ನೋಕಿಯಾ ದಿಂದ 41 ಮೆಗಾ ಪಿಕ್ಸೆಲ್ ಮೊಬೈಲ್ ಕ್ಯಾಮರಾ:ನೋಕಿಯಾ 808 ಪ್ಯೂರ್ ವ್ಯೂ

Posted By: Varun
ನೋಕಿಯಾ ದಿಂದ 41 ಮೆಗಾ ಪಿಕ್ಸೆಲ್ ಮೊಬೈಲ್ ಕ್ಯಾಮರಾ:ನೋಕಿಯಾ 808 ಪ್ಯೂರ್ ವ್ಯೂ

ಈ ಸುದ್ದಿಯನ್ನು ಮಾತ್ರ ನಂಬಲೇಬೇಕು. ನೆನ್ನೆಯಿಂದ ಬಾರ್ಸಿಲೋನಾ(ಸ್ಪೇನ್)ದಲ್ಲಿ ಶುರುವಾಗಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ಕ್ಕೆ ವಿಶ್ವದ ಎಲ್ಲ ದೈತ್ಯ ಮೊಬೈಲ್ ಹಾಗು ತಂತ್ರಜ್ಞಾನ ಕಂಪನಿಗಳು ಹುಬ್ಬೇರಿಸುವ ಉತ್ಪನ್ನಗಳನ್ನು ಇಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದನ್ನು ನೀವು ನಮ್ಮ ಹಲವಾರು ಹಿಂದಿನ ಅಂಕಣಗಳಲ್ಲಿ ಓದಿದ್ದೀರಿ.

ನೋಕಿಯಾ ಅಂತೂ ಇದಕ್ಕೆ ಎಂತಲೇ ಲುಮಿಯ ಸ್ಮಾರ್ಟ್ ಫೋನ್ ಗಳ ಸಿದ್ಧತೆ ಮಾಡಿಕೊಂಡಿತ್ತು. ನೆನ್ನೆ ವಿಶ್ವವೇ ಹುಬ್ಬೆರಿಸುವಂಥಾ 41 ಮೆಗಾ ಪಿಕ್ಸೆಲ್ ಸ್ಮಾರ್ಟ್ ಫೋನ್ ಅನಾವರಣ ಗೊಳಿಸಿ ಅಚ್ಚರಿ ಗೊಳಿಸಿದೆ.

ನೋಕಿಯಾ 808 ಪ್ಯೂರ್ ವ್ಯೂ ಹೆಸರಿನ ಈ ಸ್ಮಾರ್ಟ್ ಫೋನ್ ನಲ್ಲಿ 41 ಮೆಗಾ ಪಿಕ್ಸೆಲ್ ಕ್ಯಾಮರಾ ಸೆನ್ಸರ್, ಕಾರ್ಲ್ ಜೀಇಸ್ ಆಪ್ಟಿಕ್ಸ್ ಹೊಂದಿದೆ. ಇದರ ವಿಶೇಷ ಏನೆಂದರೆ ನೀವು ವಿವಿಧ ಮೆಗಾ ಪಿಕ್ಸೆಲ್ ಗಳಲ್ಲಿ ಚಿತ್ರ ಕ್ಲಿಕ್ಕಿಸಿ ಜೋಡಿಸಬಹುದು. ಅಂದರೆ ನೀವು 38 ಮೆಗಾ ಪಿಕ್ಸೆಲ್ ವರೆಗೂ ಶೂಟ್ ಮಾಡಿ 4:3 ಅನುಪಾತದ ಚಿತ್ರ ತೆಗೆಯಬಹುದು ಹಾಗು 34 ಮೆಗಾ ಪಿಕ್ಸೆಲ್ ಚಿತ್ರವನ್ನು 16:9 ಅನುಪಾತದಲ್ಲಿ ತೆಗ್ಯುವ ಸಾಮರ್ಥ್ಯವಿದೆ.

ಇದರ ಸೆನ್ಸರ್ ನೋಕಿಯಾ N8 ಮಾಡೆಲ್ ನ ಸೆನ್ಸರ್ ಗಿಂತಲೂ 2.5 ಪಟ್ಟು ದೊಡ್ಡದಾಗಿದ್ದು, ಇದರಿಂದಾಗಿ 1080 ಪ್ರೋಗೆರ್ಸ್ಸಿವ್ ರೆಕಾರ್ಡಿಂಗ್, ಅದೂ 30 ಫ್ರೇಮ್ ಪ್ರತಿ ಸೆಕಂಡ್ ಗೆ ವೀಡಿಯೊ ಚಿತ್ರೀಕರಿಸಬಹುದಾಗಿದೆ.

ಇದರ ಇತರ ಫೆಚರ್ ಗಳು ಈ ರೀತಿ ಇವೆ:

  • ನೋಕಿಯಾ ಬೆಲ್ ಓ.ಎಸ್

  • 4 ಇಂಚಿನ, ಗೊರಿಲ್ಲಾ ಗ್ಲಾಸ್ AMOLED ಡಿಸ್ಪ್ಲೇ

  • 1.3GHz ಪ್ರೊಸೆಸರ್

  • 16GB ಆಂತರಿಕ ಮೆಮೊರಿ

  • 32GB ವಿಡಿಯೋ ಸಂಗ್ರಹಿಸಬಹುದಾದ ಮೈಕ್ರೊ ಕಾರ್ಡ್ ಬೆಂಬಲ.
 

ನೋಕಿಯಾ 808 ಪ್ಯೂರ್ ವ್ಯೂ, ಮೇ 2012 ರಲ್ಲಿ ಬಿಡುಗಡೆಯಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot