಂಪನಿ ಭಾರತದ ಮೊಬೈಲ್ ಮಾರುಕಟ್ಟೆಗೆ ನೋಕಿಯಾ 6760 ಎಂಬ ವಿನೂತನ ಮೊಬೈಲನ್ನು ತಂದಿದೆ. ಏಕೈಕ ಶೈಲಿಯ ಮೊಬೈಲನ್ನು ನೀಡುವಲ್ಲಿ ಮುಂದಿರುವ ನೋಕಿಯಾ ಇದೀಗ ಕಟಿಂಗ್ ಎಡ್ಜ್ ಜೊತೆ ಅತ್ಯಾಕರ್ಷಕವಾಗಿ ಮೂಡಿಬಂದಿದೆ.
ಸಿಂಬಿಯಾನ್ ಅಥವಾ S60 rel 3.2 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಕೀ ಬೋರ್ಡ್ ವಿನ್ಯಾಸ ಇನ್ನೂ ವಿನೂತನವಾಗಿದೆ.
ನೋಕಿಯಾ 6760 ಮೊಬೈಲ್ ವಿಶೇಷತೆ:
* 2.4 ಇಂಚಿನ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್
* 97.6 x 58 x 15.6 ಎಂಎಂ ಸುತ್ತಳತೆ
* 124.3 ಗ್ರಾಂ ತೂಕ
* ಟಚ್ ಸೌಲಭ್ಯ
* 3.15 ಮೆಗಾ ಪಿಕ್ಸಲ್ ಕ್ಯಾಮೆರಾ
* ಅಕ್ಸೆಲೆರೊ ಮೀಟರ್
* ಬ್ಲೂಟೂಥ್ 2.0, USB v2.0 ಮೈಕ್ರೊUSB
* GPRS ಮತ್ತು EDGE ಡೇಟಾ ನೆಟ್ ವರ್ಕ್
* 120ಎಂಬಿ ಆಂತರಿಕ ಮೆಮೊರಿ
* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಆಯ್ಕೆ
* ಕೀ ಬೋರ್ಡ್ ಜೊತೆ ಸೈಡ್ ಸ್ಲೈಡ್
ಮನರಂಜನೆಗೆಂದು ಆಡಿಯೋ, ವಿಡಿಯೋ ಪ್ಲೇಯರ್ ಇದ್ದು, 3ಡಿ ಸೌಂಡ್ ಎಫೆಕ್ಟ್ ಸ್ಟಿರಿಯೋ ಸ್ಪೀಕರ್ ಗಳಿಗೂ ಆಯ್ಕೆ ಇದೆ. ಇಂಟರ್ ನೆಟ್ ಗೆಂದು ಪ್ರತ್ಯೇಕ ಕೀಯೊಂದಿಗೆ ಸಾಮಾಜಿಕ ತಾಣಗಳ ಆಯ್ಕೆಯೂ ಇದೆ. 1500 mAh Li-ಪಾಲಿಮರ್ ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ 5 ಗಂಟೆ ಟಾಕ್ ಟೈಂ ಮತ್ತು 500 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.
ಹೆಚ್ಚು ವಿಸ್ತಾರವಾದ ಕೀ ಬೋರ್ಡ್ ಬಳಕೆದಾರರಿಗೆ ಉನ್ನತ ಅನುಭವ ನೀಡಲಿದ್ದು, ಉದ್ಯಮಿಗಳಿಗೆ ಮತ್ತು ಮನರಂಜನೆಗೆ ಎರಡೂ ಉದ್ದೇಶಗಳಿಗೂ ಅನುಕೂಲವಾಗುವಂತಹ ಕೆಲವು ಅಪ್ಲಿಕೇಶನ್ ಗನ್ನು ನೀಡಲಾಗಿದೆ. ಕ್ವಿಕ್ ಆಫೀಸ್, ಪಿಡಿಎಫ್ ಮತ್ತು ಫೋಟೊ ಎಡಿಟರ್ ಗಳು ಬಳಕೆದಾರರ ಅನುಕೂಲಕ್ಕೆ ಇದರಲ್ಲಿದೆ.
ಕಪ್ಪು, ಕೆಂಪು ಮತ್ತು ಬಿಳಿಯ ಮೂರು ಆಕರ್ಷಕ ಬಣ್ಣಗಳಲ್ಲಿ ಮೊಬೈಲ್ ಲಭ್ಯವಾಗಲಿದೆ. ಇಷ್ಟೆಲ್ಲಾ ಆಯ್ಕೆ, ಅವಕಾಶ, ಒಳ್ಳೆಯ ಲುಕ್ ಹೊಂದಿರುವ ಈ ಮೊಬೈಲ್ ಕೇವಲ 10,000ರೂ ಗೆ ನಿಮಗೆ ದೊರೆಯಲಿದೆ.


Click it and Unblock the Notifications