ಇದೇ ತಿಂಗಳು ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ!!
ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕುತ್ತಿರುವ ಜನಪ್ರಿಯ 'ನೋಕಿಯಾ' ಬ್ರ್ಯಾಂಡ್ ಅಡಿಯಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಏಳು ಕ್ಯಾಮೆರಾಗಳುಳ್ಳ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ. ಹೆಚ್ಎಂಡಿ ಗ್ಲೋಬಲ್ ಕಂಪೆನಿಯ ಹೊಸ ಈ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ.
ಹೌದು, ಹೆಚ್ಎಂಡಿ ಗ್ಲೋಬಲ್ ಜಾಗತಿಕವಾಗಿ 'ನೋಕಿಯಾ 9 ಪ್ಯೂರ್‌ವೀವ್' ಎಂಬ ತನ್ನ ವಿನೂತನ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಈ ನೂತನ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 7 ಕ್ಯಾಮೆರಾಗಳಿವೆ ಎಂದು ತಿಳಿದುಬಂದಿದೆ. ಇಷ್ಟೊಂದು ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಮೊಬೈಲ್ ಎಂಬ ಖ್ಯಾತಿ ನೋಕಿಯಾ 9 ಪಾಲಾಗಲಿದೆ.

ಗತಕಾಲದ ವೈಭವವನ್ನು ಮತ್ತೆ ವಾಪಸ್ ಪಡೆಯಲು ಯತ್ನಿಸುತ್ತಿರುವ ನೋಕಿಯಾ ಬ್ರ್ಯಾಂಡ್ ಪುನರ್ ಸ್ಥಾಪಿಸಲು ಹೆಚ್ಎಂಡಿ ಗ್ಲೋಬಲ್ ಪ್ರಯತ್ನದ ಫಲವಾಗಿ 'ನೋಕಿಯಾ 9 ಪ್ಯೂರ್‌ವೀವ್' ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತದೆ. ಹಾಗಾದರೆ, ವಿಶ್ವದ ಮೊಟ್ಟ ಮೊದಲ ಏಳು ಕ್ಯಾಮೆರಾಗಳುಳ್ಳ ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬಿಡುಗಡೆ ಯಾವಾಗ?
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದು ಹೇಳಲಾಗಿರುವ 'ನೋಕಿಯಾ 9 ಪ್ಯೂರ್‌ವೀವ್' ಸ್ಮಾರ್ಟ್‌ಪೋನ್ ಇದೇ ಜನವರಿ ತಿಂಗಳಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೆಚ್ಎಂಡಿ ಗ್ಲೋಬಲ್ ಕಂಪೆನಿ ಈಗಾಗಲೇ ಹೇಳಿಕೊಂಡಿದೆ. ಕೆಲ ಮೂಲಗಳ ಪ್ರಕಾರ ಜನವರಿ 3ನೇ ವಾರ ಅಥವಾ 4ನೇ ವಾರ ವಿಶ್ವ ಮಾರುಕಟ್ಟೆಗೆ ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಗೆ ಪರಿಚಯವಾಗಲಿದೆ.

ಒಟ್ಟು 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್!
ನೋಕಿಯಾ 9 ಪ್ಯೂರ್ವೀವ್ನಲ್ಲಿ ಒಟ್ಟು 7 ಕ್ಯಾಮೆರಾಗಳಿವೆ ಎಂಬುದನ್ನು ಹೆಚ್ಎಂಡಿ ಗ್ಲೋಬಲ್ ಮೂಲಗಳು ಖಚಿತಪಡಿಸಿವೆ. ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 5 ಕ್ಯಾಮೆರಾಗಳಿದ್ದರೆ, ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಮೊಬೈಲ್ನ ಹಿಂಬದಿಯಲ್ಲಿ ಐದು ಕ್ಯಾಮೆರಾ ಲೆನ್ಸ್ ಜೊತೆಗೆ ದೊಡ್ಡದಾದ ಎಲ್‌ಇಡಿ ಫ್ಲ್ಯಾಶ್ ಕೂಡ ನೀಡಲಾಗಿದೆ. ಆದರೆ, ಇದರಲ್ಲಿ ಯಾವೆಲ್ಲಾ ಕ್ಯಾಮೆರಾ ವೈಶಿಷ್ಟ್ಯಗಳನ್ನು ತರಲಾಗಿದೆ ಎಂಬುದು ಈ ವರೆಗೂ ಗುಟ್ಟಾಗಿ ಉಳಿದಿದೆ.

ನೋಕಿಯಾ 9 ಪ್ಯೂರ್‌ವೀವ್ ಫೀಚರ್ಸ್
ನೋಕಿಯಾ 9 ಬಗ್ಗೆ ಸೋರಿಕೆಯಾದ ಮಾಹಿತಿಯ ಪ್ರಕಾರ, ನೋಕಿಯಾ 9 ಪ್ಯೂರ್‌ವೀವ್ ಸ್ಮಾರ್ಟ್‌ಫೋನಿನಲ್ಲಿ ಡಿಸ್ಪ್ಲೇ- 5.9 ಇಂಚಿನ ಕ್ಯೂಹೆಚ್ಡಿ ಡಿಸ್ಪ್ಲೇ( ಗೊರಿಲ್ಲಾ ಗ್ಲಾಸ್- 5) ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್, RAM- 8 ಜಿಬಿ RAM, 256 ಜಿಬಿ ಸ್ಟೋರೇಜ್, ಅಂಡ್ರಾಯ್ಡ್ 9 ಅಪರೇಟಿಂಗ್ ಸಿಸ್ಟಂ ಮತ್ತು 4,150 mAh ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಎಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನು ಸ್ಮಾರ್ಟ್‌ಪೋನ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ನೋಕಿಯಾ 9 ಪ್ಯೂರ್‌ವೀವ್ ಬೆಲೆ ಎಷ್ಟು?
ಕೆಲವೇ ಕೆಲವು ದಿನಗಳಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೋಕಿಯಾ 9 ಪ್ಯೂರ್‌ವೀವ್ ಬೆಲೆ ಕೂಡ ಈಗಾಗಲೇ ಲೀಕ್ ಆಗಿದೆ. ನೋಕಿಯಾ ಲೀಕ್ಸ್ ಎಂಬ ಸಾಮಾಜಿಕ ಖಾತೆಯಲ್ಲಿ ನೋಕಿಯಾ 9 ಪ್ಯೂರ್‌ವೀವ್ ಬೆಲೆಯನ್ನು ಬಹಿರಂಗಪಡಿಸಲಾಗಿದ್ದು, ಯುರೋಪ್ನಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ಫೋನ್ಗೆ 749 ರಿಂದ 799 ಯುರೋ ನಿಗದಿಪಡಿಸಲಾಗಿದೆ. ಇದರ ಬೆಲೆಯು ಭಾರತದಲ್ಲಿ 59 ಸಾವಿರದಿಂದ 65 ಸಾವಿರದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








