ಭಾರತದಲ್ಲಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ನೋಕಿಯಾ 9 ಪ್ಯೂರ್ ವ್ಯೂ!

|

ಜನಪ್ರಿಯ 'ನೋಕಿಯಾ' ಬ್ರ್ಯಾಂಡ್ ಅಡಿಯಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಏಳು ಕ್ಯಾಮೆರಾಗಳುಳ್ಳ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬರಲು ತಯಾರಾಗಿದೆ. ಹೆಚ್​ಎಂಡಿ ಗ್ಲೋಬಲ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿರುವ ಬಗ್ಗೆ ಟ್ವಿಟರ್ ಮೂಲಕ ನೋಕಿಯಾ ಸುಳಿವು ನೀಡಿದೆ. ಅಧಿಕೃತ ನೋಕಿಯಾ ಮೊಬೈಲ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ನೋಕಿಯಾ 9 ಪ್ಯೂರ್ ವ್ಯೂ ಬಿಡುಗಡೆ ಮಾಡುವ ಬಗ್ಗೆ ಟೀಸರ್ ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ನೋಕಿಯಾ 9 ಪ್ಯೂರ್ ವ್ಯೂ!

ಹೌದು, ಬಾರ್ಸಿಲೋನಾದಲ್ಲಿ ನಡೆದ 'ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ 2019' ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ನೋಕಿಯಾದ ಬಹುನಿರೀಕ್ಷಿತ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ವಿಶ್ವದ ಮೊಟ್ಟ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್ ಎಂಬ ಕೀರ್ತಿ ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್, ದೇಶದಲ್ಲಿ 50,000ರೂ. ಗಳಿಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬರುತ್ತಿದೆ ಎಂದು ನೋಕಿಯಾದ ಮೂಲಗಳು ಈಗಾಗಲೇ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಹಿಂಭಾಗದಲ್ಲಿರುವ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಒಟ್ಟು ಐದು ಕ್ಯಾಮೆರಾಗಳನ್ನು ಹೊಂದಿರುವ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುವುದನ್ನು ಕಂಪೆನಿ ಖಚಿತಪಡಿಸಿದ್ದು, ಜುಲೈ 12 ರಂದು ಆಯೋಜನೆಯಾಗಿರುವ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಹಾಗಾದರೆ, ವಿಶ್ವದ ಮೊಟ್ಟ ಮೊದಲ ಕ್ಯಾಮೆರಾಗಳ ಸ್ಮಾರ್ಟ್‌ಫೋನ್ 'ನೋಕಿಯಾ 9 ಪ್ಯೂರ್‌ ವ್ಯೂವ್' ಪೀಚರ್ಸ್ ಏನಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೊಟ್ಟ ಮೊದಲ 7 ಕ್ಯಾಮೆರಾ ಫೋನ್

ಮೊಟ್ಟ ಮೊದಲ 7 ಕ್ಯಾಮೆರಾ ಫೋನ್

ಮೊಬೈಲ್ ದಿಗ್ಗಜ ನೋಕಿಯಾ ತನ್ನ ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್ ನಲ್ಲಿ ಇದೇ ಮೊದಲ ಬಾರಿಗೆ 7 ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ವಿಶ್ವ ಮಟ್ಟದಲ್ಲಿ ತನ್ನ ಸ್ಥಾನವನ್ನು ಎತ್ತರಿಸಿಕೊಂಡಿದೆ. 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ವಿಶ್ವದ ಮೊಟ್ಟ ಮೊದಲ 7 ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹಿಂಬಾಗದಲ್ಲಿ ಐದು ಹಾಗೂ ಮುಂಭಾಗದಲ್ಲಿ ಎರಡು ಸೆಲ್ಫೀ ಕ್ಯಾಮೆರಾಗಳನ್ನು ನೀಡಿರುವುದನ್ನು ನಾವು ನೋಡಬಹುದು.

 ಕ್ಯಾಮೆರಾಗಳ ಸಾಮರ್ಥ್ಯ

ಕ್ಯಾಮೆರಾಗಳ ಸಾಮರ್ಥ್ಯ

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನಿನಲ್ಲಿ 5 ರಿಯರ್ ಕ್ಯಾಮೆರಾಗಳಿದ್ದು, ಪ್ರರಿಯೊಂದು ಕ್ಯಾಮೆರಾಗಳು 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಇದರಲ್ಲಿ ಮೂರು ಕ್ಯಾಮೆರಾಗಳು ಮೊನೋಕ್ರೊಮ್ ಕ್ಯಾಮೆರಾಗಳಾಗಿದ್ದರೆ, ಇನ್ನುಳಿದ ಎರಡು ಕ್ಯಾಮೆರಾಗಳು RGB ಕ್ಯಾಮೆರಾವನ್ನು ಹೊಂದಿವೆ. 1200 ಲೇಯರ್ಸ್‌ಗಳ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಡೇಪ್ತ್ ಸಪೋರ್ಟ್‌ ಕ್ಯಾಮೆರಾಗಳಾಗಿವೆ. 20 ಮೆಗಾಪಿಕ್ಸೆಲ್ ಕ್ಯಾಮೆರಾವು ಸೆಲ್ಫೀಗಾಗಿ ಸಂಯೋಜನೆಯಾಗಿದೆ.

ಡಿಸ್‌ಪ್ಲೇ ಮತ್ತು ರಚನೆ ಹೇಗಿದೆ?

ಡಿಸ್‌ಪ್ಲೇ ಮತ್ತು ರಚನೆ ಹೇಗಿದೆ?

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ 2K pOLED ಸ್ಕ್ರೀನ್ ಒಳಗೊಂಡಿರುವ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವಂತಹ ರಚನೆಯನ್ನು ಹೊಂದಿದ್ದು, ಕರ್ವ್ ಆಕಾರದದಲ್ಲಿರುವ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಸುತ್ತಲೂ ಕಡಿಮೆ ಅಂಚನ್ನು ಒಳಗೊಂಡು ಅತ್ಯುತ್ತಮ ಲುಕ್ ಹೊಂದಿದೆ ಎಂದು ಹೇಳಬಹುದು. ಇನ್ನು 1440x2960 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಮೆಮೊರಿ ಮತ್ತು RAM ಸಾಮರ್ಥ್ಯ

ಮೆಮೊರಿ ಮತ್ತು RAM ಸಾಮರ್ಥ್ಯ

ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 SoC ನಿಂದ ಚಾಲಿತವಾಗಿರುವ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. 6GB RAM ಸಾಮರ್ಥ್ಯದೊಂದಿಗೆ 128GB ಆಂಗರಿಕ ಸಂಗ್ರಹ ಹಾಗೂ 8 ಜಿಬಿ RAM ಸಾಮರ್ಥ್ಯದೊಂದಿಗೆ 256 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿರುವ ಈ ಎರಡೂ ಮಾದರಿ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡಲಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್!

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನಿನಲ್ಲಿ 3320mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಲಾಗಿದ್ದು, ವೈರ್‌ಲೆಸ್ ಹಾಗೂ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಅಡ್ರಿನೊ 630 GPU, ಡ್ಯೂಯಲ್ ಸಿಮ್ ಬೆಂಬಲ, ಇನ್-ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಐಪಿ67 ವಾಟರ್-ರೆಸಿಸ್ಟೆಂಟ್ ರೇಟಿಂಗ್ ಸೇರಿದಂತೆ ಒಂದೇ ಸ್ಪೀಕರ್ ಹೊಂದಿರುವ ಹಲವು ವಿಶೇಷತೆಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಬೆಲೆ ರೂ 50,000 ರೂ. ಒಳಗಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
The Nokia 9 PureView is finally coming to India, as teased by HMD Global. The official Nokia Mobile India Twitter account today teased the launch of Nokia 9 PureView in the sub-continent. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X