Home
ಮೊಬೈಲ್

ನೋಕಿಯಾ ಲ್ಯೂಮಿಯಾ 530 ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆ

By Shwetha

ಸ್ವಲ್ಪ ದಿನಗಳ ಹಿಂದೆ ಅಷ್ಟೇ, ನೋಕಿಯಾದ ಮುಂಬರಲಿರುವ ಸ್ಮಾರ್ಟ್‌ಫೋನ್ RM-1018 ಎಫ್‌ಸಿಸಿ ಡೇಟಾ ಬೇಸ್‌ನಲ್ಲಿ ಪಟ್ಟಿಯಾಗಿದ್ದು ತಿಳಿದೇ ಇದೆ. ಈ ನಿರ್ದಿಷ್ಟ ಮಾಡೆಲ್ ನೋಕಿಯಾ ಲ್ಯೂಮಿಯಾ 530 ಸ್ಮಾರ್ಟ್‌ಫೋನ್ ಎಂದು ವದಂತಿಗಳಲ್ಲಿ ಹರಡಿತ್ತು . ಆದರೆ ಇದು ಲ್ಯೂಮಿಯಾ 530 ಗಿಂತ ಭಿನ್ನವಾಗಿದ್ದು ಇದರ ಚಿತ್ರ ಆನ್‌ಲೈನ್‌ನಲ್ಲಿ ಕಂಡುಬಂದಿದೆ.

ಈ ಹ್ಯಾಂಡ್‌ಸೆಟ್ ಈಗಾಗಲೇ ಆನ್‌ಲೈನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು ಮತ್ತು ಕೊನೆಯದಾಗಿ ಆನ್‌ಲೈನ್‌ನಲ್ಲಿ ಇದರ ಇಮೇಜ್ ಕಂಡುಬಂದಿದೆ. ಚೀನದಿಂದ ಬಂದಿರುವ ಡಿವೈಸ್‌ನ ಚಿತ್ರ ಹ್ಯಾಂಡ್‌ಸೆಟ್ ಬಣ್ಣವನ್ನು ಕೂಡ ತೋರಿಸಿದ್ದು ಇದು ಆರೆಂಜ್ ಬಣ್ಣದಲ್ಲಿದೆ ಎಂಬುದನ್ನು ದೃಢಪಡಿಸಿದೆ.

ನೋಕಿಯಾ ಲ್ಯೂಮಿಯಾ 530 ಚಿತ್ರಗಳು ಆನ್‌ಲೈನ್‌ನಲ್ಲಿ

ಈ ಅಘೋಷಿತ ಸ್ಮಾರ್ಟ್‌ಫೋನ್ ಹಳೆಯ ಲ್ಯೂಮಿಯಾ 520 ಮತ್ತು 525 ಮಾದರಿಗಳನ್ನು ನೆನಪಿಗೆ ತರುವಂತಿದ್ದು ಅದೇ ಮಾದರಿಯ ಪ್ಲಾಸ್ಟಿಕ್ ಹಿಂಭಾಗವನ್ನು ಹೊಂದಿದೆ. ಈ ಫೋನ್ ವಿಂಡೋಸ್‌ನ 8.1 ಓಸ್ ಅನ್ನು ಹೊಂದಿದ್ದು ಇದರ ಸ್ಕ್ರೀನ್ 4.3 ಇಂಚನ್ನು ಹೊಂದಿದೆ, 480x800 ಪಿಕ್ಸೆಲ್ ರೆಸಲ್ಯೂಶನ್‌ನಲ್ಲಿ ಫೋನ್ ಬಂದಿದ್ದು, ಇದರ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿಲ್ಲ. ಇದು ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಅನ್ನು ಹೊಂದಿದ್ದು, RAM ಸಾಮರ್ಥ್ಯ 512 ಎಮ್‌ಬಿಯಾಗಿದೆ. ಫೋನ್ ಡ್ಯುಯೆಲ್ ಸಿಮ್ ಬೆಂಬಲವನ್ನು ಕೂಡ ಪಡೆದುಕೊಂಡಿದೆ.

ನೋಕಿಯಾ ಲ್ಯೂಮಿಯಾ 530 ಚಿತ್ರಗಳು ಆನ್‌ಲೈನ್‌ನಲ್ಲಿ

ಲ್ಯೂಮಿಯಾ 635 ಅನ್ನು ನೋಡುತ್ತಿರುವಾಗ, ಇದು ಹೊಸತನದ ನೋಟವನ್ನು ಬೀರುತ್ತಿರುವುದಂತೂ ಸತ್ಯ. ಲ್ಯೂಮಿಯಾ 530 ದರವೂ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿರುವ ಅತ್ಯಂತ ಕಡಿಮೆ ದರದ ವಿಂಡೋಸ್ ಫೋನ್ ಎಂಬ ಹೆಗ್ಗಳಿಕೆಗೆ ಈ ಡಿವೈಸ್ ಪಾತ್ರವಾಗಿದೆ.

ಈ ಫೋನ್ ಅಷ್ಟೊಂದು ಆಕರ್ಷಕವಾಗಿಲ್ಲ ಆದರೆ ಇದೊಂದು ಬಜೆಟ್ ಸ್ನೇಹಿ ಫೋನ್ ಎಂಬುದು ಮಾತ್ರ ಗ್ಯಾರಂಟಿಯಾಗಿದೆ.

ಇನ್ನಷ್ಟು ವಿವರಗಳು ಅಂದರೆ ದರ ವಿಶೇಷತೆಗಳು ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿಲ್ಲದೇ ಇರುವುದರಿಂದ ನೀವು ಸ್ವಲ್ಪ ಸಮಯ ಕಾಯುವುದು ಅನಿವಾರ್ಯವಾಗಿದೆ.

ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!
ಮೂಲ

Best Mobiles in India

English summary
This article tells that Nokia lumia 530 iamges are caught in wild
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+