ನೋಕಿಯಾದಿಂದ ಮತ್ತೆರಡು ಲುಮಿಯಾ ಸ್ಮಾರ್ಟ್ ಫೋನ್

Posted By: Staff
ನೋಕಿಯಾದಿಂದ ಮತ್ತೆರಡು ಲುಮಿಯಾ ಸ್ಮಾರ್ಟ್ ಫೋನ್

ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ತನ್ನದೇ ವಿಶಿಷ್ಟ ಸ್ಥಾನ ಹೊಂದಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಗಳನ್ನು ನೀಡುತ್ತಾ ಬಂದಿರುವ ನೋಕಿಯಾ ತನ್ನ ಲುಮಿಯಾ ಸಿರೀಸ್ ಸ್ಮಾರ್ಟ್ ಫೋನ್ ಗಳ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದೆ. ಈಗ ಲುಮಿಯಾ ಪಟ್ಟಿಯಲ್ಲಿ ಮತ್ತೆರಡು ಮೊಬೈಲ್ ಗಳು ಸೇರಿಕೊಂಡಿವೆ.

ನೂತನ ನೋಕಿಯಾ ಲುಮಿಯಾ 601 ಮತ್ತು 603 ಮೊಬೈಲ್ ಗಳು ಗ್ರಾಹಕರ ಮೆಚ್ಚುಗೆ ಗಳಿಸುವ ಅನೇಕ ಆಯ್ಕೆಗಳನ್ನು ಪಡೆದುಕೊಂಡಿವೆ. ನೋಕಿಯಾ 603 ಮೊಬೈಲ್ ಸಿಂಬಿಯಾನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಹಾಗೂ ನೋಕಿಯಾ 601 ಮೊಬೈಲ್ ವಿಂಡೋಸ್ ಫೋನ್ 7.5 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.  ನೋಕಿಯಾ 603 ಮೊಬೈಲ್ 1GHz ಪ್ರೊಸೆಸರ್ ಮತ್ತು ನೋಕಿಯಾ 601 ಮೊಬೈಲ್ 1GHz ಕ್ವಾಲ್ಕಂ ಸ್ನಾಪ್ ಡ್ರಾಗನ್ MSM 8255 ಪ್ರೊಸೆಸರ್ ಪಡೆದುಕೊಂಡಿದೆ.

ನೋಕಿಯಾ 603 ಮೊಬೈಲ್ ವಿಶೇಷತೆ:

* 113.5 x 57.1 x 12.7 ಎಂಎಂ ಸುತ್ತಳತೆ

* 109.6 ಗ್ರಾಂ ತೂಕ

* 3.5 ಇಂಚಿನ ಡಿಸ್ಪ್ಲೇ, 360 x 640 ಪಿಕ್ಸಲ್ ರೆಸೊಲ್ಯೂಷನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* ಜಿಯೋ ಟ್ಯಾಗಿಂಗ್, ಫೇಸ್ ಡಿಟೆಕ್ಷನ್

* 512 ಎಂಬಿ RAM ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣಗೆ ಮೈಕ್ರೊ SD ಕಾರ್ಡ್ ಆಯ್ಕೆ

ನೋಕಿಯಾ 601 ಮೊಬೈಲ್ ವಿಶೇಷತೆ:

* 3.7 ಇಂಚಿನ ಡಿಸ್ಪ್ಲೇ

* WVGA ಟಚ್ ಸ್ಕ್ರೀನ್ ಡಿಸ್ಪ್ಲೇ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 512 ಎಂಬಿ RAM ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣಗೆ ಮೈಕ್ರೊ SD ಕಾರ್ಡ್ ಆಯ್ಕೆ

ಎರಡೂ ಮೊಬೈಲ್ ಗಳಲ್ಲಿ ಸಂಪರ್ಕಕ್ಕೆಂದು ಬ್ಲೂಟೂಥ್, 802.11 b/ g/ n ವೈ-ಫೈ, USB ನೀಡಲಾಗಿದೆ. ಎರಡೂ ಸ್ಮಾರ್ಟ್ ಫೋನ್ ಗಳಲ್ಲಿ ಉತ್ತಮ ಸಂಗೀತ ಸ್ಪಷ್ಟತೆ ನೀಡಲು 3.5 ಎಂಎಂ ಆಡಿಯೋ ಜ್ಯಾಕ್ ಇದೆ. ಆಡಿಯೋ ಮತ್ತು ವಿಡಿಯೋ ಪ್ಲೇಯರ್ MP3, MPEG4 ಮತ್ತು AAC+ ಮುಂತಾದ ಫಾರ್ಮೆಟ್ ಗಳನ್ನು ಬೆಂಬಲಿಸಲಿದೆ. ಜೊತೆಗೆ HDMI ಔಟ್ ಪುಟ್ ಪೋರ್ಟ್ ಇದೆ.

ನೋಕಿಯಾ ಲುಮಿಯಾ 601 ಮೊಬೈಲ್ ಲೀಥಿಯಂ ಬ್ಯಾಟರಿ, ನೋಕಿಯಾ 603 ಮೊಬೈಲ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 7 ಗಂಟೆ ಟಾಕ್ ಟೈಂ ಮತ್ತು 490 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ನೋಕಿಯಾ 603 ಮೊಬೈಲ್ ಬೆಲೆ ಸುಮಾರು 20,000ರು ಎಂದು ಅಂದಾಜಿಸಲಾಗಿದ್ದು, ನೋಕಿಯಾ ಲುಮಿಯಾ 601 ಬೆಲೆಯನ್ನು ಅಧೀಕೃತವಾಗಿ ಇನ್ನೂ ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot