ಭಾರತದಲ್ಲಿ ಲಾಂಚ್ ಆಯ್ತು 'ನೋಕಿಯಾ 8'!!.ಫೋನ್ ಬೆಲೆ ಎಷ್ಟು?..ಮಾರಾಟ ಯಾವಾಗ?

ಡ್ಯುಯಲ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್ 835 ನಂತಹ ಅತ್ಯಾಧುನಿಕ ಫೀಚರ್ಸ್ ಹೊತ್ತು 'ನೋಕಿಯಾ 8' ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.!

|

ಡ್ಯುಯಲ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್ 835 ನಂತಹ ಅತ್ಯಾಧುನಿಕ ಫೀಚರ್ಸ್ ಹೊತ್ತು 'ನೋಕಿಯಾ 8' ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.! ಹೆಚ್‌ಎಮ್‌ಡಿ ಗ್ಲೋಬಲ್ ದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತಕ್ಕೆ 'ನೋಕಿಯಾ 8 'ಬೆಲೆ ಎಷ್ಟು ಎಂಬುದು ಫೈನಲ್ ಆಗಿದೆ.!!

4GB RAM ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿರುವ ನೋಕಿಯಾ 8 ಭಾರತದಲ್ಲಿ 36,999 ರೂಪಾಯಿಗಳಿಗೆ ಬಿಡುಗಡೆಯಾಗಿದ್ದು, ಇದೇ ಅಕ್ಟೋಬರ್ 14 ನೇ ತಾರೀಖಿನಿಂದ ನೋಕಿಯಾ 8 ಅಮೆಜಾನ್‌ನಲ್ಲಿ ಮಾರಾಟಕ್ಕಿದ್ದು, ಆಫ್‌ಲೈನ್ ಸ್ಟೋರ್‌ಗಳಿಗೂ ಬಹುಬೇಗ ನೋಕಿಯಾ 8 ಕಾಲಿಡಲಿದೆ ಎಂದು ಹೆಚ್‌ಎಮ್‌ಡಿ ಗ್ಲೋಬಲ್ ತಿಳಿಸಿದೆ.!!

ಚೀನಾದ ಒನ್‌ಪ್ಲಸ್ ಕಂಪೆನಿಗೆ ನೇರಾನೇರಾ ಸೆಡ್ಡುಹೊಡೆಯುವಂತೆ 'ನೋಕಿಯಾ 8' ಫೀಚರ್ಸ್ ಮತ್ತು ಬೆಲೆ ಇದ್ದು, ಹಾಗಾದರೆ, ನೋಕಿಯಾ 8 ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಮತ್ತು ಫೋನ್ ವಿಶೇಷತೆಗಳೆನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 ವಿನ್ಯಾಸ ಮತ್ತು ಡಿಸ್‌ಪ್ಲೇ!!

ನೋಕಿಯಾ 8 5.3 ಇಂಚಿನ IPS 2K ಗುಣಮಟ್ಟದ ಡಿಸ್‌ಪ್ಲೇಯ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿದೆ.! ನೋಡಲು ನೋಕಿಯಾ 5 ಮಾದರಿಯಲ್ಲಿ ಫೋನ್ ಇದ್ದು, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಪಟ್ ಕಾಣಬಹುದಾಗಿದೆ. ಹೋಮ್ ಬಟನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!!

ಡ್ಯುಯಲ್ ಕ್ಯಾಮೆರಾ ಸೆಟಪ್!!

ನೋಕಿಯಾ 8 ಟಾಪ್ ಎಂಡ್ ಸ್ಮಾರ್ಟ್ ಪೋನ್ ಆಗಿದ್ದು, ಇದರಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಕಾರ್ಲ್ ಜೀಯಸ್ ಲೆನ್ಸ್ ನೊಂದಿಗೆ 13 + 13 MP ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ನೋಕಿಯಾ 8 ಕ್ವಾಲ್ಕಮ್ ಸ್ನಾಪ್‌ಡ್ರಾಗ್ 835 ಪ್ರೋಸೆಸರ್ ಜೊತೆಯಲ್ಲಿ 4GB ಮತ್ತು 6GB RAM ಮೂಲಕ ಫೋನ್ ಹೊರಬರುತ್ತಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ನೋಕಿಯಾ 8 ಸ್ಮಾರ್ಟ್‌ಫೋನ್ ನಾನ್ ರಿಮೂವೆಬಲ್ ಲಿ-ಅಯಾನ್ 3090mAh ಬ್ಯಾಟರಿಯನ್ನು ಹೊಂದಿದೆ. ಜಾಸ್ತಿ ಫೋನ್ ಬಳಕೆದಾರರಿಗೆ ಸಹಾಯವಾಗುವಂತೆ ಬಹುಬೇಗ ಚಾರ್ಜ್ ಆಗಲು ಸ್ಮಾರ್ಟ್‌ಫೋನ್‌ನಲ್ಲಿ ಕ್ವೀಕ್ ಚಾರ್ಜರ್ 3 ಲಭ್ಯವಿದೆ.!!

  ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್?

ನೋಕಿಯಾ 8 ಪ್ರಸ್ತುತ ಆಂಡ್ರಾಯ್ಡ್ 7.0 ಮೂಲಕ ರನ್ ಆಗುತ್ತಿದ್ದು, 'ಆಂಡ್ರಾಯ್ಡ್ ಓ'ಗೆ ಶೀಘ್ರವೇ ಅಪ್‌ಡೇಟ್ ಪಡೆಯಬಹುದಾಗಿದೆ.! ಇವುಗಳ ಜೊತೆಗೆ 4G LET, USB - C ಪೋರ್ಟ್, ಬ್ಲೂಟುತ್ 5.0 ಮತ್ತು Wi-Fi ಫೀಚರ್ಸ್ ಫೋನ್‌ನಲ್ಲಿವೆ.!!

Best Mobiles in India

English summary
Nokia 8 has been launched in India. HMD Global launched its flagship at an event in New Delhi on Tuesday. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X