ಬಹುನಿರೀಕ್ಷಿತ 'ನೋಕಿಯಾ 8.1' ಮೊದಲ ಮಾರಾಟ ಇಂದಿನಿಂದ ಆರಂಭ!

|

ಭಾರತದಲ್ಲಿ ಮೊಬೈಲ್ ಪ್ರಿಯರ ಮನಗೆದ್ದಿರುವ ನೋಕಿಯಾದ ಬಹುನಿರೀಕ್ಷಿತ ಬಜೆಟ್ ಸ್ಮಾರ್ಟ್‌ಪೋನ್ 'ನೋಕಿಯಾ 8.1' ಮಾರಾಟ ಇಂದಿನಿಂದ (ಡಿಸೆಂಬರ್ 20) ಆರಂಭವಾಗಿದೆ. ಈಗಾಗಲೇ ನೋಕಿಯಾ 8.1 ಅನ್ನು ಮುಂಗಡ ಬುಕ್ ಮಾಡಲು ಆಯ್ಕೆ ನೀಡಿದ್ದ ನೋಕಿಯಾ ಕಂಪೆನಿ, ಇದೀಗ ಹತ್ತು ಹಲವು ಆಫರ್‌ಗಳನ್ನು ಪ್ರಕಟಿಸುವ ಮೂಲಕ ನೋಕಿಯಾ 8.1 ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕೆ ತಂದಿದೆ.

ಇಂದು ನೋಕಿಯಾ.ಕಾಮ್ ಮತ್ತು ಅಮೆಜಾನ್. ಕಾಮ್‌ಗಳ ಮೂಲಕ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಆರು ತಿಂಗಳ ಒಳಗೆ ಒಂದು ಬಾರಿ 'ಫ್ರೀ ಸ್ಕ್ರೀನ್ ರಿಪ್ಲೇಸ್‌ಮೆಂಟ್', 2000 ರೂ. ಗಿಫ್ಟ್ ವೋಚರ್, ಪ್ರೀಪೇಡ್ ಗ್ರಾಹಕರಿಗೆ 1TB ಡೇಟಾ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ ಡೇಟಾ ಜೊತೆಗೆ ಉಚಿತ ಅಮೆಜಾನ್ ಪ್ರೈಮ್ ಸೇವೆಗಳನ್ನು ಖರೀದಿಯ ಜೊತೆಗೆ ಉಚಿತವಾಗಿ ಪಡೆಯಬಹುದಾಗಿದೆ.

ಬಹುನಿರೀಕ್ಷಿತ 'ನೋಕಿಯಾ 8.1' ಮೊದಲ ಮಾರಾಟ ಇಂದಿನಿಂದ ಆರಂಭ!

ಅತ್ಯುತ್ತಮ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಬೇಕು ಎಂದು ನೀವಂದುಕೊಂಡಿದ್ದರೆ ಅದರಲ್ಲಿ 'ನೋಕಿಯಾ 8.1' ನಿಮ್ಮ ಮೊದಲ ಆಯ್ಕೆಯಾಗಬಹುದು. ಹಾಗಾದರೆ, ಇಂದು ಮಾರಾಟಕ್ಕೆ ತಯಾರಾಗಿರುವ ನೋಕಿಯಾ 8.1' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಸ್ಮಾರ್ಟ್‌ಫೋನ್ 18.7:9 ಆಕಾರ ಅನುಪಾತದಲ್ಲಿ 6.18-ಇಂಚಿನ ಪೂರ್ಣ ಹೆಚ್‌ಡಿ + (1080x2244 ಪಿಕ್ಸೆಲ್ಗಳು) ಡಿಸ್‌ಪ್ಲೇನನ್ನು ಹೊಂದಿದ್ದು, ಶೇ. 81.5 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, ಹೆಚ್‌ಡಿಆರ್ 10 ಬೆಂಬಲ, 500 ಎನ್ಟಿಟಿಗಳ ಗರಿಷ್ಟ ಹೊಳಪು ಮತ್ತು 96 ಪ್ರತಿಶತ ಬಣ್ಣದ ಗ್ಯಾಮಟ್ ಸಾಮರ್ಥ್ಯವನ್ನು ಹೊಂದಿರುವಂತಹ ಅದ್ಬುತ ಡಿಸ್‌ಪ್ಲೇ ಇದಾಗಿದೆ.

'ನೋಕಿಯಾ 8.1' ಪ್ರೊಸೆಸರ್!

'ನೋಕಿಯಾ 8.1' ಪ್ರೊಸೆಸರ್!

ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ 2.2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 soc ಪ್ರೊಸೆಸರ್ ಅನ್ನು ಹೊಂದಿದೆ. ಇದು 4GB LPDDR4x RAM ಮತ್ತು 64GB ಅಂತರ್ಗತ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದನ್ನು ನೋಡಬಹುದಾಗಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 400 ಜಿಬಿ ವರೆಗಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಲಭ್ಯವಿದೆ.

'ನೋಕಿಯಾ 8.1' ಕ್ಯಾಮೆರಾ!

'ನೋಕಿಯಾ 8.1' ಕ್ಯಾಮೆರಾ!

Zeiss ಆಪ್ಟಿಕ್ಸ್, 1.4-ಮೈಕ್ರಾನ್ ಪಿಕ್ಸೆಲ್ಸ್, ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಒಳಗೊಂಡ 12-ಮೆಗಾಪಿಕ್ಸೆಲ್ ಮತ್ತು ಡೆಪ್ತ್ ಚಿತ್ರಗಳಿಗಾಗಿ ಮಾಧ್ಯಮಿಕ 13-ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಲೆನ್ಸ್ ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 0.9-ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದ್ದು, ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ನೋಕಿಯಾ 8.1 ಸ್ಮಾರ್ಟ್‌ಪೋನ್ 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಪೈ, 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್‌ನಂತರ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿದ್ದು, ಒಟ್ಟು 178 ಗ್ರಾಂ ಭಾರವಿದೆ.

 'ನೋಕಿಯಾ 8.1' ಬೆಲೆ ಎಷ್ಟು?

'ನೋಕಿಯಾ 8.1' ಬೆಲೆ ಎಷ್ಟು?

ವಿಶ್ವದಾಧ್ಯಂತ ಅಂದಾಜು 31,900 ರೂಪಾಯಿಗಳ ಆಸುಪಾಸಿನಲ್ಲಿ ಬಿಡುಗಡೆಯಾಗಿದ್ದ 'ನೋಕಿಯಾ 8.1', ಭಾರತದಲ್ಲಿ ಮಾತ್ರ ಕೇವಲ 26,999 ರೂಪಾಯಿಗಳಿಗೆ ಬಿಡುಗಡೆಯಾಗಿ ಅಚ್ಚರಿಮೂಡಿಸಿದೆ. ಅಮೆಜಾನ್.ಕಾಮ್, ನೋಕಿಯಾ.ಕಾಮ್ ಆನ್‌ಲೈನ್ ಜಾಲತಾಣಗಳಲ್ಲಿ ಸೇರಿದಂತೆ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ.

Best Mobiles in India

English summary
HMD Global launched the Nokia 8.1₹ 26,999 smartphone in India earlier this month, and while pre-orders began the same day at retail outlets and the Nokia website, the sale date was pegged at December 21to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X