Subscribe to Gizbot

ನಿರೀಕ್ಷಿತ ಮಾರಾಟವಾಗದ ನೋಕಿಯಾ ಫೋನ್‌ಗಳ ಬೆಲೆ ಇಳಿಕೆ!?..ನೋಕಿಯಾ 8 ಮೇಲೆ 8000 ಡಿಸ್ಕೌಂಟ್ಸ್!!

Written By:

ನೋಕಿಯಾ ಆಂಡ್ರಾಯ್ಡ್ ಫೋನ್ ಅನ್ನು ಹೆಚ್ಚು ಜನರು ಇಷ್ಟಪಟ್ಟರೂ ಅವುಗಳ ಬೆಲೆ ಹೆಚ್ಚಿರುವುದರಿಂದ ಖರೀದಿಗೆ ಮನಸ್ಸು ಮಾಡುತ್ತಿಲ್ಲ ಎಂದು ಹೇಳಲಾಗಿದೆ.! ಹಾಗಾಗಿ, ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದ್ದರೂ ಸಹ ನಿರೀಕ್ಷಿತ ಮಾರಾಟವಾಗದಿರುವ ನೋಕಿಯಾ ಆಂಡ್ರಾಯ್ಡ್ ಫೋನ್ ಬೆಲೆಗಳನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ.!

ಈಗಾಗಲೇ ನೋಕಿಯಾದ ಆಂಡ್ರಾಯ್ಡ್ ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 3 ಫೋನ್ ಬೆಲೆ ಸುಮಾರು 2000ದಷ್ಟು ಇಳಿಕೆಯಾಗಿದ್ದು, ಇದೀಗ ನೋಕಿಯಾದ ಹೈ ಎಂಡ್ ಸ್ಮಾರ್ಟ್‌ಫೋನ್ ನೋಕಿಯಾ 8 ಬೆಲೆ ಭಾರಿ ಇಳಿಕೆಯಾಗಲಿದೆ ಎನ್ನಲಾಗಿದೆ. ನೋಕಿಯಾ 8 ಮೇಲೆ ಭರ್ಜರಿ 8000 ಡಿಸ್ಕೌಂಟ್ಸ್ ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.!!

ನಿರೀಕ್ಷಿತ ಮಾರಾಟವಾಗದ ನೋಕಿಯಾ ಫೋನ್‌ಗಳ ಬೆಲೆ ಇಳಿಕೆ!

ಭಾರತೀಯ ಮಾರುಕಟ್ಟೆಯಲ್ಲಿ 36,999 ರೂಪಾಯಿಗಳ ಬೆಲೆ ಹೊಂದಿರುವ ನೋಕಿಯಾ 8 ಮೇಲೆ ಭರ್ಜರಿ 8000 ಡಿಸ್ಕೌಂಟ್ಸ್ ಸಿಗುವುದರಿಂದ ಫೋನ್ ಅನ್ನು ಕೇವಲ 28,999 ರೂಪಾಯಿಗಳಿಗೆ ಖರೀದಿಸಬಹುದು. ಹಾಗಾದರೆ, ನೋಕಿಯಾ 8 ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಮತ್ತು ವಿಶೇಷತೆಗಳೇನು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 5.3 ಇಂಚಿನ IPS 2K ಗುಣಮಟ್ಟದ ಡಿಸ್‌ಪ್ಲೇಯ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿದೆ.! ನೋಡಲು ನೋಕಿಯಾ 5 ಮಾದರಿಯಲ್ಲಿ ಫೋನ್ ಇದ್ದು, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಹೋಮ್ ಬಟನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!!

ಡ್ಯುಯಲ್ ಕ್ಯಾಮೆರಾ ಸೆಟಪ್!!

ನೋಕಿಯಾ 8 ಟಾಪ್ ಎಂಡ್ ಸ್ಮಾರ್ಟ್ ಪೋನ್ ಆಗಿದ್ದು, ಇದರಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಕಾರ್ಲ್ ಜೀಯಸ್ ಲೆನ್ಸ್ ನೊಂದಿಗೆ 13 + 13 MP ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ 'ನೋಕಿಯಾ 6'!!
ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ನೋಕಿಯಾ 8 ಕ್ವಾಲ್ಕಮ್ ಸ್ನಾಪ್‌ಡ್ರಾಗ್ 835 ಪ್ರೋಸೆಸರ್ ಜೊತೆಯಲ್ಲಿ 4GB ಮತ್ತು 6GB RAM ಮೂಲಕ ಫೋನ್ ಹೊರಬರುತ್ತಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ನೋಕಿಯಾ 8 ಸ್ಮಾರ್ಟ್‌ಫೋನ್ ನಾನ್ ರಿಮೂವೆಬಲ್ ಲಿ-ಅಯಾನ್ 3090mAh ಬ್ಯಾಟರಿಯನ್ನು ಹೊಂದಿದೆ. ಜಾಸ್ತಿ ಫೋನ್ ಬಳಕೆದಾರರಿಗೆ ಸಹಾಯವಾಗುವಂತೆ ಬಹುಬೇಗ ಚಾರ್ಜ್ ಆಗಲು ಸ್ಮಾರ್ಟ್‌ಫೋನ್‌ನಲ್ಲಿ ಕ್ವೀಕ್ ಚಾರ್ಜರ್ 3 ಲಭ್ಯವಿದೆ.!!

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ನೋಕಿಯಾ 8 ಪ್ರಸ್ತುತ ಆಂಡ್ರಾಯ್ಡ್ 7.0 ಮೂಲಕ ರನ್ ಆಗುತ್ತಿದ್ದು, 'ಆಂಡ್ರಾಯ್ಡ್ ಓ'ಗೆ ಶೀಘ್ರವೇ ಅಪ್‌ಡೇಟ್ ಪಡೆಯಬಹುದಾಗಿದೆ.! ಇವುಗಳ ಜೊತೆಗೆ 4G LET, USB - C ಪೋರ್ಟ್, ಬ್ಲೂಟುತ್ 5.0 ಮತ್ತು Wi-Fi ಫೀಚರ್ಸ್ ಫೋನ್‌ನಲ್ಲಿವೆ.!!

ಓದಿರಿ:ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡದೇ ಅವರ ಪೋಸ್ಟ್ ಹೈಡ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HMD Global has slashed the price of its flagship smartphone Nokia 8 (review) and mid-range smartphone Nokia 3 in India today. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot