ಆನ್‌ಲೈನ್ ದರ ರೂ 11,329 ಕ್ಕೆ ಲ್ಯೂಮಿಯಾ 630 ಡ್ಯುಯೆಲ್

By Shwetha
|

ಮೈಕ್ರೋಸಾಫ್ಟ್ ಸ್ವಾಮ್ಯದಲ್ಲಿರುವ ನೋಕಿಯಾ ತನ್ನ ಇತ್ತೀಚಿನ ಸೆಟ್‌ಗಳಲ್ಲಿ ವಿಂಡೋಸ್ ಮೊಬೈಲ್ ಓಎಸ್ ಅನ್ನು ಹೊರತರುತ್ತಿದೆ. ಮೈಕ್ರೋಸಾಫ್ಟ್ ಆಧಾರಿತ ಓಎಸ್ ಅನ್ನು ತನ್ನ ಮುಂಬರುವ ಫೋನ್‌ಗಳಲ್ಲಿ ತರುವ ಒಪ್ಪಂದವನ್ನು ಮೈಕ್ರೋಸಾಫ್ಟ್‌ನೊಂದಿಗೆ ನೋಕಿಯಾ ಮಾಡಿಕೊಂಡಿದೆ.

ನೋಕಿಯಾದ ಮಧ್ಯಂತರ ಕ್ರಮಾಂಕದ ಹ್ಯಾಂಡ್‌ಸೆಟ್ ಲ್ಯೂಮಿಯಾ 630 ಯನ್ನು ತನ್ನದೇ ಆದ ಆನ್‌ಲೈನ್ ತಾಣಗಳಲ್ಲಿ ನೋಕಿಯಾ ಈಗ ವಿಕ್ರಯಿಸುತ್ತಿದೆ. ಈಗಾಗಲೇ ಲ್ಯೂಮಿಯಾ 630 ಯನ್ನು ಅಧಿಕೃತವಾಗಿ ಘೋಷಿಸಿರುವ ನೋಕಿಯಾ ದರವನ್ನು ನಿಗದಿಪಡಿಸಿದ್ದು, ಸಿಂಗಲ್ ಸಿಮ್ ಇರುವ ಲ್ಯೂಮಿಯಾ ನಿಮಗೆ ರೂ. 10,500 ಕ್ಕೆ ಲಭ್ಯವಿದ್ದು ಡ್ಯುಯೆಲ್ ಸಿಮ್ ಫೋನ್ ರೂ. 11,500 ಕ್ಕೆ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.

ಆನ್‌ಲೈನ್ ದರ ರೂ 11,329 ಕ್ಕೆ ಲ್ಯೂಮಿಯಾ 630 ಡ್ಯುಯೆಲ್

ಭಾರತದಲ್ಲಿರುವ ಬಳಕೆದಾರರು ನೋಕಿಯಾ ಲ್ಯೂಮಿಯಾ 630 ಯನ್ನು ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು ಆನ್‌ಲೈನ್‌ನಲ್ಲಿ ಇದರ ಬೆಲೆ ರೂ. 11,329 ಆಗಿದೆ. ಎರಡು ಸಿಮ್‌ಗಳಿರುವ ನೋಕಿಯಾ ಲ್ಯೂಮಿಯಾ 630 ಭಾರತದಲ್ಲಿ ಇದೀಗ ಲಭ್ಯವಿದ್ದು ಸಿಂಗಲ್ ಸಿಮ್ ಸೆಟ್‌ಗಳು ಮುಂದಿನ ದಿನಗಳಲ್ಲಿ ನಿಮ್ಮ ಕೈ ಸೇರಲಿದೆ.

ಲ್ಯೂಮಿಯಾದ ವೈಶಿಷ್ಟ್ಯತೆಗಳು ನಿಜಕ್ಕೂ ಮನಸೆಳೆಯುವಂತಿದ್ದು ನಿಮಗೆ ಬಳಸಲು ಸುಲಭವಾಗಿರವಂತಿದೆ. 4.5-ಇಂಚಿನ IPS ಡಿಸ್‌ಪ್ಲೇಯನ್ನು ಇದು ಹೊಂದಿದ್ದು ಇದರ ರೆಸಲ್ಯೂಶನ್ 854 x 480 ಆಗಿದೆ. 1.2GHz ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಅನ್ನು ಈ ಫೋನ್‌ನಲ್ಲಿ ನೀವು ಪಡೆಯಬಹುದಾಗಿದ್ದು 512ಎಂಬಿ ರ್‌ಯಾಮ್‌ನೊಂದಿಗೆ ಈ ಫೋನ್ ವಿಶಿಷ್ಟವಾಗಿದೆ. 8ಜಿಬಿ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಈ ಫೋನ್‌ಗಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ನಿಮಗೆ 128ಜಿಬಿಗೆ ವಿಸ್ತರಿಸಬಹುದು.

ಎಲ್‌ಇಡಿ ಫ್ಲ್ಯಾಶ್ ಇಲ್ಲದ 5 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಫೋನ್‌ಗಿದ್ದು ಮುಂಭಾಗ ಕ್ಯಾಮೆರಾವನ್ನು ದುರಾದೃಷ್ಟವಶಾತ್ ಈ ಫೋನ್ ಹೊಂದಿಲ್ಲ. ಇದು 720 ಪಿ ಎಚ್‌ಡಿ ಸ್ವರೂಪದಲ್ಲಿ ವೀಡಿಯೋಗಳನ್ನು ದಾಖಲಿಸುತ್ತದೆ. ಸಿಂಗಲ್ ಹಾಗೂ ಡ್ಯುಯೆಲ್ ಸಿಮ್ ಅವತರಣಿಕೆಯ ನೋಕಿಯಾ ಲ್ಯೂಮಿಯಾ 630 ವಿಂಡೋಸ್ ಫೋನ್ 8.1 ಮೊಬೈಲ್ ಓಎಸ್ ಅನ್ನು ಹೊಂದಿದೆ. ಇದರಲ್ಲಿ ಅಧಿಸೂಚನೆ ಕೇಂದ್ರವಿದ್ದು ಹೆಚ್ಚು ಪರ್ಸನಲೈಸೇಶನ್ ಆಯ್ಕೆಗಳಿವೆ ಹಾಗೂ ಹೆಚ್ಚು ಸುಧಾರಿತ ಕೀಬೋರ್ಡ್ ಅನುಭವ ನಿಮಗುಂಟಾಗಲಿದೆ.

ಅಷ್ಟಲ್ಲದೇ ಈ ಫೋನ್‌ 3 ಜಿ, ವೈ-ಫೈ, ಬ್ಲೂಟೂತ್, GPS, HERE Maps, ಡ್ಯುಯೆಲ್ ಸಿಮ್ ಹಾಗೂ ದೊಡ್ಡ 1,830mAh ಬ್ಯಾಟರಿಯನ್ನು ಒಳಗೊಂಡಿದೆ. ಇಂತದ್ದೇ ವಿಶಿಷ್ಟತೆಗಳನ್ನು ಹೊಂದಿ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಮೋಟೋರೋಲಾ ಮೋಟೋ ಜಿ, ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ ಮಿನಿ A200 ಗೆ ನೋಕಿಯಾ ಲ್ಯೂಮಿಯಾ 630 ಉತ್ತಮ ಪೈಪೋಟಿ ನೀಡಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X