Home
ಮೊಬೈಲ್

ನೋಕಿಯಾ ಆಶಾ 308 vs ಸೋನಿ ಎಕ್ಸಪೀರಿಯಾ ಟಿಪೋ

By Super

ನೋಕಿಯಾ ಆಶಾ 308 vs ಸೋನಿ ಎಕ್ಸಪೀರಿಯಾ ಟಿಪೋ
ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಅಗ್ಗದ ಬೆಲೆಯ ಡ್ಯುಯೆಲ್‌ ಸಿಮ್‌ ಫೋನ್‌ಗಳಿಗೆ ಉತ್ತಮ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಪ್ರತಿಷ್ಠಿತ ಫೋನ್‌ ತಯಾರಕರುಗಳು ಕೂಡ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಭಾರತೀಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕೈಗೆಟಕುವ ದರದಲ್ಲಿ ಹೊಸ ಹೊಸ ಫೋನ್‌ಗಳನ್ನು ಪರಿಚಯಿಸುತ್ತಿವೆ.

ಅಂದಹಾಗೆ ಈ ಸಾಲಿಗೆ ಮೊಬೈಲ್‌ ಫೋನ್‌ ತಯಾರಿಕೆಯ ದಿಗ್ಗಜ ಸಂಸ್ಥೆಯಾದಂತಹ ನೋಕಿಯಾ ನೂತನವಾಗಿ ಆಶಾ ಸರಣಿಯ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಪೋನ್‌ ಆದಂತಹ ಆಶಾ 308 ಸೇರ್ಪಡೆ ಮಾಡಿದೆ, ಅಲ್ಲದೆ ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತು ಹಲವು ಡ್ಯುಯೆಲ್‌ ಸಿಮ್‌ ಫೋನ್‌ಗಳು ಲಭ್ಯವಿದ್ದು ಭಾರೀ ಪೈಪೋಟಿ ಎದುರಿಸ ಬೇಕಾಗಿದೆ. ಅದರಲ್ಲಿಯೂ ಸೋನಿ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದಂತಹ ಎಕ್ಸಪೀರಿಯಾ ಟಿಫೋ, ನೋಕಿಯಾ ಆಶಾ ಗೆ ಪ್ರಬಲ ಪೈಪೋಟಿ ನೀಡಬಲ್ಲದು ಎಂದು ನಿರೀಕ್ಷಿಸ ಲಾಗಿದೆ.

ಹಾಗಿದ್ದಲ್ಲಿ ನೋಕಿಯಾ ಆಶಾ 308 ಹಾಗೂ ಎಕ್ಸಪೀರಿಯಾ ಟಿಪೋ ನಡುವಿನ ಹೋಲಿಕೆಯ ಕಡೆ ಗಮನ ಹರಿಸಿ ಎರಡರಲ್ಲಿ ಯಾವುದು ಉತ್ತಮ ಎಂದು ತಿಳಿದುಕೊಳ್ಳೋಣ.

ಗಾತ್ರ ಹಾಗೂ ತೂಕ: ನೋಕಿಯಾ ಆಶಾ 308 ಸುತ್ತಳತೆ 109.9 x 54.0 x 13.0 mm ಹೊಂದಿದ್ದು 104 ಗ್ರಾಂ ತೂಕವಿದೆ. ಎಕ್ಸಪೀರಿಯಾ ಟಿಫೋ 103 x 57 x 13 mm ಸುತ್ತಳತೆ ಹಾಗೂ ಸುಮಾರು 99.4 ಗ್ರಾಂ ತೂಕವಿದೆ.

ದರ್ಶಕ: ನೋಕಿಯಾ ಆಶಾ 308 ನಲ್ಲಿ 3 ಇಂಚಿನ ಮಲ್ಟಿಟಚ್‌ ಸ್ಕ್ರೀನ್‌ ನೊಂದಿಗೆ 400 x 240 ಪಿಕ್ಸೆಲ್‌ ರೆಸೆಲ್ಯೂಷನ್‌ ಇದ್ದರೆ ಎಕ್ಸಪೀರಿಯಾ ಟಿಪೋ ನಲ್ಲಿ 3.2 ಮಲ್ಟಿಟಚ್‌ ಸ್ಕ್ರೀನ್ ದರ್ಶಕ ಹಾಗೂ 320 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಎರೆಡೂ ಫೋನ್‌ಗಳಲ್ಲಿ 800MHz ಪ್ರೊಸೆರ್‌ ಇದೆ.

ಆಪರೇಟಿಂಗ್‌ ಸಿಸ್ಟಂ: ನೋಕಿಯಾ ಆಶಾ 308 ನಲ್ಲಿ ನೋಕಿಯಾ ಸರಣಿಯ 40 OS ಇದ್ದರೆ, ಎಕ್ಸಪೀರಿಯಾ ಆಂಡ್ರಾಯ್ಡ್‌ 4.0.3 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಹೊಂದಿದೆ.

ಕ್ಯಾಮೆರಾ: ನೋಕಿಯಾ ಆಶಾ 308 ನಲ್ಲಿ 2MP ಹಿಂಬದಿಯ ಕ್ಯಾಮೆರಾ ಇದ್ದರೆ ಮತ್ತೊಂದೆಡೆ ಎಕ್ಸಪೀರಿಯಾ ಟಿಪೋ 3.15MP ಸಾಮರ್ತ್ಯದ ಕಾಮೆರಾದಿಂದ ಕೂಡಿದೆ. ಅಂದಹಾಗೆ ಎರೆಡೂ ಫೊನ್‌ಗಳಲ್ಲಿ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾಗಳಿಲ್ಲ.

ಮೆಮೊರಿ: ನೋಕಿಯಾ ಆಶಾ 308 ನಲ್ಲಿ 20MB ಆಂತರಿಕ ಮೆಮೊರಿ ಹಾಗೂ 64MB RAM ಇದ್ದರೆ, ಎಕ್ಸಪೀರಿಯಾ ಟಿಪೋ 2 GB ಆಂತರಿ ಮೆಮೊರಿ ಹಾಗೂ 512MB RAM ಹೊಂದಿದೆ.

ಇದಲ್ಲದೆ ಎರೆಡೂ ಹ್ಯಾಂಡ್‌ಸೆಟ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ನ ಮೂಲಕ 32GB ವರೆಗೆ ಮೆಮೊರಿ ವಿಸ್ತರಣೆ ಮಾಡಬಹುದಾಗಿದೆ.

ಕನೆಕ್ಟಿವಿಟಿ: ನೋಕಿಯಾ ಆಶಾ 308 ನಲ್ಲಿ ಬ್ಲೂಟೂತ್‌ 3.0 ಹಾಗು ಮೈಕ್ರೋ USB 2.0 ನಂತಹ ಫೀಚರ್ಸ್‌ಗಳಿವೆ.

ಆದರೆ ಎಕ್ಸಪೀರಿಯಾ ಟಿಪೊನಲ್ಲಿ A2DP ಜೊತೆಗೆ ಬ್ಲಟೂತ್‌ 2.1, 3G 7.2Mbps HSDPA, ಹಾಗೂ 5.76 Mbps HSUPA, Wi-Fi ಸೇರಿದಂತೆ USB 2.0 ಹೊಂದಿದೆ.

ಬ್ಯಾಟರಿ: ಆಶಾ 308 ನಲ್ಲಿ 1,110 mAh BL-4U ಬ್ಯಾಟರಿ ಇದ್ದು 6 ಗಂಟೆಗಳ ಟಾಕ್‌ಟೈಮ್‌ ಹಾಗೂ 510 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ. ಹಾಗೂ ಎಕ್ಸಪೀರಿಯಾ ಟಿಪೋನಲ್ಲಿ 1,500 mAh Li-ion ಬ್ಯಾಟರಿ ಇದ್ದು 6 ಗಂಟೆಗಳ ಟಾಕ್‌ಟೈಮ್‌ ಹಾಗೂ 360 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ.

ಬೆಲೆ: ಕೊಂಡುಕೊಳ್ಳುವ ವಿಚಾರದಲ್ಲಿ ನೋಕಿಯಾ ಆಶಾ 308 ಕಡಿಮೆ ಬೆಲೆಯದ್ದಾಗಿದ್ದು ತೆರಿಗೆ ಹೊರತು ಪಡಿಸಿ 5,300 ರೂ ಬೆಲೆಗೆ ಲಭ್ಯವಾಗಲಿದೆ, ಹಾಗೂ ಸೋನಿ ಎಕ್ಸಪೀರಿಯಾ ಟಿಪೋ ಕೊಂಚ ದುಬಾರಿಯಾಗಿದ್ದು ಸಿಂಗಲ್‌ ಸಿಮ್‌ ಹಾಗೂ ಡ್ಯುಯೆಲ್‌ ಸಿಮ್‌ ಮಾದರಿಗಳಲ್ಲಿ ಲಭ್ಯವಿದ್ದು ಬೆಲೆ ಸುಮಾರು 10,000 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+