ನೋಕಿಯಾ ತ್ರಿಪಲ್ ಕ್ಯಾಮೆರಾ ಫೋನ್: ಐಫೋನ್ ಅನ್ನು ಮೀರಿಸಲಿದೆ...!

|

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿರುವ HMD ಗ್ಲೋಬಲ್ ಸಂಸ್ಥೆಯೂ ಮತ್ತೊಂದು ನೋಕಿಯಾ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಟಾಪ್ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದೆ.

ನೋಕಿಯಾ ತ್ರಿಪಲ್ ಕ್ಯಾಮೆರಾ ಫೋನ್: ಐಫೋನ್ ಅನ್ನು ಮೀರಿಸಲಿದೆ...!

ಇದೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಆಗಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಟಾಪ್ ಎಂಡ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಎಂಡ್ ಫೋನ್ ಗಳಿಗೆ ಇದು ಸೆಡ್ಡು ಹೊಡೆಯುವ ಸಾಧ್ಯತೆ ಇದೇ ಎನ್ನುವ ಮಾತು ಕೇಳಿ ಬಂದಿದೆ.

ಇನ್ ಫಿಂಗರ್ ಡಿಸ್ ಪ್ಲೇ:

ಇನ್ ಫಿಂಗರ್ ಡಿಸ್ ಪ್ಲೇ:

ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಟಾಪ್ ಎಂಡ್ ಫೀಚರ್ ಅನ್ನು ಕಾಣಬಹುದಾಗಿದ್ದು, ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಇರುವಬಹುದಾದ ಆಯ್ಕೆಯೂ ಇದಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಬಳಕೆಯ ಅನುಭವನ್ನು ನೀಡಲಿಲಿದೆ.

ಸ್ನಾಪ್ ಡ್ರಾಗನ್ 845 ಪ್ರೋಸೆಸರ್:

ಸ್ನಾಪ್ ಡ್ರಾಗನ್ 845 ಪ್ರೋಸೆಸರ್:

ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಟಾಪ್ ಎಂಡ್ ಪ್ರೋಸೆಸರ್ ಆಗಿರುವ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಅಳವಡಿಸಲಾಗಿದ್ದು, ಬಳಕೆದಾರರಿಗೆ ಅತೀ ವೇಗದ ಕಾರ್ಯಚರಣೆಗೆ ಇದು ಸಹಾಯಕಾರಿಯಾಗಿದ್ದು, ಟಾಪ್ ಎಂಡ್ ಗ್ರಾಫಿಕ್ಸ್ ಗಳನ್ನು ಬಳಕೆ ಮಾಡಿಕೊಳ್ಳಲು ಸಹಾಯ ಮಾಡಲಿದೆ.

8 GB RAM – 256 GB ಇಂಟರ್ನಲ್ ಮೆಮೊರಿ:

8 GB RAM – 256 GB ಇಂಟರ್ನಲ್ ಮೆಮೊರಿ:

ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 8 GB RAM ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 256 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುವ ಆಯ್ಕೆಯಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಸ್ಟೋರೆಜ್ ಅನ್ನು ನೀಡಲಿದೆ.

ಉತ್ತಮ ಡಿಸ್ ಪ್ಲೇ:

ಉತ್ತಮ ಡಿಸ್ ಪ್ಲೇ:

ಇದಲ್ಲದೇ ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 6.01 ಇಂಚಿನ ಡಿಸ್ ಪ್ಲೇಯನ್ನು ಅಳವಡಿಲಾಗಿದ್ದು, ಇದಕ್ಕೆ ಗೊರಿಲ್ಲಾ ಗ್ಲಾಸ್ 5 ಪ್ರೋಟೆಕ್ಷನ್ ಅನ್ನು ಸಹ ಒದಗಿಸಲಾಗಿದೆ. ಇದು ಉತ್ತಮ ಗುಣಮಟ್ಟದಾಗಿದ್ದು, ಬಳಕೆದಾರರಿಗೆ ಉತ್ತಮ ವಿಡಿಯೋ ನೋಡಲು ಸಹಾಯವನ್ನು ಮಾಡಲಿದ.

ತ್ರಿಪಲ್ ಕ್ಯಾಮೆರಾ:

ತ್ರಿಪಲ್ ಕ್ಯಾಮೆರಾ:

ನೋಕಿಯಾ A1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಹಿಂಭಾಗದಲ್ಲಿ ತ್ರಿಪಲ್ ಕ್ಯಾಮೆರಾವನ್ನು ನೀಡಲಾಗಿದೆ. 40 MP + 20 MP + 9.7 MPಯ ಕ್ಯಾಮೆರಾಗಳನ್ನು ನೋಡಬಹುದಾಗಿದೆ. ಇದು ಅತ್ಯುತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಬೆಸ್ಟ್ ಚಿತ್ರಗಳನ್ನು ಇದರಲ್ಲಿ ಸೆರೆಹಿಡಿಯಬಹುದಾಗಿದೆ.

Best Mobiles in India

English summary
Nokia A1 Plus With Snapdragon 845 SoC, In-Display Fingerprint Scanner Tipped for Launch at IFA 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X