Home
ಮೊಬೈಲ್

ಸ್ಪರ್ಧೆಯಲ್ಲಿದೆ ನೋಕಿಯಾ ಮತ್ತು ಲೆನೊವೊ

By Super
ಸ್ಪರ್ಧೆಯಲ್ಲಿದೆ ನೋಕಿಯಾ ಮತ್ತು ಲೆನೊವೊ
ತಮ್ಮದೇ ಶೈಲಿಯ ಹೊಸ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸುವ ಮೂಲಕ ನೋಕಿಯಾ ಮತ್ತು ಲೆನೊವೊ ಕಂಪನಿಗಳು ಮತ್ತೆ ಸ್ಪರ್ಧೆಗಿಳಿದಿವೆ. ನೋಕಿಯಾ ಲುಮಿಯಾ 800 ಮತ್ತು ಲೆನೊವೊ ಲಿಫೋನ್ ಎಂಬ ಸ್ಮಾರ್ಟ್ ಫೋನ್ ಗಳು ಇದೀಗ ಸ್ಪರ್ಧೆಗೆ ಸಿದ್ಧಗೊಂಡಿವೆ.

ನೋಕಿಯಾ ಲುಮಿಯಾ 800 ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಮತ್ತು 1400 MHz ಕ್ವಾಲ್ಕಂ MSM8255 ಪ್ರೊಸೆಸರ್ ಹೊಂದಿದ್ದರೆ, ಲೆನೊವೊ ಲಿಫೋನ್ ಆಂಡ್ರಾಯ್ಡ್ 2.1 ಆಪರೇಟಿಂಗ್ ಸಿಸ್ಟಮ್ ಮತ್ತು 1000 MHz ಕ್ವಾಲ್ಕಂ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ. ನೋಕಿಯಾ ಲುಮಿಯಾ ಮೊಬೈಲ್ ವಿನ್ಯಾಸ ಅತ್ಯಾಕರ್ಷಕವಾಗಿದ್ದು, ಕ್ಲಿಯರ್ ಬ್ಲಾಕ್ ಮತ್ತು ಕರ್ವ್ ಗ್ಲಾಸ್ ಕೂಡ ನೀಡಲಾಗಿದೆ.

ನೋಕಿಯಾ ಲುಮಿಯಾ 800 ವಿಶೇಷತೆ:

* 116.5 x 61.2 x 12.1 ಎಂಎಂ ಸುತ್ತಳತೆ

* 3.7 ಇಂಚಿನ ಡಿಸ್ಪ್ಲೇ, 142 ಗ್ರಾಂ ತೂಕ

* ಟಚ್ ಸ್ಕ್ರೀನ್, 480 x 800 ಪಿಕ್ಸಲ್ ರೆಸೊಲ್ಯೂಷನ್

* ಅಮೊಲೆಡ್ ಡಿಸ್ಪ್ಲೇ

* 512ಎಂಬಿ RAM

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3984 x 2992 ಪಿಕ್ಸಲ್ ರೆಸೊಲ್ಯೂಷನ್, 3x ಡಿಜಿಟಲ್ ಝೂಮ್

* 720p ಹೈಡೆಫನಿಶನ್ ವಿಡಿಯೋ

ಲೆನೊವೊ ಲಿಫೋನ್ ವಿಶೇಷತೆ:

* 120 x 60 x 12 ಸುತ್ತಳತೆ

* 3.7 ಇಂಚಿನ ಡಿಸ್ಪ್ಲೇ, 480 X 800 ಪಿಕ್ಸಲ್ ರೆಸೊಲ್ಯೂಷನ್

* TFT ಡಿಸ್ಪ್ಲೇ

* 256ಎಂಬಿ RAM

* 3.1 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮರಾ, 1x ಆಪ್ಟಿಕಲ್ ಝೂಮ್

ಎರಡೂ ಮೊಬೈಲ್ ಗಳಲ್ಲಿ ಸಂಪರ್ಕಕ್ಕೆಂದು ಬ್ಲೂಟೂಥ್, 802.11 b/ g/ n ವೈ-ಫೈ ಮತ್ತು USB 2.0 ಪೋರ್ಟ್ ನೀಡಲಾಗಿದೆ. ಜೊತೆಗೆ ಎರಡರಲ್ಲೂ 3.5 ಎಂಎಂ ಆಡಿಯೋ ಜ್ಯಾಕ್ ಕೂಡ ಇದೆ.

ಮನರಂಜನೆಗೆ ಅಗತ್ಯವಿರುವ ಆಡಿಯೋ, ವಿಡಿಯೋ ಪ್ಲೇಯರ್, MP3, MPEG4 ಮತ್ತು AAC ಮುಂತಾದ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ.

ನೋಕಿಯಾ ಲುಮಿಯಾ 800 ಮೊಬೈಲ್ ನ 1450mAh ಲೀಥಿಯಂ ಪಾಲಿಮರ್ ಬ್ಯಾಟರಿ 9.5 ಗಂಟೆ ಟಾಕ್ ಟೈಂ ಮತ್ತು 335 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಲೆನೊವೊ ಲಿಫೋನ್ 1500mAh ಲೀಥಿಯಂ ಬ್ಯಾಟರಿ ಒಳ್ಳೆ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ ಎನ್ನಲಾಗಿದೆ. ಆದರೆ ಈ ಎರಡೂ ಮೊಬೈಲ್ ಗಳ ಬೆಲೆ ಇನ್ನೂ ತಿಳಿದುಬರಬೇಕಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+