Home
ಮೊಬೈಲ್

ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ನಾಳೆ ಮಾರುಕಟ್ಟೆಗೆ ಎಂಟ್ರಿ..!

By Gizbot Bureau

ನೋಕಿಯಾ ಫೋನ್ ಪ್ರಿಯರಿಗೆ ಜುಲೈ 11 ಕ್ಕೆ ಒಂದು ಹೊಸ ಕೊಡುಗೆ ಸಿಗುತ್ತದೆ. ಅದುವೇ ಹೊಸ ಫೋನ್ ಒಂದರ ಬಿಡುಗಡೆ. ಯಾವುದು ಆ ಫೋನ್ ಎಂದು ಕೇಳುತ್ತಿದ್ದೀರಾ? ನೋಕಿಯಾ ಎಕ್ಸ್ 5. ಚೀನಾದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ನೋಕಿಯಾ ಎಕ್ಸ್ 5 ಅಧಿಕೃತವಾಗಿ ಜುಲೈ 11 ನೇ ತಾರೀಕು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ನಾಳೆ ಮಾರುಕಟ್ಟೆಗೆ ಎಂಟ್ರಿ..!

ನೋಕಿಯಾ ಎಕ್ಸ್ ಸೀರಿಸ್ ಫೋನ್ ಅನ್ನುವುದನ್ನು ಹೊರತು ಪಡಿಸಿ ಇತರೆ ಮಾಹಿತಿಗಳನ್ನು ಅಧಿಕೃತವಾಗಿ ಹೊರಹಾಕದೇ ಇದ್ದರೂ ಕೂಡ ಕೆಲವು ಗುಸುಗುಸುಗಳಿಂದಾಗಿ ಹಲವು ವಿಚಾರಗಳು ಈ ಫೋನ್ ಬಗ್ಗೆ ಈಗಾಗಲೇ ತಿಳಿದಿದೆ. ಆ ಬಗೆಗಿನ ಮಾಹಿತಿಯನ್ನು ನಾವು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.

ನೋಕಿಯಾ ಎಕ್ಸ್ 5 (2018) ರಲ್ಲಿ ಇಷ್ಟವಾಗುವ ವೈಶಿಷ್ಟ್ಯತೆಗಳು :

ಮೀಡಿಯಾಟೆಕ್ ಆಕ್ಟಾಕೋರ್ ಪ್ರೊಸೆಸರ್

ಮೀಡಿಯಾಟೆಕ್ ಆಕ್ಟಾಕೋರ್ ಪ್ರೊಸೆಸರ್

TENAA ಮಾಹಿತಿಯ ಪ್ರಕಾರ, ನೋಕಿಯಾ ಎಕ್ಸ್5(2018) 2.0GHz ನ ಮೀಡಿಯಾ ಟೆಕ್ ನಿಂದ ಆಕ್ಟಾ-ಕೋರ್- ಪ್ರೊಸೆಸರ್ ನ್ನು ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ 3ಜಿಬಿ/4ಜಿಬಿ/6ಜಿಬಿ ಮೂರು ವೆರೈಟಿಯ ಮೆಮೊರಿಯನ್ನು ಹೊಂದಿರುತ್ತದೆ. ಇನ್ನು 32ಜಿಬಿ/64ಜಿಬಿ ಇಂಟರ್ನಲ್ ಸ್ಟೋರೇಜ್ ನ ಅವಕಾಶವನ್ನು ನೋಕಿಯಾ ಎಕ್ಸ್ 5 ಹೊಂದಿರಲಿದೆ.

5.86 ಇಂಚ್ ಫುಲ್ ಸ್ಕ್ರೀನ್ ಡಿಸ್‌ಪ್ಲೇ

5.86 ಇಂಚ್ ಫುಲ್ ಸ್ಕ್ರೀನ್ ಡಿಸ್‌ಪ್ಲೇ

ಮಾಹಿತಿಯೊಂದರ ಪ್ರಕಾರ, ನೋಕಿಯಾ ಎಕ್ಸ್ 5 (2018) 5.86- ಇಂಚಿನ ಫುಲ್ ಸ್ಕ್ರೀನ್ ಡಿಸ್ಪ್ಲೆಯನ್ನು ಹೊಂದಿರಲಿದ್ದು ಅದರ ಅನುಪಾತ 19:9 ಆಗಿರಲಿದೆ. ಐಫೋನ್ ಎಕ್ಸ್ ನಂತಹ ನಾಚ್ ನ್ನು ಕೂಡ ಇದು ಹೊಂದಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ

ಕ್ಯಾಮರಾ ವಿಚಾರಕ್ಕೆ ಬರುವುದಾದರೆ ಸೆಲ್ಫೀ ಗಾಗಿ 8ಎಂಪಿ ಮುಂಭಾಗದ ಕ್ಯಾಮರಾವನ್ನು ಇದು ಹೊಂದಿರಲಿದೆ. ಹಿಂಭಾಗದಲ್ಲಿ ಎರಡು ಕ್ಯಾಮರಾಗಳು ಇರಲಿದ್ದು. ಒಂದು 13ಎಂಪಿ ಎಂದು ಹೇಳಲಾಗಿದೆ. ಆದರೆ ಇನ್ನೊಂದರ ಮೆಗಾಪಿಕ್ಸಲ್ ಎಷ್ಟಿರುತ್ತದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಬೆರಳಚ್ಚು ತಂತ್ರಜ್ಞಾನವನ್ನು ಈ ಸ್ಮಾರ್ಟ್ ಫೋನ್ ಹೊಂದಿರಲಿದೆ. ಇನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ಕಪ್ಪು, ನೀಲಿ ಮತ್ತು ಬಿಳಿ ಬಣ್ಣದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಕೈಗೆಟುಕುವ ಬೆಲೆ

ಕೈಗೆಟುಕುವ ಬೆಲೆ

ಇತ್ತೀಚೆಗಷ್ಟೇ ಡಿವೈಸ್ ಬಗೆಗಿನ ಕುತೂಹಲಕ್ಕೆ ಟೀನಾ ವೆಬ್ ಸೈಟ್ ನಲ್ಲಿ ಒಂದು ಚಿತ್ರ ಬಿಡುಗಡೆಗೊಂಡಿತ್ತು. ಇನ್ನು ಇದರ ಬೆಲೆಯ ಬಗ್ಗೆ ಹೇಳುವುದಾದರೆ, ನೋಕಿಯಾ ಎಕ್ಸ್ 5 ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗಬೇಕು ಎಂಬ ಇಚ್ಛೆಯಿಟ್ಟು ಹೊರಬರುವ ಬಜೆಟ್ ಸ್ಮಾರ್ಟ್ ಫೋನ್ ಆಗಿರಲಿದೆ ಅಂದಾಜು ಚೀನಾದಲ್ಲಿ 799 CNY ಆಗಿರಲಿದ್ದು, ಇದನ್ನೇ ಭಾರತೀಯ ಮಾರುಕಟ್ಟೆಗೆ ಅನ್ವಯಿಸಿದರೆ 8300 ರುಪಾಯಿ ಆಗಲಿದೆ.

ಆಂಡ್ರಾಯ್ಡ್ 8.1 ಓರಿಯೋ ಒಎಸ್

ಆಂಡ್ರಾಯ್ಡ್ 8.1 ಓರಿಯೋ ಒಎಸ್

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿ ಬರಬಹುದು ಎಂದು ಅಂದಾಜಿಸಲಾಗಿದೆ ಮತ್ತು 3000mAh ಬ್ಯಾಟರಿಯನ್ನು ಇದು ಹೊಂದಿರಲಿದೆ. ನೋಕಿಯಾ ತನ್ನ ಆಪರೇಟಿಂಗ್ ಸಿಸ್ಟಮ್ ಅನ್ನು ಆಂಡ್ರಾಯ್ಡ್ ಪಿ ಗೆ ಅಪ್ ಡೇಟ್ ಮಾಡಲಿದೆ. ಗೂಗಲ್ ಅದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುವದನ್ನು ನೋಕಿಯಾ ಕಾಯುತ್ತಿದೆ.

Best Mobiles in India

English summary
Nokia could launch the Nokia X5 on July 11. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+