ಲುಮಿಯಾಗೆ ಮತ್ತೊಂದು 4ಜಿ LTE ಮೊಬೈಲ್ ಎಂಟ್ರಿ

Posted By: Staff
ಲುಮಿಯಾಗೆ ಮತ್ತೊಂದು 4ಜಿ LTE ಮೊಬೈಲ್ ಎಂಟ್ರಿ

ಅತ್ಯಂತ ಉತ್ಕ್ರಷ್ಟ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಪ್ರಖ್ಯಾತಿಯಾಗಿರುವ ನೋಕಿಯಾ ಕಂಪನಿ ಇದೀಗ ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಗೆ ನೋಕಿಯಾ ಲುಮಿಯಾ 4ಜಿ LTE ಎಂಬ ಮೊಬೈಲನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಅತ್ಯಾಧುನಿಕ ಆಯ್ಕೆ ಮತ್ತು ವಿನ್ಯಾಸವನ್ನು ಈ ಮೊಬೈಲ್ ಪಡೆದುಕೊಂಡಿರುವ ನಿರೀಕ್ಷೆಯಿದೆ. ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಲುಮಿಯಾ ಮೊಬೈಲ್ ನಲ್ಲಿ 1400 MHz ಕ್ವಾಲ್ಕಂ MSM8255 ಪ್ರೊಸೆಸರ್ ಇದೆ. HTML5 ಮತ್ತು CSS3 ಇಂಟರ್ನೆಟ್ ವೆಬ್ ಬ್ರೌಸಿಂಗ್ ಸೌಲಭ್ಯವೂ ಇದರಲ್ಲಿದೆ. GSM 900/1800 MHz ಫ್ರಿಕ್ವೆನ್ಸಿಗಳೊಂದಿಗೆ ಮೊಬೈಲ್ ಕಾರ್ಯ ನಿರ್ವಹಿಸಲಿದೆ.

ನೋಕಿಯಾ ಲುಮಿಯಾ 4ಜಿ LTE ವಿಶೇಷತೆ:

* 3.7 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ

* ಅಮೊಲೆಡ್ ಬ್ಲ್ಯಾಕ್ ಕರ್ವ್ ಗ್ಲಾಸ್ ತಂತ್ರಜ್ಞಾನದ ಸ್ಕ್ರೀನ್

* 480 x 800 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್

* 116.5 x 61.2 x 12.1 ಎಂಎಂ ಸುತ್ತಳತೆ

* 142 ಗ್ರಾಂ ತೂಕ

* 512 ಎಂಬಿ RAM ಸಾಮರ್ಥ್ಯ

* 16 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* A-GPS, GPRS, EDGE

* 8.8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 3x ಡಿಜಿಟಲ್ ಝೂಮ್ ತಂತ್ರಜ್ಞಾನ, ಜಿಯೋ ಟ್ಯಾಗಿಂಗ್

* ಡ್ಯೂಯಲ್ LED ಫ್ಲಾಶ್

* ನಾಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನ

* ಬ್ಲೂಟೂಥ್, USB, 802.11 b/ g/ n ವೈ-ಫೈ ಸಂಪರ್ಕ

* 3.5 ಎಂಎಂ ಆಡಿಯೋ ಜ್ಯಾಕ್

* HDMI ಪೋರ್ಟ್

1450 mAh BV-5JW 3.7 V ಬ್ಯಾಟರಿ ಹೊಂದಿರುವ ಲುಮಿಯಾ ಮೊಬೈಲ್ 10 ಗಂಟೆ ಟಾಕ್ ಟೈಂ, 335 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಜೊತೆಗೆ55 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ಮತ್ತು 6.5 ಗಂಟೆ ವಿಡಿಯೋ ಪ್ಲೈಬ್ಯಾಕ್ ಟೈಂ ನೀಡುತ್ತದೆ. ಮೊಬೈಲ್ ನಲ್ಲಿ ಫೇಸ್ ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಸಾಮಾಜಿಕ ತಾಣಗಳ ಆಯ್ಕೆಯೂ ಇದೆ. ಪಿಡಿಎಫ್, ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಫಾರ್ಮೆಟ್ ಗಳನ್ನು ಮೊಬೈಲ್ ಬೆಂಬಲಿಸುತ್ತದೆ.

MP3, MPEG4 ಮತ್ತು WMA, WMV, AVI ಫಾರ್ಮೆಟ್ ಗಳನ್ನು ಬೆಂಬಲಿಸುವ ಆಡಿಯೋ ಮತ್ತು ವಿಡಿಯೋ ಪ್ಲೇಯರ್ ಇದ್ದು, ಗ್ರಾಫಿಕ್ ಗೆಂದು ವಿಶೇಷತೆ ಇದರಲ್ಲಿದೆ.  BMP, PNG, JPEG ಮತ್ತು TIFF ಗ್ರಾಫಿಕ್ ಫಾರ್ಮೆಟ್ ಗಳನ್ನು ಮೊಬೈಲ್ ಬೆಂಬಲಿಸುತ್ತದೆ. ಇಷ್ಟೆಲ್ಲಾ ಅತ್ಯಾಧುನಿಕ ಆಯ್ಕೆಗಳನ್ನು ಮೊಬೈಲ್ ನಿಮ್ಮ ಮುಂದಿಡಲು ಸಜ್ಜಾಗಿದೆ. ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಸ್ವಲ್ಪ ದಿನಗಳಲ್ಲಿಯೇ ಮೊಬೈಲ್ ಬೆಲೆ ತಿಳಿದುಬರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot