ಅಮೇಜಾನ್ ನಲ್ಲಿ ನೋಕಿಯಾ ಪ್ಯೂರ್ ವ್ಯೂ ಗೆ ಭರ್ಜರಿ ರಿಯಾಯಿತಿ
ನೋಕಿಯಾದ ನೂತನ ಪೆಂಟಾ ಕ್ಯಾಮರಾ ಇರುವ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ನೋಕಿಯಾ 9 ಪ್ಯೂರ್ ವ್ಯೂಗೆ ಅಮೇಜಾನ್ ಇಂಡಿಯಾದಲ್ಲಿ 2,299 ರುಪಾಯಿಯ ಭರ್ಜರಿ ರಿಯಾಯಿತಿ ಇದೆ. ಭಾರತದಲ್ಲಿ ಕಳೆದ ತಿಂಗಳು ಈ ಸ್ಮಾರ್ಟ್ ಫೋನ್ ಬಿಡುಗಡೆಗೊಂಡಿತ್ತು. ಆಫ್ ಲೈನ್ ಮತ್ತು ಆನ್ ಲೈನ್ ಎರಡರಲ್ಲೂ ಕೂಡ ಈ ಡಿವೈಸ್ ನ ಬೆಲೆ 49,999 ರುಪಾಯಿಗಳು. ಆದರೆ ಗ್ರಾಹಕರು ಇದನ್ನು ಅಮೇಜಾನ್ ಇಂಡಿಯಾದಲ್ಲಿ 47,700 ರುಪಾಯಿಯ ಆಫರ್ ಬೆಲೆಯಲ್ಲಿ ಖರೀದಿಸುವ ಸುವರ್ಣಾವಕಾಶವಿದೆ.

2,299 ರುಪಾಯಿಯ ನೋಕಿಯಾ 9 ಗೆ ರಿಯಾಯಿತಿಯು ಹೆಚ್ಎಂಡಿ ಗ್ಲೋಬಲ್ ನಿಂದ ಲಭ್ಯವಾಗುತ್ತಿಲ್ಲ. ಇದು ಕೇವಲ ಅಮೇಜಾನ್ ಇಂಡಿಯಾ ವೆಬ್ ಸೈಟ್ ನ ಮಾರಾಟಗಾರರಿಂದ ಲಭ್ಯವಾಗುತ್ತಿರುವ ಆಫರ್ ರಿಯಾಯಿತಿಯಾಗಿದೆ.ಈ ಸ್ಮಾರ್ಟ್ ಫೋನ್ ಬಿಡುಗಡೆಗೊಂಡಾಗ ಕಂಪೆನಿಯು 9,999 ರುಪಾಯಿ ಬೆಲೆಬಾಳುವ ನೋಕಿಯಾ 705 ಇಯರ್ ಬಡ್ಸ್ ನ್ನು ಉಚಿತವಾಗಿ ಸ್ಮಾರ್ಟ್ ಫೋನಿನ ಜೊತೆಗೆ ಆಫರ್ ಮಾಡಿತ್ತು. ಅಷ್ಟೇ ಅಲ್ಲ ಹೆಚ್ ಡಿ ಎಫ್ ಸಿ ಬ್ಯಾಂಕಿನ ಗ್ರಾಹಕರಿಗೆ 10% ಹೆಚ್ಚಿನ ರಿಯಾಯಿತಿಯನ್ನು ಕೂಡ ಆಫರ್ ಮಾಡಲಾಗಿತ್ತು.
ಇದೀಗ 2,299 ರುಪಾಯಿ ಆಫರ್ ನ್ನು ಇ-ಕಾಮರ್ಸ್ ಪೋರ್ಟಲ್ ನಲ್ಲಿ ನೀಡಲಾಗುತ್ತಿದೆ ಹೆಚ್ಚುವರಿಯಾಗಿ ಹಳೆಯ ಫೋನ್ ಎಕ್ಸ್ ಚೇಂಜ್ ಮಾಡಿದರೆ 6,000 ರುಪಾಯಿವರೆಗೆ ರಿಯಾಯಿತಿ ಪಡೆಯುವುದಕ್ಕೆ ಅವಕಾಶವಿರುತ್ತದೆ. ಅಮೇಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದೆ. ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ನಲ್ಲಿ ಖರೀದಿಸಿದರೆ ಹೆಚ್ಚುವರಿಯಾಗಿ 5% ಕ್ಯಾಷ್ ಬ್ಯಾಕ್ ರಿಯಾಯಿತಿ ಪಡೆದುಕೊಳ್ಳಬಹುದು. ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ ಕೂಡ 5% ರಿಯಾಯಿತಿ ಇರುತ್ತದೆ.

ವೈಶಿಷ್ಟ್ಯತೆಗಳು ಮತ್ತು ವಿಶೇಷತೆಗಳು:
ಮೇಲೆ ಈಗಾಗಲೇ ತಿಳಿಸಿರುವಂತೆ, ನೋಕಿಯಾ 9 ಪ್ಯೂರ್ ವ್ಯೂ ನಲ್ಲಿ 5 ಕ್ಯಾಮರಾ ಸೆಟ್ ಅಪ್ ಇರುವುದೇ ಪ್ರಮುಖ ಹೈಲೆಟ್.ಇದರಲ್ಲಿ ಐದು 12-ಮೆಗಾಪಿಕ್ಸಲ್ ನ ಸೆನ್ಸರ್ ಜೊತೆಗೆ f/1.82 ಅಪರ್ಚರ್ ಮತ್ತು ಫೇಸ್ ಡಿಟೆಕ್ಷನ್ ಆಟೋ ಫೋಕಸ್ ಲಭ್ಯವಿದೆ. ಅದರಲ್ಲಿ ಮೂರು ಮೊನೋಕ್ರೋಮ್ ಲೆನ್ಸ್ ಮತ್ತು ಎರಡು ಆರ್ ಜಿಬಿ ಸೆನ್ಸರ್ ಆಗಿದೆ. ಉತ್ತಮ ಇಮೇಜ್ ಲಭ್ಯವಾಗುವುದಕ್ಕಾಗಿ ಐದು ಸೆನ್ಸರ್ ಗಳು ಒಟ್ಟಿಗೆ ಕೆಲಸ ಮಾಡುತ್ತದೆ.
ಎಐ ಜೊತೆಗೆ ಕ್ಯಾಮರಾವು 1,200 ಲೇಯರ್ ನ ಅಡಿಪಾಯವನ್ನು ಹೊಂದಿದೆ. ಡೀಫಾಲ್ಟ್ ಆಗಿ RAW ನಲ್ಲಿ ಕ್ಯಾಮರಾ ಇಮೇಜ್ ಗಳನ್ನು ತೆಗೆಯುತ್ತದೆ ಆದರೆ ಸೆಟ್ಟಿಂಗ್ಸ್ ನಲ್ಲಿ ಆಯ್ಕೆಯನ್ನು ಬದಲಿಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ. ಹೆಚ್ ಡಿಆರ್ ಮೋಡ್ ಮತ್ತು ಪೊರ್ಟೈಟ್ ಮೋಡ್ ನಲ್ಲಿ ಫೋಟೋ ಕ್ಯಾಪ್ಚರ್ ಮಾಡುವುದಕ್ಕೆ ಅವಕಾಶವಿದೆ.
ವಿಶೇಷತೆಗಳ ವಿಚಾರಕ್ಕೆ ಬಂದರೆ ನೋಕಿಯಾ 9 ಪ್ಯೂರ್ ವ್ಯೂ ನೋ ನಾಚ್ 5.99-ಇಂಚಿನ pOLED ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಷನ್ ಮತ್ತು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ನ್ನು ಹೊಂದಿದೆ.ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಜೊತೆಗೆ 6ಜಿಬಿ ಮೆಮೊರಿ ಮತ್ತು 128ಜಿಬಿ ಸ್ಟೋರೇಜ್ ವ್ಯವಸ್ಥೆ ಲಭ್ಯವಿದೆ. ಭದ್ರತೆಗಾಗಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ.

ನೋಕಿಯಾ 9 ಪ್ಯೂರ್ ವ್ಯೂ ಫಸ್ಟ್ ಲುಕ್
ಈ ಸ್ಮಾರ್ಟ್ ಫೋನ್ ಐಪಿ67 ಸರ್ಟಿಫಿಕೇಟ್ ಹೊಂದಿದ್ದು ನೀರು ಮತ್ತು ಧೂಳಿನಿಂದ ಹಾಳಾಗದಂತಹ ನಿಯಂತ್ರಕ ಶಕ್ತಿಯನ್ನು ಹೊಂದಿದೆ. ಕ್ಯೂಐ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆ ಇದ್ದು 3,320mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇತರೆ ನೋಕಿಯಾ ಸ್ಮಾರ್ಟ್ ಪೋನ್ ಗಳಂತೆ ಹೆಚ್ ಎಂಡಿ ಗ್ಲೋಬಲ್ ನ ನೋಕಿಯಾ 9ಪ್ಯೂರ್ ವ್ಯೂ ಕೂಡ ಗೂಗಲ್ ನ ಆಂಡ್ರಾಯ್ಡ್ ಒನ್ ಪ್ರೋಗ್ರಾಮ್ ಜೊತೆಗೆ ಆಂಡ್ರಾಯ್ಡ್ ಪೈ ನಲ್ಲಿ ರನ್ ಆಗುತ್ತದೆ.

ವೈಶಿಷ್ಟ್ಯತೆಗಳು ನೋಕಿಯಾ 9 ಪ್ಯೂರ್ ವ್ಯೂ
ಬೆಲೆ 49,999
- ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
- ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 9 ಪೈ
- ಡಿಸ್ಪ್ಲೇ OLED-5.99-ಇಂಚಿನ-QHD (2560 x 1440 ಪಿಕ್ಸಲ್ಸ್)
- ಇಂಟರ್ನಲ್ ಮೆಮೊರಿ 6GB RAM + 128GB ಸ್ಟೋರೇಜ್
- ಹಿಂಭಾಗದ ಕ್ಯಾಮರಾ ಪೆಂಟಾ - 12MP
- ಮುಂಭಾಗದ ಕ್ಯಾಮರಾ 20MP
- ಬ್ಯಾಟರಿ 3,500mAh


Click it and Unblock the Notifications








