ಅಚ್ಚರಿ ಮೂಡಿಸಿದ ನೋಕಿಯಾ..ವಿಶ್ವದ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಪೋನ್ ನೋಡಿ!!
ಈ ಮೊಬೈಲ್ ಜಗತ್ತೇ ಒಂತರಾ ವಿಚಿತ್ರ. ಎರಡು ಕ್ಯಾಮೆರಾಗಳಿರುವ ಸ್ಮಾರ್ಟ್‌ಪೋನ್ ಏಕೆ ಮಾರುಕಟ್ಟೆಗೆ ಬಂದವು ಎಂಬುದನ್ನು ಜನರು ತಿಳಿಯುವ ವೇಳೆಗೆ, ಮೂರು ಕ್ಯಾಮೆರಾಗಳಿರುವ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿ ಅಚ್ಚರಿ ಮೂಡಿಸಿತು. ಮೂರರ ನಂತರ ನಾಲ್ಕು ಕ್ಯಾಮೆರಾಗಳ ಫೋನ್ ಮೀರಿ, ಈಗ 5 ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಪೋನ್ ಕಾಣಿಸಿಕೊಂಡಿದೆ.!
ಹೌದು, ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇತ್ತೀಚೆಗೆ ಆನ್ಲೈನ್ನಲ್ಲಿ ವೈರಲ್ ಆಗಿರುವ ಒಂದು ನೋಕಿಯಾ ಸ್ಮಾರ್ಟ್‌ಫೋನಿ ಚಿತ್ರದಲ್ಲಿ ಐದು ಕ್ಯಾಮೆರಾ ಹೊಂದಿರುವುದು ಈಗ ವಿಶ್ವದಲ್ಲೇ ಸುದ್ದಿಯಾಗಿದೆ. ನೋಕಿಯಾ ಕಂಪೆನಿಯು ತನ್ನ 'ನೋಕಿಯಾ 9' ಸ್ಮಾರ್ಟ್‌ಪೋನಿನಲ್ಲಿ 5 ಕ್ಯಾಮೆರಾಗಳನ್ನು ನೀಡಲು ಮುಂದಾಗಿದೆಯಾ ಎಂಬ ಪ್ರಶ್ನೆ ಈಗ ಎಲ್ಲೆಡೆ ಹರಿದಾಡುತ್ತಿದೆ.

ಈ ಬಗ್ಗೆ ನೋಕಿಯಾ ಒಡೆತನದ ಹೆಚ್‌ಎಮ್‌ಡಿ ಗ್ಲೋಬಲ್ ಕಂಪೆನಿ ಅಧಿಕೃತವಾಗಿ ಯಾವ ಮಾಹಿತಿಯನ್ನು ನೀಡದಿದ್ದರೂ ಸಹ, ಸ್ಲಾಶ್ಲೀಕ್ ಎಂಬ ವೆಬ್ ಮಾಧ್ಯಮ ಶೇರ್ ಮಾಡಿರುವ ಐದು ಕ್ಯಾಮೆರಾಗಳ ನೋಕಿಯಾ 9 ಸ್ಮಾರ್ಟ್‌ಪೋನ್ ಚಿತ್ರಗಳು ಎಲ್ಲರ ಗಮನಸೆಳೆದಿವೆ. ಆದರೆ, ಈ ಸ್ಮಾರ್ಟ್‌ಫೋನಿನಲ್ಲಿ 5 ಕ್ಯಾಮೆರಾಗಳ ಅವಶ್ಯಕತೆ ಏನಿದೆ ಎಂದು ಹಲವು ಪ್ರಶ್ನಿಸುತ್ತಿದ್ದಾರೆ.
ಸ್ಯಾಮ್‌ಸಂಗ್, ಹುವಾವೇಯಂತಹ ಕಂಪೆನಿಗಳು ಈಗ ಮೂರು ಕ್ಯಾಮೆರಾಗಳ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ವೇಳೆಯಲ್ಲಿ ನೋಕಿಯಾ ಕಂಪೆನಿಯಿಂದ ಇಂತಹದೊಂದು ನಿರ್ಧಾರ ಹೊರಬಿದ್ದರೆ ಮೊಬೈಲ್ ಮಾರುಕಟ್ಟೆ ತಲ್ಲಣಿಸಲಿದೆ. ಇತ್ತೀಚಿಗೆ ನೋಕಿಯಾ ಕಂಪೆನಿ ಇಡುತ್ತಿರುವ ಭವಿಷ್ಯದ ಹೆಜ್ಜೆಗಳು ಇಂತಹದೊಂದು ಸಾಧ್ಯತೆಗಯನ್ನು ಸಹ ತೆರೆದಿದೆ.

ಕ್ಯಾಮೆರಾ ನಿರ್ಮಾಣದ ಝೈಸ್ ಸಂಸ್ಥೆಯೊಂದಿಗೆ ಈ ಹಿಂದೆಯಿಂದಲೇ ಒಪ್ಪಂದ ಮಾಡಿಕೊಂಡಿರುವ ನೋಕಿಯಾ, ಇದೀಗ ಝೈಸ್ ಸಂಸ್ಥೆಯಿಂದಲೇ ಈ ಕ್ಯಾಮೆರಾಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಹೇಳಲಾಗುತ್ತಿದೆ. ಗತಕಾಲದ ವೈಭವವನ್ನು ಮತ್ತೆ ವಾಪಸ್ ಪಡೆಯಲು ಯತ್ನಿಸುತ್ತಿರುವ ನೋಕಿಯಾ ಕಂಪೆನಿ ಈ ಕೆಲಸಕ್ಕೆ ಕೈ ಹಾಕಿರಬಹುದು ಎನ್ನುತ್ತಿದ್ದಾರೆ ಮೊಬೈಲ್ ಪ್ರಿಯರು.


Click it and Unblock the Notifications








