Subscribe to Gizbot

ಸ್ನ್ಯಾಪ್‌ಡೀಲ್‌ನಲ್ಲಿ ರೂ.3,990 ಬೆಲೆಗೆ ನೋಕಿಯಾ ಆಶಾ 201

Posted By: Super
ಸ್ನ್ಯಾಪ್‌ಡೀಲ್‌ನಲ್ಲಿ ರೂ.3,990 ಬೆಲೆಗೆ ನೋಕಿಯಾ ಆಶಾ 201
ತನ್ನಯ ಉತ್ತಮ ಗುಣಮಟ್ಟದ ಮೊಬೈಲ್‌ ಫೋನ್‌ಗಳಿಂದಾಗಿ ಮೆಚ್ಚುಗೆ ಗಳಿಸಿರುವ ನೋಕಿಯಾ ಮೋಬೈಲ್ಸ್‌ ಸಂಸ್ಥೆಯು ಬಜೆಟ್‌ ಕುರಿತು ಲೆಕ್ಕಾಚಾರ ಹಾಕುವ ಭಾರತೀಯ ಗ್ರಾಹಕರೆಗೆಂದೇ ಸಾಲು ಸಾಲಾಗಿ ತನ್ನಯ ಆಶಾ ಸರಣಿಯ ಮೊಬೈಲ್‌ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಈ ಸಾಲಿಗೆ ಕೆಲವಾರಗಳ ಹಿಂದೆಯಷ್ಟೇ ರೂ. 5,685 ದರದಲ್ಲಿ ಸಿಂಬಿಯನ್‌ ಆಧಾರಿತ ಡ್ಯುಯೆಲ್‌ ಸಿಮ್‌ ಹೊಂದಿರುವ ಆಶಾ 308 ಮೋಬೈಲ್‌ ಫೋನ್‌ ಸೇರ್ಪಡೆ ಮಾಡಿದ್ದ ನೋಕಿಯಾ ಇದೀಗ ಸಿಂಗಲ್‌ ಸಿಮ್‌ ಸೌಲಭ್ಯ ಹೊಂದಿರುವ ಆಶಾ ಸರಣಿಯ ಮತ್ತೊಂದು ಆಶಾ 201 ಮೊಬೈಲ್‌ ಫೋನ್‌ ಹೊರತಂದಿದೆ.

ನೋಕಿಯಾ ಹೊರತಂದಿರುವ ನೂತನ ಮೊಬೈಲ್‌ ಫೋನ್‌ ಆನಲೈನ್‌ನಲ್ಲಿನ ಜಪ್ರಿಯ ರೀಟೇಲ್‌ ಮಳಿಗೆಯಾದ ಸ್ನಾಪ್‌ಡೀಲ್‌ ಆಶಾ 201 ಮೊಬೈಲ್‌ ಪೋನ್‌ ಅನ್ನು ರೂ. 3,990 ಆಫರ್‌ ಬೆಲೆಯಲ್ಲಿ ನೀಡುತ್ತಿದೆ.

ನೋಕಿಯಾ ಆಶಾ 201 ನ ವಿಶೇಷತೆಗಳು ಹೀಗಿದೆ.

ತೂಕ ಹಾಗೂ ಸುತ್ತಳತೆ : 115.5 x 61.1 x 14 mm ಸುತ್ತಳತೆಯೊಂದಿಗೆ 105 ಗ್ರಾಂ ತೂಕವಿದೆ..

ದರ್ಶಕ : 2.4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ದರ್ಶಕ ಹಾಗೂ 320 x 240 ಪಿಕ್ಸೆಲ್ಸ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಸಿಂಬಿಯನ್‌ ಆಧಾರಿತ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ : ನೋಕಿಯಾ ಆಶಾ 201 ನಲ್ಲಿ 2ಎಂಪಿ ಕ್ಯಾಮೆರಾ ಇದ್ದು ವಿಡಿಯೋಕರೆಗಾಗಿ ಸೆಕೆಂಡರಿ ಕ್ಯಾಮೆರಾ ಇಲ್ಲವಾಗಿದೆ.

ಸ್ಟೋರೇಜ್‌ : 10ಎಂಬಿ ಆಂತರಿಕ ಸ್ಟೋರೇಜ್‌ 32 ಎಂಬಿ RAM ನೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ : ಬ್ಲೂಟೂತ್‌, ಮೈಕ್ರೋ ಯುಎಸ್‌ಬಿ 2.0 ಹಾಗೂ 3.5 mm ಆಡಿಯೋ ಜ್ಯಾಕ್‌ ನಂತಹ ಕನೆಕ್ಟಿವಿಟಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ : ಆಸಾ 201 ನಲ್ಲಿ 1,430 mAh ಬ್ಯಾಟರೀ ನೀಡಲಾಗಿದ್ದು 7 ಗಂಟೆಗಳ ಟಾಕ್‌ಟೈಮ್‌ ಹಾಗೂ 888 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ ಹಾಗೂ ಲಭ್ಯತೆ

ನೋಕಿಯಾ 201 ಸ್ನಾಪ್‌ಡೀಲ್‌ನಲ್ಲಿ ರೂ. 3,990 ದರದಲ್ಲಿ ಲಭ್ಯವಿದೆ.

ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಗಾಗಿ ಗೋಪ್ರೋಬೋಗೆ ಭೇಟಿ ನೀಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot