ಡಿಸೆಂಬರ್ 6 ರಂದು ಹೆಚ್ಎಂಡಿ ಕಾರ್ಯಕ್ರಮದಲ್ಲಿ ನೋಕಿಯಾ 8.1, ನೋಕಿಯಾ 7.1 ಬಿಡುಗಡೆ
ಭಾರತದಲ್ಲಿ ಡಿಸೆಂಬರ್ 6 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮಾಧ್ಯಮ ಆಮಂತ್ರಣವನ್ನು ನೋಕಿಯಾ ಬ್ರಾಂಡ್ ನ ಹ್ಯಾಂಡ್ ಸೆಟ್ ಗಳನ್ನು ತಯಾರಿಸುವ ಮತ್ತು ವಿಶ್ವದಾದ್ಯಂತ ಮಾರಾಟ ಮಾಡುವ ಹಕ್ಕನ್ನು ಹೊಂದಿರುವ ಹೆಚ್ಎಂಡಿ ಗ್ಲೋಬಲ್ ಸಂಸ್ಥೆ ಕಳುಹಿಸಿದೆ. ಕಂಪೆನಿಯು ಎರಡು ಪ್ರಮುಖ ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಅದುವೇ ನೋಕಿಯಾ 8.1 ಮತ್ತು ನೋಕಿಯಾ 7.1.

ಈ ತಿಂಗಳ ಆರಂಭದಲ್ಲಿ, ಹೆಚ್ಎಂಡಿ ಗ್ಲೋಬಲ್ ನ ಮುಖ್ಯ ಪ್ರೊಡಕ್ಟ್ ಆಫೀಸರ್ ಆಗಿರುವ ಜುಹೋ ಸರ್ವಿಕಾಸ್ ಟ್ವೀಟರ್ ನಲ್ಲಿ ತಿಳಿಸಿರುವಂತೆ ಹಲವಾರು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕಂಪೆನಿಯು ದುಬೈ ನಲ್ಲಿ ಡಿಸೆಂಬರ್ 5 ರಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಿದೆ.ಆ ಸಮಯ ಇದೀಗ ಬಂದಿದೆ.ಊಹೆಯ ಪ್ರಕಾರ ನೋಕಿಯಾ ಎಕ್ಸ್7 ಅಥವಾ ನೋಕಿಯಾ 7.1 ಇರುವ ಸಾಧ್ಯತೆ ಇದೆ.

ನೋಕಿಯಾ 7.1 ಬೆಲೆ ಮತ್ತು ಲಭ್ಯತೆ
ಹೆಚ್ಎಂಡಿ ಗ್ಲೋಬಲ್ ಈಗಾಗಲೇ ನೋಕಿಯಾ 7.1 ನ್ನು ಆಯ್ದ ಕೆಲವು ದೇಶಗಳಲ್ಲಿ ಬಿಡುಗಡೆಗೊಳಿಸಿದೆ ಅದರಲ್ಲಿ ಯುಕೆಯ ಕೆಲವು ಪ್ರದೇಶಗಳು ಸೇರಿವೆ.ಈ ಸ್ಮಾರ್ಟ್ ಫೋನ್ ಎರಡು ವೇರಿಯಂಟ್ ನಲ್ಲಿ ಲಭ್ಯವಿದೆ. 3ಜಿಬಿ ಮೆಮೊರಿ+ 32ಜಿಬಿ ಸ್ಟೋರೇಜ್ ವೇರಿಯಂಟ್ ಮತ್ತು 4ಜಿಬಿ ಮೆಮೊರಿ+ 64ಜಿಬಿ ಸ್ಟೋರೇಜ್ ಕೆಪಾಸಿಟಿ. ಎರಡು ಮಾಡೆಲ್ ಗಳ ಬೆಲೆ ಅಂದಾಜು EUR 299 ಮತ್ತು EUR 349,ಇದನ್ನು ಇಲ್ಲಿನ ರುಪಾಯಿಗೆ ಬದಲಾಯಿಸಿ ಹೇಳುವುದಾದರೆ Rs 25,500-Rs 30,000ಆಗುತ್ತದೆ.

ನೋಕಿಯಾ 7.1 ವೈಶಿಷ್ಟ್ಯತೆಗಳು
ನೋಕಿಯಾ 7.1 ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ನ್ನು ಹೊಂದಿದೆ ಮತ್ತು 3GB RAM+32GB ಸ್ಟೋರೇಜ್ ಮತ್ತು 4GB RAM+64GB ಸ್ಟೋರೇಜ್ ವೇರಿಯಂಟ್ ನಲ್ಲಿ ಇದು ಲಭ್ಯವಿದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 400 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.
ಡಿಸ್ಪ್ಲೇ ಬಗ್ಗೆ ಹೇಳುವುದಾದರೆ 5.84-ಇಂಚಿನ FHD+ (2280x1080 ಪಿಕ್ಸಲ್) ಸ್ಕ್ರೀನ್ ಜೊತೆಗೆ 19:9 ಅನುಪಾತವನ್ನು ಹೊಂದಿದೆ ಮತ್ತು ಮೇಲ್ಬಾಗದಲ್ಲಿ ನಾಚ್ ಇದೆ.2.5ಡಿ ಸ್ಕ್ರೀನ್ ನ್ನು ಗೋರಿಲ್ಲಾ ಗ್ಲಾಸ್ 3 ನಲ್ಲಿ ಪ್ರೊಟೆಕ್ಟ್ ಮಾಡಲಾಗಿದೆ. ಇತರೆ ಎಲ್ಲಾ 2018 ರ ಲೈನ್ ಅಪ್ ನಂತೆ ನೋಕಿಯಾ 7.1 ಕೂಡ ಗೂಗಲ್ ನ ಆಂಡ್ರಾಯ್ಡ್ ಒನ್ ಇನಿಷಿಯೇಟಿವ್ ಆಗಿದೆ.ಇದು ಆಂಡ್ರಾಯ್ಡ್ 8.0 ಓರಿಯೋ ಮೂಲಕ ರನ್ ಆಗುತ್ತದೆ ಮತ್ತು ಭವಿಷ್ಯದಲ್ಲಿ ಆಂಡ್ರಾಯ್ಡ್ 9.0 ಪೈ ಅಪ್ ಡೇಟ್ ನ್ನು ಪಡೆಯಲಿದೆ.

ಕ್ಯಾಮರಾಗಳು ಹೇಗಿವೆ ಗೊತ್ತಾ?
ಕ್ಯಾಮರಾ ವಿಚಾರವನ್ನು ತಿಳಿಸುವುದಾದರೆ ಡುಯಲ್ ಹಿಂಭಾಗದ ಕ್ಯಾಮರಾವನ್ನು ಇದು ಒಳಗೊಂಡಿದ್ದು 12ಎಂಪಿ ಆಟೋಫೋಕಸ್ ಸೆನ್ಸರ್ ಜೊತೆಗೆ 1.2um ಪಿಕ್ಸಲ್ ಸೈಜ್ ನ್ನು ಹೊಂದಿದೆ ಮತ್ತು f/1.8 ಅಪರ್ಚರ್ ನ್ನು ಒಳಗೊಂಡಿದೆ ಜೊತೆಗೆ 5ಎಂಪಿ ಮೊನೋಕ್ರೋಮ್ ಸೆನ್ಸರ್ ಜೊತೆಗೆ f/2.4 ಅಪರ್ಚರ್ ನ್ನು ಹೊಂದಿರಲಿದೆ ಮತ್ತು 1.12um ಪಿಕ್ಸಲ್ ಸೈಜ್ ಇದೆ.ಎರಡೂ ಕೂಡ ZEISS ಆಪ್ಟಿಕ್ಸ್ ನಿಂದ ಬಲಶಾಲಿಯಾಗಿದೆ.ಮುಂಭಾಗದ ಕ್ಯಾಮರಾ ವಿಚಾರಕ್ಕೆ ಬಂದರೆ ಎಐ-ಆಧಾರಿತ 8MP ಸೆನ್ಸರ್ ಜೊತೆಗೆ f2.0 ಅಪರ್ಚರ್ ಮತ್ತು 84 ಡಿಗ್ರಿ ಫೀಲ್ಡ್ ವ್ಯೂ ಇರುವ ಸಾಮರ್ಥ್ಯದ ಸೆಲ್ಫೀ ಕ್ಯಾಮರಾವಿದೆ.


Click it and Unblock the Notifications