Subscribe to Gizbot

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಕಡಿಮೆ ಬೆಲೆಯ ನೋಕಿಯಾ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ ನ್ಯೂಸ್‌‌.ಲೂಮಿಯಾ 520 ಯಶಸ್ಸಿನಿಂದ ನೋಕಿಯಾ ಈಗ ಲೂಮಿಯಾ 525 ಸ್ಮಾರ್ಟ್‌ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು,10,399 ರೂಪಾಯಿ ಬೆಲೆ ನಿಗದಿ ಮಾಡಿದೆ.

ವಿಂಡೋಸ್‌ ಫೋನ್‌ 8 ಲೂಮಿಯಾ ಬ್ಲ್ಯಾಕ್‌ ಓಎಸ್‌ ಹೊಂದಿರುವ ಸಿಂಗಲ್‌ ಸಿಮ್‌ ಲೂಮಿಯಾ 525 ಸ್ಮಾರ್ಟ್‌‌ಫೋನ್‌‌ ಮುಂದಿನ ತಿಂಗಳಿನಲ್ಲಿ ರಿಟೇಲ್‌ ಮತ್ತು ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಾಗಲಿದೆ.

ನೋಕಿಯಾ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ ಮತ್ತು ಓಎಸ್‌:

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ


119.9*64*9.9 ಮಿ.ಮೀ ಗಾತ್ರವನ್ನು ಹೊಂದಿರುವ ಸ್ಮಾರ್ಟ್‌ಫೋನ್‌,124 ಗ್ರಾಂ ತೂಕವನ್ನು ಹೊಂದಿದೆ. ವಿಂಡೋಸ್‌ ಫೋನ್‌ 8 ಓಎಸ್‌ನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಡಿಸ್ಲ್ಪೇ ಮತ್ತು ಸೆನ್ಸರ್‌:

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ


4 ಇಂಚಿನ WVGA ಸ್ಕ್ರೀನ್‌(800 x 480 ಪಿಕ್ಸೆಲ್‌,235 ಪಿಪಿಐ) ಸ್ಮಾರ್ಟ್‌ಫೋನ್‌ ಹೊಂದಿದ್ದು, ಅಂಬಿಯಂಟ್‌ ಲೈಟ್‌ ಸೆನ್ಸರ್‌,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌ಗಳು ಸ್ಮಾರ್ಟ್‌ಫೋನಲ್ಲಿದೆ.

 ಪ್ರೊಸೆಸರ್‌,ರ್‍ಯಾಮ್‌,ಆಂತರಿಕ ಮಮೊರಿ:

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ


1 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌,1 GB ರ್‍ಯಾಮ್‌,8 GB ಆಂತರಿಕ ಮೆಮೊರಿ,64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,7 GB ಸ್ಕೈ ಡ್ರೈವ್‌ನಲ್ಲಿ ಡೇಟಾಗಳನ್ನು ಸಂಗ್ರಹ ಮಾಡಬಹುದಾಗಿದೆ.

 ಕ್ಯಾಮೆರಾ:

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ


4 x ಡಿಜಿಟಲ್‌ ಝೂಮ್‌,28 ಮಿ.ಮೀ ಫೋಕಲ್‌ ಲೆಂತ್‌ ,ಫ್ಲ್ಯಾಶ್‌ ರಹಿತ 5 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.ಮುಂದುಗಡೆ ಯಾವುದೇ ಕ್ಯಾಮೆರಾವನ್ನು ನೋಕಿಯಾ ಈ ಸ್ಮಾರ್ಟ್‌ಫೋನಿಗೆ ನೀಡಿಲ್ಲ.

 ಬ್ಯಾಟರಿ:

ನೋಕಿಯಾ ಲೂಮಿಯಾ 525 ಭಾರತದ ಮಾರುಕಟ್ಟೆಗೆ ಬಿಡುಗಡೆ


1430 mAh ಬ್ಯಾಟರಿ
ಸ್ಟ್ಯಾಂಡ್‌ ಬೈ ಟೈಂ: 14 ದಿನ
2ಜಿ ಟಾಕ್‌ ಟೈಂ:16.9 ಗಂಟೆ
3ಜಿ ಟಾಕ್‌ ಟೈಂ:10.6 ಗಂಟೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot