ಸ್ಮಾರ್ಟ್ ಫೋನ್ ಯಾಕೆ..? ನೋಕಿಯಾ ಬನನಾ ಫೋನ್ ನಲ್ಲಿ ವಾಟ್ಸ್ಆಪ್, ಫೇಸ್ ಬುಕ್...!
ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಫೀಚರ್ ಫೋನ್ ಗಳ ಭರಾಟೆಯೂ ಅಧಿಕವಾಗಿದ್ದು, ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಿರುವ ನೋಕಿಯಾ 8110 4G ಫೋನ್ ಮತ್ತೊಂದು ಹೊಸ ಅಪ್ ಡೇಟ್ ಅನ್ನು ಪಡೆದುಕೊಳ್ಳಲಿದೆ. ಮಾರುಕಟ್ಟೆಗೆ ಜಿಯೋ ಫೋನ್ 2 ಲಾಂಚ್ ಆಗಿರುವ ಹಿನ್ನಲೆಯಲ್ಲಿ ನೋಕಿಯಾ 8110 4G ಫೋನ್ ಹಲವು ಹೊಸ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇದಲ್ಲದೇ ಸೋಶಿಯಲ್ ಮೀಡಿಯಾ ಗಳನ್ನು ಬಳಕೆಗೆ ಅವಕಾಶ ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಜಿಯೋ ಫೋನ್ ಫೀಚರ್ ಫೋನ್ ಎನ್ನಿಸಿಕೊಂಡರು ಸಹ ಸ್ಮಾರ್ಟ್ ಫೋನ್ ಮಾದರಿಯಲ್ಲಿ ಆಯ್ಕೆಗಳನ್ನು ಒಳಗೊಂಡಿದೆ. ಈ ಹಿನ್ನಲೆಯಲ್ಲಿ ಇದಕ್ಕೆ ಸೆಡ್ಡುಹೊಡೆಯುವ ಸಲುವಾಗಿ ನೋಕಿಯಾ ತನ್ನ 4G ಫೋನಿನಲ್ಲಿಯೂ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಈ ಹೊಸ ಮಾದರಿಯ ಆಯ್ಕೆಗಳನ್ನು ನೀಡಲಿದೆ. ನೋಡಲು ಹೊಸ ವಿನ್ಯಾಸವನ್ನು ಹೊಂದಿರುವ ಈ ಫೋನ್ ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.

4G ಫೋನ್:
ನೋಕಿಯಾ 8110 4G ಫೋನ್ ಹೆಸರಿನಲ್ಲಿಯೇ ಇರುವಂತೆ 4G ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಇದಲ್ಲದೇ ಜಿಯೋ ಫೋನಿನಲ್ಲಿಯೂ ಇರದೆ ಇರುವಂತ ಆಯ್ಕೆಗಳನ್ನು ಹೊಂದಿದೆ. ಜಿಯೋ ಫೋನಿನಲ್ಲಿಯೇ ಇಲ್ಲದಿರುವಂತಹ ವೈಪೈ ಹಾಟ್ ಸ್ಪಾಟ್ ಆಯ್ಕೆಯನ್ನು ಒಳಗೊಂಡಿದೆ. ಇದೇ ಈ ಫೋನಿನ ವಿಶೇಷತೆಗಳಲ್ಲಿ ಪ್ರಮುಖವಾಗಲಿದೆ. ಇದರಿಂದಾಗಿ ಹೆಚ್ಚಿನ ಮಂದಿ ಈ ಫೋನ್ ಖರೀದಿಯ ಮೇಲೆ ಸಾಕಷ್ಟು ಪ್ರಭಾವನ್ನು ಬೀರಲಿದೆ.

KaiOS ಸಾಫ್ಟ್ ವೇರ್:
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಫೀಚರ್ ಫೋನ್ ಗಳಲ್ಲಿ ಫೈರ್ ಫಾಕ್ಸ್ ನಿರ್ಮಾಣದ KaiOS ಸಾಫ್ಟ್ ವೇರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ KaiOS ಸಾಫ್ಟ್ ವೇರ್ ಅನ್ನು ನೋಕಿಯಾ 8110 4G ಫೋನ್ ನಲ್ಲಿಯೂ ಅಳವಡಿಸಲಾಗಿದೆ. ಇದು ಇನ್ನು ಮುಂದೆ ಸೋಶಿಯಲ್ ಮೀಡಿಯಾಗಳನ್ನು ಸಪೋರ್ಟ್ ಮಾಡಲಿದೆ.

ವಿಶೇಷ ವಿನ್ಯಾಸ:
ಈ ಹಿಂದೆಯೂ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ನೋಕಿಯಾ 8110 4G ಫೋನ್ ವಿಶೇಷ ವಿನ್ಯಾಸವನ್ನು ಹೊಂದಿದ್ದು, ಬಾಳೆಹಣ್ಣಿನ ಮಾದರಿಯಲ್ಲಿ ಇದ್ದು, ಇದಕ್ಕಾಗಿಯೇ ಹಲವು ಮಂದಿಯನ್ನು ಆಕರ್ಷಿಸುತ್ತು. ಇದರೊಂದಿಗೆ ಉದ್ದವಾಗಿ ನೋಡಲು ಸುಂದರವಾಗಿ ನೋಕಿಯಾ 8110 4G ಫೋನ್ ಕಾಣುತ್ತಿದೆ. ಇದು ಸಹ ಈ ಫೋನ್ ಬೇಡಿಕೆಯ ಮೇಲೆ ಪರಿಣಾಮವನ್ನು ಬೀರಲಿದೆ.

ಸೋಶಿಯಲ್ ಮೀಡಿಯಾ:
ನೋಕಿಯಾ 8110 4G ಫೋನ್ ಇನ್ನು ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ವಾಟ್ಸ್ಆಪ್, ಫೇಸ್ ಬುಕ್. ಯೂಟ್ಯೂಬ್ ಸೇರಿದಂತೆ ಹಲವು ಮೀಡಿಯಾಗಳನ್ನು ಇದರಲ್ಲಿ ಬಳಕೆ ಮಾಡುವ ಅವಕಾಶ ನೀಡಲಾಗಿದೆ. ಇದರಿಂದಾಗಿ ನೋಕಿಯಾ 8110 4G ಫೋನ್ ಬೇಡಿಕೆ ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದೆ.

ಜಿಯೋ ಫೋನಿಗೆ ಸಂಕಷ್ಟ:
ಮಾರುಕಟ್ಟೆಯಲ್ಲಿ ಹೆಚ್ಚಿನ ಮಂದಿಯನ್ನು ಆಕರ್ಷಿಸಿರುವ ಜಿಯೋ ಫೋನ್ ಗೆ ನೋಕಿಯಾ 8110 4G ಫೋನ್ ಖಂಡಿತವಾಗಿ ಸೆಡ್ಡು ಹೊಡೆಯಲಿದೆ. ವಿನ್ಯಾಸ, ಗುಣಮಟ್ಟ ಮತ್ತು ಬಣ್ಣಗಳಲ್ಲಿ ನೋಕಿಯಾ 8110 4G ಫೋನ್ ಮುಂದೆ ಜಿಯೋ ಫೋನ್ ಎನೇನು ಇಲ್ಲ ಎನ್ನಲಾಗಿದೆ. ಇದಲ್ಲದೇ ಸೋಶಿಯಲ್ ಮೀಡಿಯಾ ಸಹ ಇರುವದರಿಂದ ಬೇಡಿಕೆಯೂ ಹೆಚ್ಚಾಗಿಯೇ ಇರಲಿದೆ.


Click it and Unblock the Notifications








