Subscribe to Gizbot

ನೋಕಿಯಾ ಆಶಾ 202 ದ್ವಿ-ಸಿಮ್ ಫೋನ್ ಬಂದಿದೆ

Posted By: Varun
ನೋಕಿಯಾ ಆಶಾ 202 ದ್ವಿ-ಸಿಮ್ ಫೋನ್ ಬಂದಿದೆ

ನೋಕಿಯಾ ಕಂಪನಿ ತನ್ನ ಆಶಾ ಸರಣಿಯ, ನೋಕಿಯಾ ಆಶಾ 202 ಹೆಸರಿನ ಮಾಡಲ್ ಮೊಬೈಲ್ ಒಂದನ್ನು ಭಾರತೀಯ ಮಾರುಕಟ್ಟೆಗೆಬಿಡುಗಡೆ ಮಾಡಿದೆ. ಕಡಿಮೆ ಬಜೆಟ್ ನಲ್ಲಿ ಟಚ್ ಸ್ಕ್ರೀನ್ ಹಾಗು ಇಂಟರ್ನೆಟ್ ಬ್ರೌಸಿಂಗ್ಇರುವ ನೋಕಿಯಾಮೊಬೈಲ್ ಹುಡುಕುತ್ತಿರುವವರಿಗೆ ಈಮಾಡಲ್ ಉತ್ತಮ ಆಯ್ಕೆಯಾಗಬಲ್ಲದು.

ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ಯಲ್ಲಿ ನೋಕಿಯಾ ಆಶಾ ಸರಣಿಯ ಮೊಬೈಲುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. 4,200 ರೂಪಾಯಿಗೆ ದೊರೆಯುವ ಈ ಆಶಾ 202 ಮೊಬೈಲ್ ನಲ್ಲಿ ಏನೇನಿದೆ ಎಂದು ತಿಳಿದುಕೊಳ್ಳಿ:

  • ದ್ವಿಸಿಮ್ ಬೆಂಬಲ

  • 2.44 ಇಂಚ್ ನ ರೆಸಿಸ್ಟಿವ್ TFT ಟಚ್ ಸ್ಕ್ರೀನ್, 240 X 320 ಪಿಕ್ಸೆಲ್ ರೆಸಲ್ಯೂಶನ್

  • 2.0 ಮೆಗಾ ಪಿಕ್ಸೆಲ್ ಕ್ಯಾಮೆರಾ

  • ಮ್ಯೂಸಿಕ್ ಪ್ಲೇಯರ್

  • FM ರೇಡಿಯೋ

  • ನೋಕಿಯಾ ಬ್ರೌಸರ್

  • ಬ್ಲೂಟೂತ್ ಸಂಪರ್ಕ

  • ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • 400 ಗಂಟೆ ಸ್ಟಾಂಡ್ ಬೈ ಟೈಮ್ ಇರುವ 1020 mAh ಲಿ-ಅಯಾನ್ ಬ್ಯಾಟರಿ
 

ಬಿಳಿ, ಸಿಲ್ವರ್, ಬ್ಲಾಕ್, ಡಾರ್ಕ್ ರೆಡ್, ಡಾರ್ಕ್ ಗ್ರೇ ಹಾಗು ಗೋಲ್ಡನ್ ಬಣ್ಣಗಳಲ್ಲಿ ಲಭ್ಯವಿರುವ ಈ ನೋಕಿಯಾ ಆಶಾ 202 ನಲ್ಲಿ 40 ಗೇಮ್ ಗಳು ಪ್ರೀ ಲೋಡೆಡ್ ಆಗಿ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot