Home
ಮೊಬೈಲ್

ಒಪ್ಪೊ, ವಿವೊ ಮತ್ತು ಶಿಯೋಮಿಗೆ ಟಾಂಗ್ ನೀಡಿದೆ 'ನೋಕಿಯಾ 7 ಪ್ಲಸ್' ಸ್ಮಾರ್ಟ್‌ಫೋನ್!!

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿರುವ ಎಚ್‌ಎಂಡಿ ಗ್ಲೋಬಲ್ ಕಂಪೆನಿ ಭಾರತದಲ್ಲಿಂದು ಮತ್ತೆ ಮೂರು ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

By Bhaskar N J

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿರುವ ಎಚ್‌ಎಂಡಿ ಗ್ಲೋಬಲ್ ಕಂಪೆನಿ ಭಾರತದಲ್ಲಿಂದು ಮತ್ತೆ ಮೂರು ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ನೋಕಿಯಾದ ಮೂರು ಸ್ಮಾರ್ಟ್‌ಫೋನ್‌ಗಳ ಪೈಕಿ ಮದ್ಯಮ ಬೆಲೆಯ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮೊಬೈಲ್ ಪ್ರಿಯರ ಗಮನ ಸೆಳೆಯುತ್ತಿದೆ.!

ಹೌದು, ಇಂದು ಬಿಡುಗಡೆಯಾದ ನೋಕಿಯಾ 6 ಮತ್ತು ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಮಧ್ಯಮ ಬೆಲೆಯಲ್ಲಿ ಬಿಡುಗಡೆಯಾದ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮಲ್ಟಿಮೀಡಿಯಾ ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. 16ಎಂಪಿ ಸೆಲ್ಫಿ ಕ್ಯಾಮೆರಾ ಮೂಲಕ ಸೆಲ್ಫಿ ಆಧಾರಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ಟಾಂಗ್ ನೀಡಿದೆ.!

ಒಪ್ಪೊ, ವಿವೊ ಮತ್ತು ಶಿಯೋಮಿಗೆ ಟಾಂಗ್ ನೀಡಿದೆ 'ನೋಕಿಯಾ 7 ಪ್ಲಸ್' ಸ್ಮಾರ್ಟ್‌ಫೋನ್

ಇಷ್ಟು ಮಾತ್ರವಲ್ಲದೇ, 6 ಇಂಚಿನ ಬಿಗ್ ಸ್ಕ್ರೀನ್, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ಗಳಂತಹ ಫೀಚರ್ಸ್ ಮೂಲಕ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮೊಬೈಲ್ ಪ್ರಿಯರ ಗಮನ ಸೆಳೆಯುತ್ತಿದೆ. ಹಾಗಾದರೆ, ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ನೋಕಿಯಾ 7 ಪ್ಲಸ್ ಡಿಸ್‌ಪ್ಲೇ!

ನೋಕಿಯಾ 7 ಪ್ಲಸ್ ಡಿಸ್‌ಪ್ಲೇ!

ಮಲ್ಟಿಮೀಡಿಯಾದ ಉತ್ತಮ ಅನುಭವ ನೀಡುವ ಸಲುವಾಗಿ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್, 18:9 ಆಕಾರ ಅನುಪಾತದ 6 ಇಂಚಿನ ಪೂರ್ಣ ಹೆಚ್‌ಡಿ + (1080x2160) ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು 500-ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ರೇಟಿಂಗ್‌ನೊಂದಿದೆ ಬಂದಿದೆ.

ನೋಕಿಯಾ 7 ಪ್ಲಸ್ ಪ್ರೊಸೆಸರ್ ಮತ್ತು RAM!

ನೋಕಿಯಾ 7 ಪ್ಲಸ್ ಪ್ರೊಸೆಸರ್ ಮತ್ತು RAM!

ಮದ್ಯಮ ಬೆಲೆಯ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ನೋಕಿಯಾ 7 ಪ್ಲಸ್, ಆಕ್ಟಕೋರ್ ಸ್ನ್ಯಾಪ್‌ಡ್ರಾಗನ್ 660 SoC ಪ್ರೊಸೆಸರ್ ಅನ್ನು ಹೊಂದಿದೆ. 4GB RAM ಮತ್ತು 64GB ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಲಭ್ಯವಿದೆ.

ನೋಕಿಯಾ 7 ಪ್ಲಸ್ ಕ್ಯಾಮೆರಾ!!

ನೋಕಿಯಾ 7 ಪ್ಲಸ್ ಕ್ಯಾಮೆರಾ!!

ಸೆಲ್ಫಿ ಆಧಾರಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಟಾಂಗ್ ನೀಡಿದೆ. ಹಿಂಬಾಗದಲ್ಲಿ f/1.75 ಅಪಾರ್ಚರ್ ಹೊಂದಿರುವ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದರೆ, ವಿಶೇಷವೆಂಬಂತೆ f/1.75 ಅಪಾರ್ಚರ್ ಹೊಂದಿರುವ 16ಎಂಪಿ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. 2ಎಕ್ಸ್ ಆಪ್ಟಿಕಲ್ ಜ್ಹೂಮ್, ಡ್ಯುಯಲ್ ಟೋನ್ ಎಲ್‌ಇಡಿ ಫ್ಲಾಶ್, ಜಿಯೋಸ್ ಆಪ್ಟಿಕ್ಸ್ ಮತ್ತು ಆಟೊ ಪೋಕಸ್ ತಂತ್ರಜ್ಞಾನವನ್ನು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನಿನ ಕ್ಯಾಮೆರಾ ತಂತ್ರಜ್ಞಾನವನ್ನು ಹೆಚ್ಚಿಸಿವೆ.

ನೋಕಿಯಾ 7 ಪ್ಲಸ್ ಬ್ಯಾಟರಿ!

ನೋಕಿಯಾ 7 ಪ್ಲಸ್ ಬ್ಯಾಟರಿ!

ಮಲ್ಟಿಮೀಡಿಯಾ ಆಧಾರಿತ ಸ್ಮಾರ್ಟ್‌ಫೋನ್ ನೋಕಿಯಾ 7 ಪ್ಲಸ್ 3,800mAh ಬ್ಯಾಟರಿಯನ್ನು ಹೊಂದಿದೆ. ಫಾಸ್ಟ್ ಚಾರ್ಜಿಂಗ್ (2.0) ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್ 723 ಗಂಟೆಗಳ ಸ್ಟಾಂಡ್ ಬೈ ಮತ್ತು 19 ಗಂಟೆಗಳ ಟಾಕ್ ಟೈಮ್ ಚಾರ್ಜ್ ನೀಡಲಿದೆ ಎಂದು ಎಚ್ಎಂಡಿ ಗ್ಲೋಬಲ್ ಸಂಸ್ಥೆ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4 ಜಿ ವೋಲ್ಸ್, ವೈ-ಫೈ 802.11ac, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಯುಎಸ್‌ಬಿ ಟೈಪ್-ಸಿ (2.0), ಮತ್ತು 3.5 ಎಂಎಂ ಆಡಿಯೋ ಜಾಕ್‌ನಂತಹ ಫೀಚರ್ಸ್‌ಗಳನ್ನು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ ಮೂಲಕ ಕಾರ್ಯನಿರ್ವಹಣೆ ನಿಡಲಿದೆ.

ನೋಕಿಯಾ 7 ಪ್ಲಸ್ ಬೆಲೆ ಎಷ್ಟು?

ನೋಕಿಯಾ 7 ಪ್ಲಸ್ ಬೆಲೆ ಎಷ್ಟು?

6 ಇಂಚಿನ ಬಿಗ್ ಸ್ಕ್ರೀನ್, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಹಾಗೂ 16ಎಂಪಿ ಸೆಲ್ಫಿ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಭಾರತದಲ್ಲಿ 25,999 ರೂಪಾಯಿಗಳೀಗೆ ಬಿಡುಗಡೆಯಾಗಿದೆ. ಇದೇ ತಿಂಗಳ ಏಪ್ರಿಲ್ 20 ರಿಂದಲೇ ಸ್ಮಾರ್ಟ್‌ಫೋನ್ ಅನ್ನು ಬುಕ್ ಮಾಡಬಹುದಾಗಿದ್ದು, ಏಪ್ರಿಲ್ 30 ರಿಂದ ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರಲಿದೆ.

Best Mobiles in India

English summary
Nokia 7 Plus launched in India priced at Rs 25,999; check specs and features here. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+