Home
ಮೊಬೈಲ್

ನಾಳೆ ಲಾಂಚ್ ಆಗಲಿದೆ ನೋಕಿಯಾ 8!..ಏನೆಲ್ಲಾ ಫೀಚರ್ಸ್ ಹೊಂದಿದೆ ಸ್ಮಾರ್ಟ್‌ಫೋನ್?!

ನೋಕಿಯಾ 8 ಸ್ಮಾರ್ಟ್‌ಫೋನ್ ಹೇಗಿದೆ? ಫೋನ್ ಫೀಚರ್ಸ್‌ಗಳೇನು?

By Bhaskar N J

ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿರುವ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳಿಗೆ ಮತ್ತೊಂದು ಅತ್ಯದ್ಬುತ ಫೋನ್ ಸೇರಿಕೊಳ್ಳಲಿದೆ ಎನ್ನಲಾಗಿದೆ.! ಈ ಹೆಚ್‌ಎಂಡಿ ಗ್ಲೋಬಲ್ ಕಂಪೆನಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸೆಪ್ಟೆಂಬರ್ 26 ರಂದು ಭಾರತದಲ್ಲಿ ನೋಕಿಯಾ 8 ಬಿಡುಗಡೆಯಾಗಲಿದೆ ಎಂದು ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

ಮುಂದಿನ ಮೈಲಿಗಲ್ಲು ನೋಕಿಯಾ ಫೋನ್‌ಗಳು ಎಂದು ಹೆಚ್‌ಎಂಡಿ ಗ್ಲೋಬಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಆಮಂತ್ರಣ ಆಧಾರದ ಮೇಲೆ HMD ಗ್ಲೋಬಲ್ ನೋಕಿಯಾ 8 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ಊಹಿಸಲಾಗಿದೆ! ಹಾಗಾದರೆ, ನೋಕಿಯಾ 8 ಸ್ಮಾರ್ಟ್‌ಫೋನ್ ಹೇಗಿದೆ? ಫೋನ್ ಫೀಚರ್ಸ್‌ಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 5.3 ಇಂಚಿನ IPS 2K ಗುಣಮಟ್ಟದ ಡಿಸ್‌ಪ್ಲೇಯ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿದೆ.! ನೋಡಲು ನೋಕಿಯಾ 5 ಮಾದರಿಯಲ್ಲಿ ಫೋನ್ ಇದ್ದು, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಪಟ್ ಕಾಣಬಹುದಾಗಿದೆ. ಹೋಮ್ ಬಟನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!!

ಡ್ಯುಯಲ್ ಕ್ಯಾಮೆರಾ ಸೆಟಪ್!!

ನೋಕಿಯಾ 8 ಟಾಪ್ ಎಂಡ್ ಸ್ಮಾರ್ಟ್ ಪೋನ್ ಆಗಿದ್ದು, ಇದರಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಕಾರ್ಲ್ ಜೀಯಸ್ ಲೆನ್ಸ್ ನೊಂದಿಗೆ 13 + 13 MP ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ನೋಕಿಯಾ 8 ಕ್ವಾಲ್ಕಮ್ ಸ್ನಾಪ್‌ಡ್ರಾಗ್ 835 ಪ್ರೋಸೆಸರ್ ಜೊತೆಯಲ್ಲಿ 4GB ಮತ್ತು 6GB RAM ಮೂಲಕ ಫೋನ್ ಹೊರಬರುತ್ತಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ನೋಕಿಯಾ 8 ಸ್ಮಾರ್ಟ್‌ಫೋನ್ ನಾನ್ ರಿಮೂವೆಬಲ್ ಲಿ-ಅಯಾನ್ 3090mAh ಬ್ಯಾಟರಿಯನ್ನು ಹೊಂದಿದೆ. ಜಾಸ್ತಿ ಫೋನ್ ಬಳಕೆದಾರರಿಗೆ ಸಹಾಯವಾಗುವಂತೆ ಬಹುಬೇಗ ಚಾರ್ಜ್ ಆಗಲು ಸ್ಮಾರ್ಟ್‌ಫೋನ್‌ನಲ್ಲಿ ಕ್ವೀಕ್ ಚಾರ್ಜರ್ 3 ಲಭ್ಯವಿದೆ.!!

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ನೋಕಿಯಾ 8 ಪ್ರಸ್ತುತ ಆಂಡ್ರಾಯ್ಡ್ 7.0 ಮೂಲಕ ರನ್ ಆಗುತ್ತಿದ್ದು, 'ಆಂಡ್ರಾಯ್ಡ್ ಓ'ಗೆ ಶೀಘ್ರವೇ ಅಪ್‌ಡೇಟ್ ಪಡೆಯಬಹುದಾಗಿದೆ.! ಇವುಗಳ ಜೊತೆಗೆ 4G LET, USB - C ಪೋರ್ಟ್, ಬ್ಲೂಟುತ್ 5.0 ಮತ್ತು Wi-Fi ಫೀಚರ್ಸ್ ಫೋನ್‌ನಲ್ಲಿವೆ.!!

Best Mobiles in India

English summary
with a tag line: “There are two sides to every story. Don’t miss out on yours,” revealed an image posted by India Today in its report.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+