ನೋಕಿಯಾ ಲೂಮಿಯಾ 510ನ ಮಾಹಿತಿ ಲೀಕ್‌

Posted By: Staff
ನೋಕಿಯಾ ಲೂಮಿಯಾ 510ನ ಮಾಹಿತಿ ಲೀಕ್‌
ನೋಕಿಯಾದ ನೂತನ ಲೂಮಿಯಾ 510 ವಿಂಡೋಸ್‌ ಫೋನ್‌ನ ವಿಶೇಷತೆ ಹಾಗೂ ನಿಖರ ಬೆಲೆಯ ಮಾಹಿತಿಗಳು ಬಹಿರಂಗ ಗೊಂಡಿದ್ದು ನೋಕಿಯಾ ಸಂಸ್ಥೆಯು ನೂತನ ಸ್ಮಾರ್ಟ್‌ಫೋನ್‌ ಅನ್ನು ಲೂಮಿಯಾ 920 ಜೊತೆಯಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಹೈ ಎಂಡ್‌ ಸ್ಮಾರ್ಟ್‌ಫೊನ್‌ಗಳಾದ ಲೂಮಿಯಾ 920 ಹಾಗೂ 820 ಯೊಂದಿಗೆ ಲೋ ಎಂಡ್‌ ಸ್ಮಾರ್ಟ್‌ಫೋನ್‌ ಲೂಮಿಯಾ 510 ಬಿಡುಗಡೆಯಾಗಲಿದೆ.

ನೂತನ ಸ್ಮಾರ್ಟ್‌ಫೋನ್‌ ರೂ.8,500 ದರದಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ ಮೂಲಗಳು ತಿಳಿಸಿರುವಂತೆ ಲೂಮಿಯಾ 510 ಮೊದಲಿಗೆ ಸ್ಮಾರ್ಟ್‌ಫೋನ್ಸ್‌ ಬೇಡಿಕೆ ಹೆಚ್ಚಿರುವ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಜಾಗತಿಕವಾಗಿ 2013 ಆರಂಭದಲ್ಲಿ ಬಿಡುಗಡೆ ಯಾಗಲಿದೆ.

ಅಂದಗಾಗೆ ಸೋರಿಕೆ ಯಾಗಿರುವ ಮಾಹಿತಿಯ ಪ್ರಕಾರ ನೋಕಿಯ ಆಲೂಮಿಯಾ 510ನಲ್ಲಿ 4 ಇಂಚಿನ ದರ್ಶಕ ಹೊಂದಿದ್ದು ಪಿಕ್ಸೆಲ್ಸ್‌ ಕುರಿತಾದ ಮಾಹಿತಿ ಲಭ್ಯವಿಲ್ಲ. ಉಳಿದಂತೆ 4GB ಆಮತರಿಕ ಮೆಮೊರಿ ಹಾಗೂ 256MB RAM ಹೊಂದಿದೆ ಎಂದು ಮಾಹಿತಿ ತಿಳಿಸಿದೆ. ವಿಂಡೋಸ್‌ ಫೋನ್‌ 7.5 OS ಹೊಂದಿರುವ ಸಾಧ್ಯತೆಗಳಿದ್ದು ವಿಂಡೋಸ್‌ ಫೋನ್‌ 7.8 ಗೆ ಅಪ್ಗ್ರೇಡ್‌ ಮಾಡಬಹುದಾಗಿದೆ.

ಅಂದಹಾಗೆ ಸಾಕಷ್ಡು ನಿರೀಕ್ಷೆ ಮೂಡಿಸಿರುವ ಲೂಮಿಯಾ 510ನ ಮಾಹಿತಿ ಸೋರಿಕೆಯಿಂದಾಗಿ ಗ್ರಾಹಕರಲ್ಲಿ ಮತ್ತಷ್ಟು ಕಾತರ ಮನೆ ಮಾಡಿರುವುದಂತ್ತು ಸುಳ್ಳಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot