ಲೂಮಿಯಾ 530 ಡ್ಯುಯಲ್ ಸಿಮ್ ಪ್ರಿ ಆರ್ಡರ್ ಸ್ನ್ಯಾಪ್‌ಡೀಲ್‌ನಲ್ಲಿ

Written By:

ಕಳೆದ ತಿಂಗಳಷ್ಟೇ, ಲೂಮಿಯಾ 530 ಡ್ಯುಯಲ್ ಸಿಮ್ ಅನ್ನು ಫೋಷಿಸಿದ ನಂತರ, ಮೈಕ್ರೋಸಾಫ್ಟ್ ಸಂಸ್ಥೆಯ ಆಡಳಿತದಲ್ಲಿರುವ ನೋಕಿಯಾ ಸ್ನ್ಯಾಪ್‌ಡೀಲ್ ಮೂರನೇ ವ್ಯಕ್ತಿ ಆನ್‌ಲೈನ್ ತಾಣದೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಹೊಸ ಸ್ಮಾರ್ಟ್‌ಫೋನ್‌ಗೆ ಮುಂಚಿತ ಆದೇಶವನ್ನು ಹೊರಡಿಸಿದೆ.

ಇಕಾಮರ್ಸ್ ಸೈಟ್ ಹೇಳುವಂತೆ ಈ ಡಿವೈಸ್ ಈಗಾಗಲೇ ಉತ್ತಮ ಮಾರಾಟವನ್ನು ಪಡೆದುಕೊಂಡಿದ್ದು ಸ್ಟಾಕ್ ಎಲ್ಲಾ ಖಾಲಿಯಾಗಿದೆ ಆದರೆ ಲಭ್ಯತೆಯ ವಿಷಯಕ್ಕೆ ಬಂದಾಗ, ಆಗಸ್ಟ್ ತಿಂಗಳ ಮೂರನೇ ವಾರದಂದು ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ಲೂಮಿಯಾ 530 ಡ್ಯುಯಲ್‌ಗೆ ಸ್ನ್ಯಾಪ್‌ಡೀಲ್‌ನಲ್ಲಿ ಭಾರೀ ಬೇಡಿಕೆ

ಸ್ನ್ಯಾಪ್‌ಡೀಲ್ ಲೂಮಿಯಾ 530 ಅನ್ನು ಮಾರಾಟ ಮಾಡುವ ಆನ್‌ಲೈನ್ ಪಾಲುದಾರನಾಗಿದ್ದು ಈ ಸ್ಟೋರ್ ಯಾವುದೇ ದುಡ್ಡಿಲ್ಲದೆ ಪೂರ್ವ ಆರ್ಡರ್ ಅನ್ನು ಮಾಡಿಕೊಳ್ಳುತ್ತಿದ್ದು ಫೋನ್‌ನ ಬೆಲೆ ಕೂಡ ಇನ್ನು ತಿಳಿದು ಬಂದಿಲ್ಲ, ಆದರೆ ಮುಂಬರುವ ವಾರಗಳಲ್ಲಿ ನೋಕಿಯಾ ಡಿವೈಸ್‌ನ ಬೆಲೆಯನ್ನು ಕೂಡ ತಿಳಿಸಲಿದೆ.

ನೋಕಿಯಾ ಲ್ಯೂಮಿಯಾ 530: ಪ್ರಮುಖ ವಿಶೇಷತೆಗಳು
ಈ ಫೋನ್ 4 ಇಂಚಿನ 854x480 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬಂದಿದ್ದು 1.2 GHZ ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ ಅಡ್ರೆನೊ 302 ಜಿಪಿಯು ಇದರಲ್ಲಿದೆ ಇದರ RAM 512MB ಆಗಿದೆ. ಮತ್ತು ಇದರ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ ಫೋನ್ 8.1 ಆಗಿದೆ.

ಫೋನ್‌ನ ಕ್ಯಾಮೆರಾ ಶಕ್ತಿ 5MP ಆಗಿದ್ದು ಫ್ರಂಟ್ ಶೂಟರ್ ವಿಷಯಕ್ಕೆ ಬಂದಾಗ ಈ ಫೋನ್ ಕೊರತೆಯನ್ನು ಎದುರಿಸುತ್ತಿದೆ. ಲ್ಯೂಮಿಯಾ 530 ಆಂತರಿಕ ಮೆಮೊರಿ 4 ಜಿಬಿಯಾಗಿದ್ದು, ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇನ್ನು ಸಂಪರ್ಕ ವಿಶೇಷತೆಗಳೆಂದರೆ 3ಜಿ, ವೈಫೈ, ಬ್ಲ್ಯೂಟೂತ್ ಜಪಿಎಸ್ ಇತ್ಯಾದಿ ಆಗಿದೆ.

ಫೋನ್ ಡ್ಯುಯಲ್ ಸಿಮ್‌ನಿಂದ ಕೂಡಿದೆ. ಲೂಮಿಯಾ 530 1430 mAh ಬ್ಯಾಟರಿಯನ್ನು ಹೊಂದಿದೆ.ಇನ್ನು ಬಣ್ಣಗಳ ವಿಷಯಕ್ಕೆ ಬಂದಾಗ ಲೂಮಿಯಾ 530 ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ಕಂದು, ಆರೆಂಜ್ ಮತ್ತು ಬಿಳಿಯಲ್ಲಿ ಲಭ್ಯವಿದೆ. ಹಸಿರು ಬಣ್ಣದಲ್ಲೂ ಈ ಡಿವೈಸ್ ಲಭ್ಯವಿದ್ದು
ಅದಕ್ಕಾಗಿ ಗ್ರಾಹಕರು ಇನ್ನಷ್ಟು ದಿನ ಕಾಯಬೇಕಾದ ಅವಶ್ಯಕತೆಯಿದೆ.

ಲೂಮಿಯಾ 520 ನೋಕಿಯಾದ ಮೂಲಕ ಭಾರತದಲ್ಲಿ ಹೆಚ್ಚು ಮಾರಾಟವಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಇದರ ಬೆಲೆ 8,000 ಆಗಿದೆ. ಮಾರುಟ್ಟೆಯಲ್ಲಿ ಇದು ಅತ್ಯುತ್ತಮ ಮಾರಾಟ ಸ್ಥಾನವನ್ನು ಪಡೆದುಕೊಳ್ಳಬಹುದೆಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಈ ಫೋನ್‌ನ ಕುರಿತ ಇನ್ನಷ್ಟು ಮಾಹಿತಿಯನ್ನು ಕೆಳಗಿನ ವೀಡಿಯೊದಲ್ಲಿ ನಿಮಗೆ ಗಮನಿಸಬಹುದಾಗಿದೆ.

<center><iframe width="100%" height="360" src="//www.youtube.com/embed/igYcIMgHgV8" frameborder="0" allowfullscreen></iframe></center>

Read more about:
English summary
This article tells about Nokia lumia 530 dual sim phone pre booking starts in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot