ಲೀಕ್ ಮಾಹಿತಿಯ ಮೂಲಕವೇ ಅಬ್ಬರಿಸಿದ ನೋಕಿಯಾ 9: 41 MP ತ್ರಿಪಲ್ ಕ್ಯಾಮೆರಾ, 8GB RAM..!

|

ಇಷ್ಟು ದಿನ ಮಾರುಕಟ್ಟೆಯಲ್ಲಿ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಾ ಸುಮ್ಮನಿದ್ದ ನೋಕಿಯಾ ಒಮ್ಮೆ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಶಾಕ್ ನೀಡಿದೆ. ನೋಕಿಯಾ 9 ಸ್ಮಾರ್ಟ್‌ಫೋನ್‌ ವಿಶೇಷಗಳ ಕುರಿತ ಮಾಹಿತಿ ಶೀಟ್ ಲೀಕ್ ಆಗಿದ್ದು, ಈ ಸ್ಮಾರ್ಟ್‌ಫೋನ್ ವಿಶೇಷತೆಗಳು ಗ್ಯಾಲೆಕ್ಸಿ S9, ಶಿಯೋಮಿ ಮಿ ಮಿಕ್ಸ್ 2S, ಒನ್‌ಪ್ಲಸ್ 5T ಗಿಂತಲೂ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ತನ್ನದೇ ಹಿಡಿತವನ್ನು ಸಾಧಿಸುವ ಲಕ್ಷಣವನ್ನು ಹೊಂದಿದೆ ಎನ್ನಲಾಗಿದೆ.

ಲೀಕ್ ಮಾಹಿತಿಯ ಮೂಲಕವೇ ಅಬ್ಬರಿಸಿದ ನೋಕಿಯಾ 9: 41 MP ತ್ರಿಪಲ್ ಕ್ಯಾಮೆರಾ

ಶೀಘ್ರವೇ ಬಿಡುಗಡೆಯಾಗುವ ನೋಕಿಯಾ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಒಂದರ ಕೆಳಗೆ ಒಂದು ಕ್ಯಾಮೆರಾಗಳನ್ನು ಜೋಡಿಸಿದ್ದು, ಪ್ರೀಮಿಯಮ್ ಸ್ಮಾರ್ಟ್‌ಫೋನ್ ನೋಡಲು ಅದ್ಬುತವಾಗಿದೆ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನಿಗೆ ನೋಕಿಯಾ 9 ಸೆಡ್ಡು ಹೊಡೆಯಲಿದೆ.

ಮತ್ತೇ ನೋಕಿಯಾ ಹವಾ:

ಮತ್ತೇ ನೋಕಿಯಾ ಹವಾ:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೇ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಹವಾ ಶುರುವಾಗಲು ನೋಕಿಯಾ ಶೀಘ್ರವೇ ಲಾಂಚ್ ಮಾಡಲಿದೆ ಎನ್ನುವ ನೋಕಿಯಾ 9 ಒಂದೇ ಸಾಕಾಗಲಿದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ 9 ಸಾಧ್ಯತೆಯನ್ನು ತೋರಿಸಿಕೊಡಲಿದೆ. ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗೆ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅಳವಡಿಸಲಾಗಿದ್ದು, 8GB RAM ಅನ್ನು ನೋಡಬಹುದಾಗಿದ್ದು, ಟಾಪ್ ವೇಗವನ್ನು ಹೊಂದಿರಲಿದೆ.

ದೊಡ್ಡ ಡಿಸ್‌ಪ್ಲೇ:

ದೊಡ್ಡ ಡಿಸ್‌ಪ್ಲೇ:

ನೋಕಿಯಾ 9 ಸ್ಮಾರ್ಟ್‌ಫೋನಿನಲ್ಲಿ 6.01 ಇಂಚಿನ ಅಮೊಲೈಡ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ಅಳವಡಿಸಲಾಗಿದೆ. 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಇನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 21MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಸೆಲ್ಫಿಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ.

ತ್ರಿಪಲ್ ಕ್ಯಾಮೆರಾ:

ತ್ರಿಪಲ್ ಕ್ಯಾಮೆರಾ:

ಈ ಸ್ಮಾರ್ಟ್‌ಫೋನ್ ಪ್ರಮುಖ ಅಂಶವೆಂದರೆ ಫೋನಿನ ಹಿಂಭಾಗದಲ್ಲಿ 3 ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. 41 MP + 20 MP + 9.7 MP ಕ್ಯಾಮೆರಾಗಳನ್ನು ನೋಡಬಹುದಾಗಿದೆ. ಒಂದೊಂದು ಲೈನ್ಸ್‌ಗಳು ತಮ್ಮದೇ ವಿಶೇಷತೆಯನ್ನು ಹೊಂದಿದೆ. 41 MP ವೈಡ್ ಆಂಗಲ್ ಲೈನ್ಸ್ ಆಗಲಿದ್ದು, 20 MP ಟೆಲಿ ಲೈನ್ಸ್ ಮತ್ತು 9.7 MP ಮೊನೊಕ್ರೊಮ್ ಲೈನ್ಸ್ ಅನ್ನು ನೀಡಲಾಗಿದ್ದು, ಉತ್ತಮ ಫೋಟ್ರೆಟ್, ಲ್ಯಾಡ್ ಸ್ಕೈಪ್ ಮತ್ತು ಜೂಮ್ ಮಾಡಿ ಪೋಟೋಗಳನ್ನು ಕ್ಲಿಕಿಸಲು ಸಹಾಯಕಾರಿಯಾಗಲಿದೆ. ಇದರೊಂಧಿಗೆ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ.

ಸೂಪರ್ ಫೋನ್:

ಸೂಪರ್ ಫೋನ್:

256GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳುವ ನೋಕಿಯಾ 9 ಸ್ಮಾರ್ಟ್‌ಫೋನಿನಲ್ಲಿ 3900mAh ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ಗಾಗಿ ಕ್ವಾಕ್ ಚಾರ್ಜ್ 4.0ವನ್ನು ನೀಡಲಾಗಿದೆ. ಹಿಂಭಾಗದಲ್ಲಿ ಗೋಲ್ಡ್ ಲೈನ್ ಬ್ಯಾಕ್ ಪ್ಯಾನಲ್ ಅನ್ನು ನೋಡಬಹುದಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದ್ದು, ಫಾಗ್ ಶೀಪ್ ಸ್ಮಾರ್ಟ್‌ಫೋನ್ ಇತಿಹಾಸವನ್ನು ಬದಲಾಯಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

Best Mobiles in India

English summary
Nokia 9 Specifications Leak, Show a Triple Camera Setup With 41-Megapixel Sensor. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X