ಮಾರುಕಟ್ಟೆಯಲ್ಲಿ ಗಾಸಿಪ್ ಆಗಿರುವ ನೋಕಿಯಾ ಮೊಬೈಲಿದು

Posted By: Staff
ಮಾರುಕಟ್ಟೆಯಲ್ಲಿ ಗಾಸಿಪ್ ಆಗಿರುವ ನೋಕಿಯಾ ಮೊಬೈಲಿದು
ಮಾರುಕಟ್ಟೆಯಲ್ಲಿ ದಿನೇ ದಿನೇ ಹಲವು ಕಂಪನಿಗಳಿಂದ ಹೊಸ ಹೊಸ ಆಂಡ್ರಾಯ್ಡ್ ಫೋನ್ ಗಳು ಬರುತ್ತಲೇ ಇದೆ. ಎಲ್ ಜಿ, ಸ್ಯಾಮ್ ಸಂಗ್ ಕಂಪನಿಗಳಿಂದ ಅತ್ಯುನ್ನತ ಆಂಡ್ರಾಯ್ಡ್ ಫೋನ್ ಗಳು ಹೊರಬಂದಿರುವ ಹಿನ್ನೆಲೆಯಲ್ಲಿ ನೋಕಿಯಾ ಕಂಪನಿ ತನ್ನ ಗ್ರಾಹಕರನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದೆ. ಆದರೆ ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಸುದ್ದಿಯೇ ಬೇರೆ.

ನೋಕಿಯಾ ಮತ್ತೆ ತನ್ನ ಯಶಸ್ಸನ್ನು ಹಿಂಪಡೆಯಲು ಹೊಸ ಮೊಬೈಲೊಂದನ್ನು ತರುತ್ತಿರುವುದೆಂಬ ಗಾಸಿಪ್ ಇದೆ. ನೋಕಿಯಾ N8 ಪರಿಷ್ಕ್ರತ ನೋಕಿಯಾ 803 ಎಂಬ ಮೊಬೈಲ್ ಹೊಸದಾಗಿ ಮಾರುಕಟ್ಟೆಗೆ ಹೆಜ್ಜೆ ಇಡಲಿದೆ ಎಂದು ಕೆಲವು ಅನಧಿಕೃತ ಮೂಲಗಳು ಅಂದಾಜಿಸಿವೆ.

ನೋಕಿಯಾ N8 ಮೊಬೈಲಿನ ಪರಿಷ್ಕ್ರತ ನೋಕಿಯಾ 803 ಎಂಬ ಅಂಶದ ಕುರಿತು ಹಲವು ಚರ್ಚೆಗಳೂ ನಡೆದಿದೆ. ಪರಿಷ್ಕ್ರತ ರೂಪವೆನ್ನುವುದು ಕೇವಲ ಊಹೆ ಮಾತ್ರ ಎನ್ನಲಾಗಿದ್ದು, ಈ ನೋಕಿಯಾ 803 ಮೊಬೈಲ್ NFC ತಂತ್ರಜ್ಞಾನವನ್ನು ಪಡೆದುಕೊಂಡಿದೆ ಎಂಬ ಅಂಶ ಮಾತ್ರ ಧೃಡಪಟ್ಟಿದೆ.

NFC ಹೊರತು ಪಡಿಸಿ ಮೊಬೈಲ್ ನಲ್ಲಿ HDMI out ಮತ್ತು DLNA ಸೌಲಭ್ಯವೂ ಇದೆ. ನೋಕಿಯಾದಿಂದ ಹೊರಬರಲಿರುವ 803 ಮೊಬೈಲಿನ ಕ್ಯಾಮೆರಾ ಕೂಡ ತುಂಬಾ ಉತ್ಕ್ರಷ್ಟ ಮಟ್ಟದ್ದಾಗಿದೆ, ಕ್ಯಾಮೆರಾದೊಂದಿಗೆ ಆಪ್ಟಿಕಲ್ ಝೂಮ್ ಮತ್ತು ಸೆನ್ಸಾರ್ ಕೂಡ ಇರುವುದಾಗಿ ತಿಳಿದುಬಂದಿದೆ.

ಈ ಮೊಬೈಲಿನ ಡಿಸ್ಪ್ಲೇ 3.5 ಇಂಚಿನದಾಗಿದ್ದು, WVGA ಸ್ಕ್ರೀನ್ ಪಡೆದುಕೊಂಡಿದೆ. ಸ್ಕ್ರೀನ್ ರಕ್ಷಣೆಗೆಂದು ಗೊರಿಲ್ಲಾ ಗ್ಲಾಸ್ ಕೂಡ ಒದಗಿಸಲಾಗಿದೆ. 1 GHz ಪ್ರೊಸೆಸರ್ ಮತ್ತು 512 ಎಂಬಿ RAM ಸಾಮರ್ಥ್ಯದಿಂದ ಇದರ ಕಾರ್ಯ ವೈಖರಿ ಕೂಡ ಅತ್ಯುತ್ತಮವಾಗಿದೆ ಎಂದು ಅಂದಾಜಿಸಲಾಗಿದೆ.

ಮೊಬೈಲ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ ಎಂದು ಹಲವರ ಊಹೆ ಇತ್ತು. ಆದರೆ ಮೂಲಗಳ ಪ್ರಕಾರ ನೋಕಿಯಾ 803 ಮೊಬೈಲ್ ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಆದರೆ ಅಧೀಕೃತವಾಗಿ ಈ ಮೊಬೈಲ್ ಕುರಿತು ಯಾವುದೇ ಸುದ್ದಿ ತಿಳಿದುಬಂದಿಲ್ಲದ್ದರಿಂದ ಮೊಬೈಲ್ ಪರಿಚಯಿಸಿದ ನಂತರವಷ್ಟೇ ಮೊಬೈಲ್ ಕುರಿತ ಎಲ್ಲಾ ಮಾಹಿತಿ ಕೈಸೇರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot