ನೋಕಿಯಾ ಅಧಿಪತ್ಯ!..ಫ್ಲಾಶ್‌ಸೇಲ್‌ನಲ್ಲಿ ಒಂದೇ ನಿಮಿಷದಲ್ಲಿ ದಾಖಲೆ ಬರೆದ ನೋಕಿಯಾ 7!!
ನೋಕಿಯಾ 6, ನೋಕಿಯಾ 5, ನೋಕಿಯಾ 3 ನಂತರ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾ 7 ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.!!
ಆಂಡ್ರಾಯ್ಡ್ ಫೋನ್‌ಗಳ ಮೂಲಕ ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ಹೊರಟಿರುವ ನೋಕಿಯಾಗೆ ಮತ್ತೊಂದು ಭಾರಿ ಯಶಸ್ಸು ದೊರೆತಿದೆ.! ನೋಕಿಯಾ 6 ನಂತರ ನೋಕಿಯಾದ ಮತ್ತೊಂದು ಆಂಡ್ರಾಯ್ಡ್ ಫೋನ್ ನೋಕಿಯಾ 7 ಇದೀಗ ಮತ್ತೊಂದು ಭರ್ಜರಿ ದಾಖಲೆ ದಾಖಲಿಸಿದೆ.!!
ಬುಧವಾರ ಜೆಡಿ.ಕಾಮ್ ಮತ್ತು ಸ್ಯುನಿಂಗ್ ಎಂಬ ಎರಡು ಚೀನಾದ ಇ-ಕಾಮರ್ಸ್‌ಗಳಲ್ಲಿ ನಡೆದ ನೋಕಿಯಾ 7 ಫ್ಲಾಶ್‌ಸೇಲ್‌ನಲ್ಲಿ ಕೇವಲ ಒಂದೇ ನಿಮಿಷಕ್ಕೆ 1,50,000 ಕ್ಕಿಂತ ಹೆಚ್ಚು ಫೋನ್‌ಗಳು ಬುಕ್ ಆಗಿದ್ದು, ನೋಕಿಯಾ 6, ನೋಕಿಯಾ 5, ನೋಕಿಯಾ 3 ನಂತರ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾ 7 ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.!!
ಮಧ್ಯಮ ಬಜೆಟ್‌ನಲ್ಲಿ ಹೈ ಎಂಡ್ ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೋಕಿಯಾ 7 ಈಗಾಗಲೇ ಮೊಬೈಲ್ ಪ್ರಿಯರ ಗಮನ ಸೆಳೆದಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
5.2. ಇಂಚ್ ಡಿಸ್‌ಪ್ಲೇ ಮೂಲಕ ನೋಕಿಯಾ 7 ಹೊರಬಂದಿದ್ದು, ಸ್ಮಾರ್ಟ್‌ಫೋನ್ ಲೀಕದ ಸ್ಟಾಂಡರ್ಡ್ ಸೈಜ್‌ನಿಂದ ಅತ್ಯುತ್ತಮ ಲುಕ್ ಹೊಂದಿದೆ. 1080*1920 ಪಿಕ್ಸೆಲ್‌ಗಳಲ್ಲಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯುತ್ತಮ ಗುಣಮಟ್ಟ ಹೊಂದಿರಲಿದೆ ಎಂದು ಹೇಳಬಹುದು.!!

ಪ್ರೊಸೆಸರ್ ಮತ್ತು ಒಎಸ್!!
ನೋಕಿಯಾ 7 ಸ್ಮಾರ್ಟ್‌ಫೋನ್ 1.8GHZ ಆಕ್ಟಕೋರ್ ಸ್ನ್ಯಾಪ್‌ಡ್ರಾಗನ್ 630 ಪ್ರೊಸೆಸರ್ ಹೊಂದಿದ್ದು, ಫೋನ್ ಬೆಲೆಗೆ ತಕ್ಕಂತೆ ಉತ್ತಮ ಪ್ರೊಸೆಸರ್ ಇದಾಗಿದೆ.!! ಇನ್ನು ಆಂಡ್ರಾಯ್ಡ್ 7.1.1 ನ್ಯೂಗಾ ಮೂಲಕ ಫೋನ್ ಕಾರ್ಯಚರಣೆ ನಡೆಸಲಿದ್ದು, ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.!!

RAM ಮತ್ತು ROM
ನೋಕಿಯಾ 7 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಬಂದಿರುವ ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿದ್ದು, 4GB RAM ಮತ್ತು 64GB ಆಮತರಿಕ ಮೆಮೊರಿಯನ್ನು ಹೊಂದಿದೆ.!! ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವಿಸ್ತರಿಸುವ ಅವಕಾಶ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಕ್ಯಾಮೆರಾ ಮತ್ತು ಇತರ ಫೀಚರ್ಸ್ ?
ಮೊದಲಿನಿಂದಲೂ ಕ್ಯಾಮೆರಾಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ನೋಕಿಯಾ ಕಂಪೆನಿ ನೋಕಿಯಾ 7ಸ್ಮಾರ್ಟ್‌ಫೋನ್‌ನಲ್ಲಿ 16MP ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಪಿ ಕ್ಯಾಮೆರಾವನ್ನು ತಂದಿದೆ. ಇನ್ನು ಗೋರಿಲ್ಲಾ ಗ್ಲಾಸ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4Gವೋಲ್ಟ್‌ನಂತರ ಎಲ್ಲಾ ಫೀಚರ್‌ಗಳು ಫೋನ್‌ನಲ್ಲಿವೆ.!!

ಬ್ಯಾಟರಿ ಶಕ್ತಿ ಮತ್ತು ಬೆಲೆ!!
ಇಷ್ಡೆಲ್ಲಾ ಫೀಚರ್ಸ್ ಹೊತ್ತು ಬಂದಿರುವ ನೋಕಿಯಾ 7 ಸ್ಮಾರ್ಟ್‌ಫೋನ್, ತೆಗೆಯಲಾದಂತಹ 3000mAh ಲಿ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಎರಡುದಿನಗಳ ಸ್ಟಾಂಡ್‌ಬೈ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಪ್ರಸ್ತುತ ಚೀನಾದಲ್ಲಿ ಮಾತ್ರ ಮಾರಟಕ್ಕಿರುವ ನೋಕಿಯಾ 7 ಬೆಲೆ ಅಲ್ಲಿ 25,000 ರೂ.ಗಳಾಗಿವೆ.! ಭಾರತದಲ್ಲಿ ಬೆಲೆ ಕಡಿಮೆಯಾಗಲಿದೆ.!!


Click it and Unblock the Notifications
