ಮುಂದಿನ ನೋಕಿಯಾ ಫೋನ್ ಆಂಡ್ರಾಯ್ಡ್ ಪವರ್‌ ಉಳ್ಳದ್ದೇ?

By Shwetha
|

ಮೈಕ್ರೋಸಾಫ್ಟ್‌ನ ಮುಂದಿನ ಲ್ಯೂಮಿಯಾ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಗಿರಬಹುದೇ ಎಂಬ ಮಾಹಿತಿಯೊಂದು ಈಗ ವದಂತಿಯಾಗಿ ಹಬ್ಬುತ್ತಿದೆ. ಈ ಎರಡೂ ಕಂಪೆನಿಗಳು ಹಿಂದೆಯೇ ಆಂಡ್ರಾಯ್ಡ್ ಶಕ್ತಿಯುಳ್ಳ ಡಿವೈಸ್‌ಗಳನ್ನು ಬಿಡುಗಡೆ ಮಾಡಿತ್ತು ನೋಕಿಯಾ ಎಕ್ಸ್ ಮಾತ್ರವಲ್ಲದೆ, ಲ್ಯೂಮಿಯಾ ಸಾಲಿನಲ್ಲಿ ಬರುವ ವಿಂಡೋಸ್ ಅಲ್ಲದ ಫೋನ್ ಆವೃತ್ತಿ ಕೂಡ ನೋಕಿಯಾದ ಪ್ರಥಮ ಪ್ರಯತ್ನವಾಗಿದೆ.

ಮೈಕ್ರೋಸಾಫ್ಟ್ ಬ್ರ್ಯಾಂಡ್ ಅಡಿಯಲ್ಲಿ ನೋಕಿಯಾ ಅಧಿಪತ್ಯದಲ್ಲಿ ಹೊಸ ಲ್ಯೂಮಿಯಾ ಬಿಡುಗಡೆಯಾಗುತ್ತಿದೆ. ಎವ್ಲಿಕ್ಸ್ ಪ್ರಕಾರ, ನೋಕಿಯಾದ ಎಲ್ಲಾ ಬ್ರ್ಯಾಂಡ್ ಫೋನ್‌ಗಳನ್ನು ಮೈಕ್ರೋಸಾಫ್ಟ್ "ನೋಕಿಯಾ ಬೈ ಮೈಕ್ರೋಸಾಫ್ಟ್" ಎಂದು ಮರುನಾಮಕರಣಗೊಳಿಸಲಿದೆ.

ಹೊಸ ನೋಕಿಯಾ ಫೋನ್‌ನಲ್ಲಿ ಬರಲಿದೆ ಆಂಡ್ರಾಯ್ಡ್

ವದಂತಿಯಲ್ಲಿರುವ ಹ್ಯಾಂಡ್‌ಸೆಟ್ ಆಂಡ್ರಾಯ್ಡ್‌ನ ಪೂರ್ಣ ಆವೃತ್ತಿಯನ್ನು ತನ್ನಲ್ಲಿ ಚಾಲನೆ ಮಾಡುತ್ತದೆಯೇ ಅಥವಾ ನೋಕಿಯಾ ಎಕ್ಸ್ ಅನ್ನು ಅನುಸರಿಸುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ನೋಕಿಯಾ ಎಕ್ಸ್‌ನಲ್ಲಿ ಆಂಡ್ರಾಯ್ಡ್ ಪವರ್ ಇದ್ದರೂ ಪ್ಲೇ ಸ್ಟೋರ್‌ನಂತೆ ಗೂಗಲ್ ಸೇವೆಯ ಮೇಲೆ ಇದು ಅವಲಂಬಿತವಾಗಿಲ್ಲ. ಬದಲಿಗೆ ನೋಕಿಯಾ ಸ್ಟೋರ್‌ನೊಂದಿಗೆ ಮೂರನೇ ವ್ಯಕ್ತಿ ಆಪ್ ಸ್ಟೋರ್ ಮೂಲಕ ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್ ಆಯ್ಕೆಯನ್ನು ಡಿವೈಸ್ ಒದಗಿಸುತ್ತದೆ. ಅಂದರೆ ಅಮೆಜಾನ್ ತನ್ನ ಆಂಡ್ರಾಯ್ಡ್ ಪವರ್ ಉಳ್ಳ ಫೈರ್ ಟ್ಯಾಬ್ಲೆಟ್‌ಗೆ ಮಾಡಿದಂತಹ ಅದೇ ಪ್ರಯತ್ನವಾಗಿದೆ.

ಕಂಪೆನಿಯು ಇತ್ತೀಚೆಗೆ, ಕಡಿಮೆ ವೆಚ್ಚದ ಸ್ಮಾರ್ಟ್‌ಫೋನ್ ಅನ್ನು ನೋಕಿಯಾ ಎಕ್ಸ್ ಸಾಲಿಗೆ ಸೇರಿಸಿದ್ದು, ನೋಕಿಯಾ ಎಕ್ಸ್ 2, ಈ ತಿಂಗಳ ನಂತರ ಮಾರುಕಟ್ಟೆಗೆ ಆಗಮಿಸಲಿದೆ. ಮಾರುಕಟ್ಟೆಯಲ್ಲಿನ ಭರ್ಜರಿ ಪೈಪೋಟಿಯನ್ನು ಎದುರಿಸುವ ಸಲುವಾಗಿಯೇ ಮೈಕ್ರೋಸಾಫ್ಟ್ ತನ್ನ ನೋಕಿಯಾ ಎಕ್ಸ್ ಡಿವೈಸ್‌ಗಳನ್ನು ಬಳಸುತ್ತಿದೆ.

Best Mobiles in India

Read more about:
English summary
This article tells that Nokia and Microsoft working together to bring android powered Lumia phones to compete in the market

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X