ನೋಕಿಯಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಕಡಿಮೆ ಬೆಲೆಯ ನೋಕಿಯಾ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್ ನ್ಯೂಸ್. ಲೂಮಿಯಾ 520 ಯಶಸ್ಸಿನಿಂದ ಬಿಡುಗಡೆ ಮಾಡಿದ್ದ ನೋಕಿಯಾ ಲೂಮಿಯಾ 525 ಸ್ಮಾರ್ಟ್‌ಫೋನ್ ಆನ್‌ಲೈನ್ ಮತ್ತು ರಿಟೇಲ್ ಅಂಗಡಿಯಲ್ಲಿ ಇಂದಿನಿಂದ ಲಭ್ಯವಿದೆ.
ವಿಂಡೋಸ್ ಫೋನ್ 8 ಲೂಮಿಯಾ ಬ್ಲ್ಯಾಕ್ ಓಎಸ್ ಹೊಂದಿರುವ ಸಿಂಗಲ್ ಸಿಮ್ ಲೂಮಿಯಾ 525 ಸ್ಮಾರ್ಟ್‌ಫೋನ್ ಜನವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಿತ್ತು.
ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನಿಗೆ 10,199 ಬೆಲೆಯನ್ನು ನಿಗದಿ ಮಾಡಿದ್ದರೆ,9,999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.ಕಪ್ಪು,ಬಿಳಿ,ಹಳದಿ,ಕೆಂಪು ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ
ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

1
119.9*64*9.9 ಮಿ.ಮೀ ಗಾತ್ರವನ್ನು ಹೊಂದಿರುವ ಸ್ಮಾರ್ಟ್‌ಫೋನ್,124 ಗ್ರಾಂ ತೂಕವನ್ನು ಹೊಂದಿದೆ. ವಿಂಡೋಸ್ ಫೋನ್ 8 ಓಎಸ್‌ನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

2
4 ಇಂಚಿನ WVGA ಸ್ಕ್ರೀನ್(800 x 480 ಪಿಕ್ಸೆಲ್,235 ಪಿಪಿಐ) ಸ್ಮಾರ್ಟ್‌ಫೋನ್ ಹೊಂದಿದ್ದು, ಅಂಬಿಯಂಟ್ ಲೈಟ್ ಸೆನ್ಸರ್,ಎಕ್ಸಲರೋ ಮೀಟರ್,ಪ್ರಾಕ್ಸಿಮಿಟಿ ಸೆನ್ಸರ್‌ಗಳು ಸ್ಮಾರ್ಟ್‌ಫೋನಲ್ಲಿದೆ.

3
1 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಡ್ಯುಯಲ್ ಕೋರ್ ಪ್ರೊಸೆಸರ್,1 GB RAM,8 GB ಆಂತರಿಕ ಮೆಮೊರಿ,64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,7 GB ಸ್ಕೈ ಡ್ರೈವ್‌ನಲ್ಲಿ ಡೇಟಾಗಳನ್ನು ಸಂಗ್ರಹ ಮಾಡಬಹುದಾಗಿದೆ.

4
4 x ಡಿಜಿಟಲ್ ಝೂಮ್,28 ಮಿ.ಮೀ ಫೋಕಲ್ ಲೆಂತ್ ,ಫ್ಲ್ಯಾಶ್ ರಹಿತ 5 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಹೊಂದಿದೆ.ಮುಂದುಗಡೆ ಯಾವುದೇ ಕ್ಯಾಮೆರಾವನ್ನು ನೋಕಿಯಾ ಈ ಸ್ಮಾರ್ಟ್‌ಫೋನಿಗೆ ನೀಡಿಲ್ಲ.

5
1430 mAh ಬ್ಯಾಟರಿ
ಸ್ಟ್ಯಾಂಡ್ ಬೈ ಟೈಂ: 14 ದಿನ
2ಜಿ ಟಾಕ್ ಟೈಂ:16.9 ಗಂಟೆ
3ಜಿ ಟಾಕ್ ಟೈಂ:10.6 ಗಂಟೆ
.


Click it and Unblock the Notifications