Subscribe to Gizbot

ನೋಕಿಯಾ ಲ್ಯೂಮಿಯಾ 630 ಇನ್ನು ರೂ. 11500 ಕ್ಕೆ

Written By:

ನೋಕಿಯಾ ಕೊನೆಗೂ ಲ್ಯೂಮಿಯಾ 630 ಅನ್ನು ರೂ 11500 ಕ್ಕೆ ಭಾರತದಲ್ಲಿ ಲಾಂಚ್ ಮಾಡಲು ನಿರ್ಧರಿಸಿದೆ. ಮೈಕ್ರೋಸಾಫ್ಟ್‌ನ ವಿಂಡೋಸ್ 8.1 ಓಎಸ್ ಚಾಲನೆಯಾಗುವಂತಹ ಫೋನ್ ಎಂಬ ಹೆಗ್ಗಳಿಕೆ ಲ್ಯೂಮಿಯಾ ಪಾತ್ರವಾಗಲಿದೆ.

ಮೇ 14 ರಂದು ಈ ಫೋನ್ ಎಲ್ಲಾ ಅಂಗಡಿಗೂ ಬರುವ ಸಾಧ್ಯತೆ ಇದ್ದು ಸಿಂಗಲ್ ಸಿಮ್ ಬೆಂಬಲಿಸುವ ಲ್ಯೂಮಿಯಾ 630 ಅನ್ನು ಈ ತಿಂಗಳ ನಂತರ ರೂ 10,500 ಕ್ಕೆ ಲಾಂಚ್ ಮಾಡುವ ನಿರೀಕ್ಷೆ ಇದೆ. ಇದರಲ್ಲಿ ಹೆಚ್ಚಿನ ಎಲ್ಲಾ ವೈಶಿಷ್ಟ್ಯಗಳಿದ್ದು ವರ್ಲ್ಡ್ ಫ್ಲೋ, ವೇಗವಾದ ಕೀಬೋರ್ಡ್, ಹೊಸದಾದ ಏಕ್ಷನ್ ಸೆಂಟರ್ ಹೀಗೆ ಇನ್ನಷ್ಟು ಫೀಚರ್‌ಗಳು ನಿಮ್ಮ ಕಣ್ತುಂಬಲಿವೆ.

Lumia 630 ಇದು ಹೆಚ್ಚು ಸುಂದರವಾದ ವಿಶಿಷ್ಟತೆಗಳನ್ನು ಹೊಂದಿದೆ 4.5- ಇಂಚಿನ ClearBlack IPS LCD ಡಿಸ್‌ಪ್ಲೇ ಇದರಲ್ಲಿದ್ದು FWVGA ರೆಸಲ್ಯೂಶನ್ 854 x 480 ಪಿಕ್ಸೆಲ್‌ಗಳಾಗಿವೆ. ಇದರ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 3 ಅಡಿಯಲ್ಲಿದೆ ಇದರ ಡೆನ್ಸಿಟಿ 221 ಪಿಪಿಐ ಆಗಿದೆ. 129.5mm x 66.7mm x 9.2mm ಇದರ ಅಳತೆಯಾಗಿದ್ದಯ ತೂಕ 134 ಗ್ರಾಮ್‌ಗಳಾಗಿದೆ. ಇದು 1.2Ghz ಕ್ವಾಡ್ - ಕೋರ್ ಸ್ನ್ಯಾಪ್‌ಡ್ರಾಗನ್ 400 ಸಿಪಿಯು ಅನ್ನು ಬೆಂಬಲಿಸುತ್ತದೆ. ಇದರ ಆರಂಭ ಮಟ್ಟ 512 ಎಂಬಿಯಾಗಿದೆ.

ಈ ಫೋನ್‌ನ ಇನ್ನಷ್ಟು ವೈಶಿಷ್ಟ್ಯಗಳು ಕೆಳಗಿನ ಸ್ಲೈಡ್‌ಗಳಲ್ಲಿ ನಿಮಗಾಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಡ್ಯುಯೆಲ್ ಸಿಮ್

#1

ಇದು ಬೆಸ್ಟ್ ಡ್ಯುಯೆಲ್ ಸಿಮ್ ಅನುಭವವನ್ನು ಸ್ಮಾರ್ಟ್‌ಫೋನ್‌ನಲ್ಲಿ ತರಲಿದೆ. ನಿಮಗೆ ಕರೆಗಳು, ಕ್ಯಾಲೆಂಡರ್ ಹೀಗೆ ಬೇರೆ ಪ್ರೊಗ್ರಾಮ್‌ಗಳಿಗೆ ಬೇರೆ ಬೇರೆ ಬಣ್ಣಗಳನ್ನು ಇಡಬಹುದಾಗಿದ್ದು ನಿಮಗೆ ವ್ಯತ್ಯಾಸವುಂಟಾಗುವುದನ್ನು ಇದು ಕಡಿಮೆಗೊಳಿಸಲಿದೆ.

ಪ್ರೊಸೆಸರ್ ಹಾಗೂ ಅಪ್ಲಿಕೇಶನ್‌ಗಳು

#2

ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ನಿಮಗೆ ವೇಗವಾಗಿರುವ ಸಾಮಾಜಿಕ ಅನುಭವವನ್ನು ನೀಡಲಿದ್ದು ಇಂಟರ್ನೆಟ್ ಎಕ್ಸ್‌ಪ್ಲೋರರ್, ವಾಟ್ಸಾಪ್, ವಿ ಚಾಟ್ ಮುಂತಾದವುಗಳನ್ನು ಯಾವುದೇ ತೊಡಕಿಲ್ಲದೆ ನಿಮಗೆ ಸಂಪರ್ಕ ಪಡಿಸುತ್ತದೆ. ಎಕ್ಸ್ ಬಾಕ್ಸ್ ಗೇಮ್ಸ್, ಮಿಕ್ಸ್ ರೇಡಿಯೋ, ಉಚಿತ ಸಂಗೀತ ಇದರಲ್ಲಿದ್ದು ಹಾಗೂ ವೀಕ್ಷಣೆಗೆ ಉತ್ತಮ ವಿಸಿಬಲಿಟಿಯನ್ನು ನಿಮಗೆ ನೀಡಲಿದೆ.

ಹೊಸ ಸೆನ್ಸಾರ್ ಕೋರ್

#3

ಇದು ದೀರ್ಘ ಬ್ಯಾಟರಿ ವ್ಯವಸ್ಥೆಯನ್ನು ಫೋನ್‌ಗೆ ನೀಡಲಿದ್ದು ನಿಮಗೆ ವ್ಯಾಯಾಮ ಹಾಗೂ ಫಿಟ್‌ನೆಸ್‌ಗೆ ಸಂಬಂಧಿಸಿದಂತಹ ವೀಡಿಯೋಗಳನ್ನು ಯಾವುದೇ ತೊಡಕಿಲ್ಲದೆ ವೀಕ್ಷಿಸಬಹುದು.

ಗ್ರಾಹಕೀಯಗೊಳಿಸಬಹುದಾದ ಶೆಲ್

#4

ಇದರ ಚಾರ್ಜರ್ ಕೂಡ ಹೆಚ್ಚು ಆಕರ್ಷಕವಾಗಿದ್ದು ನಿಮಗೆ ಗಾಢ ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣದಲ್ಲಿ ದೊರೆಯಲಿದೆ. ನಿಮಗೆ ಯುಎಸ್‌ಡಿ ಕಾರ್ಡ್ ಅನ್ನು ಬಳಸಿಕೊಂಡು 128 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಇದು ಜನರ ಹಾಗೂ ಸ್ಥಳಗಳ ಚಿತ್ರಗಳು, ಸಂಗೀತ, ನಕ್ಷೆಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಹೆಚ್ಚುವರಿ ಲಕ್ಷಣಗಳು ಮತ್ತು ಕೊಡುಗೆಗಳು

#5

ಇದು ಪೂರ್ವ ಲೋಡ್ ಆಗಿರುವ ವೀಡಿಯೋ ಅಪ್ಲಿಕೇಶನ್ ಬಾಕ್ಸ್‌ನೊಂದಿಗೆ ಬಂದಿದ್ದು ಇದರಲ್ಲಿ ಹಾಲಿವುಡ್, ಬಾಲಿವುಡ್ ಸಿನಿಮಾಗಳನ್ನು ನಿಮಗೆ ಒದಗಿಸಲಿದೆ. ಇದು 2 ತಿಂಗಳು ಉಚಿತವಾಗಿದ್ದು ನಿಮಗೆ ರೂ 2000 ಬೆಲೆಯ ಆರು ಉಚಿತ ಗೇಮ್‌ಗಳನ್ನು ನೀಡಲಿದೆ. ಹಾಗೂ ಐಪಿಎಲ್ ನೋಡುವ ವಿಶಿಷ್ಟ ಅವಕಾಶವನ್ನು ಈ ಫೋನ್ ನಿಮಗೆ ಒದಗಿಸಲಿದೆ. ಇದಲ್ಲದೆ 3 ಜಿ ಡೇಟಾವನ್ನು 2 ತಿಂಗಳುಗಳ ಕಾಲ ಲ್ಯೂಮಿಯಾ 630 ಯಲ್ಲಿ ನಿಮಗೆ ಆನಂದಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot