ಬರಲಿದೆ ವಿನೂತನ ನೋಕಿಯಾ 801T ಮೊಬೈಲ್

Posted By: Staff
ಬರಲಿದೆ ವಿನೂತನ ನೋಕಿಯಾ 801T ಮೊಬೈಲ್

ಮೊಬೈಲ್ ವಿಷಯಕ್ಕೆ ಬಂದರೆ ಗ್ರಾಹಕರ ಮೊದಲ ಆಯ್ಕೆ ನೋಕಿಯಾ ಆಗಿರುತ್ತೆ. ಉತ್ಕ್ರಷ್ಟ ಗುಣಮಟ್ಟದ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ಗಳ ತಯಾರಿಕೆಯಲ್ಲಿ ಮುಂದಿರುವ ನೋಕಿಯಾ ಕಂಪನಿ ಇದೀಗ ನೂತನ ಫೋನ್ ಬಿಡುಗಡೆ ಮಾಡಲಿದೆ.

ಚೈನಾದಲ್ಲಿ ಮೊದಲು ಬಿಡುಗಡೆಗೊಳ್ಳಲಿರುವ ಈ ಮೊಬೈಲ್ ಚಿತ್ರಣ, ಗುಣವಿಶೇಷಣ ತಿಳಿಯಲು ಬ್ಲಾಗ್ ಮತ್ತು ಅಂತರ್ಜಾಲದಲ್ಲೂ ಮೊಬೈಲ್ ಮಾಹಿತಿ ಹುಡುಕಾಟ ಹೆಚ್ಚಾಗಿದೆ.

ನೋಕಿಯಾ 801T ಎಂಬ ನೂತನ ಮೊಬೈಲ್ ವಿನ್ಯಾಸದಲ್ಲೂ ವಿಭಿನ್ನತೆಯಿದೆ. ಎರಡು ಬಣ್ಣಗಳ ಮಿಶ್ರಣದಲ್ಲಿ ಮೊಬೈಲ್ ವಿನ್ಯಾಸ ಸೊಗಸಾಗಿ ಮೂಡಿಬಂದಿದೆ. ಮೊಬೈಲಿನ ಮುಂಭಾಗ ಪೂರ್ಣ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, ಮೇಲೆ ನೋಕಿಯಾ ಲೇಬಲ್ ನೀಡಲಾಗಿದೆ. ಜೊತೆಗೆ ಎರಡು ಬಟನ್ ಗಳೂ ಇವೆ.

GSM ಮತ್ತು TD-SCDMA ಡ್ಯೂಯಲ್ ಮೋಡ್ ಮೊಬೈಲ್ ಇದಾಗಿದೆ. ಅಂದರೆ ಇದು ವಿಶ್ವದ ಎಲ್ಲಾ ನೆಟ್ ವರ್ಕ್ ಗಳನ್ನೂ ಬೆಂಬಲಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಳಗೆ ಆಂಟೆನಾ ಕೂಡ ಇದೆ. 3ಜಿ ಸಂಪರ್ಕ ಬೆಂಬಲಿತವಾಗಿರುವ ಈ ಮೊಬೈಲ್ 900MHz, 1800MHz, 850MHz ಮತ್ತು 1900MHz ಫ್ರಿಕ್ವೆನ್ಸಿಗಳನ್ನು ಬೆಂಬಲಿಸಲಿದೆ.

ಸದ್ಯಕ್ಕೆ ನೋಕಿಯಾ ಸಿಂಬಿಯಾನ್ 3 ಪ್ಲಾಟ್ ಫಾರ್ಮ್ ಹೊಂದಿರುವ ಈ ಮೊಬೈಲಿಗೆ ಸಿಂಬಿಯಾನ್ ಅನ್ನಾ ಅಥವಾ ಸಿಂಬಿಯಾನ್ ಬೆಲ್ಲೆ ಆಯಾಮವನ್ನು ಅಳವಡಿಸಬಹುದಾಗಿದೆ.

ನೋಕಿಯಾ 801 T ಮೊಬೈಲ್ ವಿಶೇಷತೆ:

* 125.12 ಎಂಎಂ x 64.97 ಎಂಎಂ x 11.57 ಎಂಎಂ ಸುತ್ತಳತೆ

* 171 ಗ್ರಾಂ ತೂಕ

* 4.3 ಇಂಚಿನ ಡಿಸ್ಪ್ಲೇ, 360 x 640 ಪಿಕ್ಸಲ್ ರೆಸೊಲ್ಯೂಷನ್

* 16 ಮಿಲಿಯನ್ ಬಣ್ಣಗಳ ಬೆಂಬಲಿತ ಸ್ಕ್ರೀನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್, ಆಟೊ ಫೋಕಸ್

* WAP ಮತ್ತು GPRS

* PNX6718 chipset

* GPS ಸೌಲಭ್ಯ

ನೋಕಿಯಾ 801T ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಆದರೆ ಈ ಮೊಬೈಲ್ ಕೈಗೆಟುಕುವ ದರದಲ್ಲೇ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot