ನೋಕಿಯಾ ಹೈ ಎಂಡ್ ಸ್ಮಾರ್ಟ್‌ಫೊನ್ "ನೋಕಿಯಾ ಎಡ್ಜ್"!!

Posted By:

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಒಂದರಮೇಲೊಂದು ಮಾರುಕಟ್ಟೆಗೆ ಕಾಲಿಡುತ್ತಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಲ್ಲಣ ಮೂಡುಸುತ್ತಿವೆ.! ನೋಕಿಯಾ 6, ನೋಕಿಯಾ ಪಿ1 ಸ್ಮಾರ್ಟ್‌ಫೋನ್‌ ನಂತರ ಇದೀಗ ನೋಕಿಯಾದ ಹೈ ಎಂಡ್ ಸ್ಮಾರ್ಟ್‌ಫೊನ್ "ನೋಕಿಯಾ ಎಡ್ಜ್" ಬಿಡುಗಡೆಯಾಗುತ್ತಿದೆ.!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 ಮತ್ತು ಆಪಲ್ ಐಫೋನ್ 8 ಸ್ಮಾರ್ಟ್‌ಫೋನ್‌ಗೆ ಸೆಡ್ಡುಹೊಡೆಯುವಂತೆ ನೋಕಿಯಾ ಎಡ್ಜ್ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿದ್ದು, 5.7 ಇಂಚ್ ಸ್ಕ್ರೀನ್ ಹೊಂದಿರುವ ಡುಯಲ್ ಕರ್ವಡ್ Amoled ಡಿಸ್‌ಪ್ಲೇಯ ನೋಕಿಯಾ ಎಡ್ಜ್ ಸ್ಮಾರ್ಟ್‌ಫೋನ್ ಬೇರೆ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೋರಿಲ್ಲಾ ಗ್ಲಾಸ್ 6

ಗೋರಿಲ್ಲಾ ಗ್ಲಾಸ್ 6

ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್ ಹೊಂದಿರುವ ಡುಯಲ್ ಕರ್ವಡ್ Amoled ಡಿಸ್‌ಪ್ಲೇ ಇದೇ ಮೊದಲ ಬಾರಿಗೆ ನೋಕಿಯಾ ಎಡ್ಜ್ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗುತ್ತಿದೆ. ಅತ್ಯಾಧುನಿ ಡಿಸ್‌ಪ್ಲೇ ತಂತ್ರಜ್ಞಾನ ಇದಾಗಿರುವುದರಿಂದ ಹೊಸ ವಿನ್ಯಾಸದ ಸ್ಕ್ರೀನ್ ನೋಕಿಯಾ ಪ್ರಿಯರ ನಿದ್ದೆಗೆಡಿಸಬಹುದು.!!

ರೆಟಿನಾ ಸ್ಕ್ಯಾನರ್!!

ರೆಟಿನಾ ಸ್ಕ್ಯಾನರ್!!

ಅತ್ಯಂತ ಸುರಕ್ಷಿತ ಸೆಕ್ಯುರಿಟಿ ತಂತ್ರಜ್ಞಾನವಾದ ರೆಟಿನಾ ಸ್ಕ್ಯಾನರ್ ಇದೇ ಮೊದಲಬಾರಿಗೆ ನೋಕಿಯಾ ಎಡ್ಜ್ ಸ್ಮಾರ್ಟ್‌ಫೊನ್ ಮೂಲಕ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಇನ್ನು ಖಚಿತತೆ ಇಲ್ಲವಾದರೂ, ಲೀಕ್ ಆದ ಮಾಹಿತಿಗಳು ಇದನ್ನು ಸ್ಪಷ್ಟಪಡಿಸಿವೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೆಲ್ಫಿ ಜಮಾನದಲ್ಲಿ ನೋಕಿಯಾ ಸೆಲ್ಫಿ ಕ್ಯಾಮೆರಾಕ್ಕೆ ಒತ್ತು ನೀಡಿದ್ದು, 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 24 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ನೋಕಿಯಾ ಎಡ್ಜ್ ಸ್ಮಾರ್ಟ್‌ಫೊನ್ ಹೊಂದಿದೆ. 4k ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್‌ ಮಾಡುವ ತಂತ್ರಜ್ಞಾನ ಸಹ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಪ್ರೊಸೆಸರ್ ಯಾವುದು.?

ಪ್ರೊಸೆಸರ್ ಯಾವುದು.?

ನೋಕಿಯಾ ಈಗಾಗಲೇ ಕ್ವಾಲ್ಕಮ್ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕ್ವಾಲ್ಕಮ್‌ ಚಿಪ್‌ಸೆಟ್‌ನಲ್ಲಿಯೇ ಅತ್ಯಾಧುನಿಕವಾದ ಚಿಪ್‌ಸೆಟ್‌ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೆಸೆಸರ್‌ ಅನ್ನು ನೋಕಿಯಾ ಎಡ್ಜ್ ಹೊಂದಿರಲಿದೆ ಎನ್ನಲಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia Edge looks like a flagship killer for sure! to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot